Yash ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಅಭಿಮಾನಿಗಳು ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ತಮ್ಮ ನೆಚ್ಚಿನ ನಾಯಕ ನಟನ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡು ಕುಳಿತಿದ್ದಾರೆ ಆದರೆ ಅವರಿಗೆ ಅಧಿಕೃತ ಎನಿಸುವಂತಹ ಒಂದೇ ಒಂದು ಸುಳಿವುಗಳು ಕೂಡ ಸಿಗುತ್ತಿಲ್ಲ. ಅಭಿಮಾನಿಗಳ ಮನಸ್ಸಿನಲ್ಲಿ ಬೇಸರವನ್ನು ಮೂಡಿಸಿದೆ.
ಎಲ್ಲಕ್ಕಿಂತ ಪ್ರಮುಖವಾಗಿ ರಾಕಿಂಗ್ ಸ್ಟಾರ್ ಯಶ್ ರವರ ಮುಂದಿನ ಸಿನಿಮಾದ ಬಗ್ಗೆ ಒಂದು ಸುಳಿವು ಸಿಕ್ಕಿತ್ತು ಅದೇನೆಂದರೆ ಅವರು ಬಾಲಿವುಡ್ ಚಿತ್ರರಂಗದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು. ಇದು ಬಹುತೇಕ ನಿಜ ಎಂಬುದು ಕೂಡ ಸಾಬೀತಾಗಿತ್ತು.
ಆದರೆ ಈಗ ಬಾಲಿವುಡ್ ನಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ರವರು ನಿತೇಶ್ ತಿವಾರಿ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವಂತಹ ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂಬುದು ಕನ್ಫರ್ಮ್ ಆಗಿದೆ. ನನ್ನ ಅಭಿಮಾನಿಗಳು ಯಾವತ್ತೂ ಕೂಡ ನನ್ನನ್ನು ನೆಗೆಟಿವ್ ಪಾತ್ರದಲ್ಲಿ ಕಾಣಲು ಇಷ್ಟಪಡುವುದಿಲ್ಲ ಹೀಗಾಗಿ ನಾನು ಈ ಪಾತ್ರವನ್ನು ಮಾಡುವುದಿಲ್ಲ ಎಂಬುದಾಗಿ ಯಶ್(Yash) ಹೇಳಿದ್ದಾರೆ.
ಕೊನೆ ಪಕ್ಷ ಈ ಸಿನಿಮಾವಾದರೂ ಯಶ್ ಅವರು ಮಾಡುತ್ತಾರೆ ಎಂಬುದಾಗಿ ಅವರ ಅಭಿಮಾನಿಗಳು ಭಾವಿಸಿದ್ದರು ಆದರೆ ಅದು ಕೂಡ ಈಗ ಹುಸಿಯಾಗಿದೆ. ಇದು ಈಗ ಮತ್ತೆ ಯಶ್ ಅಭಿಮಾನಿಗಳನ್ನು ಬೇಸರಕ್ಕೆ ತಳ್ಳಿದೆ ಎಂದು ಹೇಳಬಹುದು. ನಿಮ್ಮ ಪ್ರಕಾರ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.