Yash ಕೆಜಿಎಫ್(KGF) ಸಿನಿಮಾಗಳ ಮೂಲಕ ರಾಕಿಂಗ್ ಸ್ಟಾರ್ ಯಶ್ ರವರು ಕೇವಲ ನ್ಯಾಷನಲ್ ನಲ್ಲಿ ಮಾತ್ರವಲ್ಲದೆ ಗ್ಲೋಬಲ್ ಲೆವೆಲ್ ಸ್ಟಾರ್ ಆಗಿದ್ದಾರೆ ಎಂದು ಹೇಳಬಹುದಾಗಿದೆ. ತಮ್ಮ ಸಿನಿಮಾಗಳನ್ನು ಆಡಿಯನ್ಸ್ ಗೆ ಹೇಗೆ ರೀಚ್ ಮಾಡಿಸಬಹುದೆ ಎನ್ನುವ ರಹಸ್ಯ ಕೂಡ ಅವರಿಗೆ ತಿಳಿದುಬಂದಿದೆ. ಇದ್ರಲ್ಲಿ ಯಾವುದೇ ಅನುಮಾನವಿಲ್ಲ.
ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿ ಸಿನಿಮಾಗಳಲ್ಲಿ ಕೂಡ ಹೊಸ ಹೊಸ ನಿರ್ದೇಶಕರಿಗೆ ಅವಕಾಶ ನೀಡುವ ಮೂಲಕ ಅವರಿಗೂ ಹಾಗೂ ತಮಗೂ ಇಬ್ಬರಿಗೂ ಕೂಡ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಬೇಕು ಎನ್ನುವ ಕಂಟೆಂಟ್ ಅನ್ನು ಜನರಿಗೆ ತೋರಿಸಲು ಇಷ್ಟಪಡುತ್ತಾರೆ. ಇದೇ ಕಾರಣಕ್ಕಾಗಿ ಅವರು ಸಿನಿಮಾದಿಂದ ಸಿನಿಮಾ ಗೆ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಎಲ್ಲಕ್ಕಿಂತ ಪ್ರಮುಖವಾಗಿ ಇತ್ತೀಚಿಗಷ್ಟೇ ರಾಕಿಂಗ್ ಸ್ಟಾರ್ ಯಶ್ ರವರು ಇತ್ತೀಚಿಗೆ ಅಷ್ಟೇ ಮಲೇಶಿಯಾಗೆ(Malaysia) ಹೋಗಿದ್ದು ಅಲ್ಲಿ ಅವರ ಜನಪ್ರಿಯತೆ ಯಾವ ಮಟ್ಟದಲ್ಲಿದೆ ಎಂದರೆ ಅಲ್ಲಿ ಹೋದಾಗ ಲೀಕ್ ಆಗಿರುವ ಫೋಟೋಗಳಿಂದಲೇ ತಿಳಿದುಕೊಳ್ಳಬಹುದಾಗಿದೆ. ಅಲ್ಲಿ ಕೂಡ ಕರ್ನಾಟಕದ ಹಾಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ ಎಂಬುದಾಗಿ ತಿಳಿದುಬಂದಿದೆ.
ಅಲ್ಲಿ ಹೋದಾಗ ಯಶ್ ಅವರು ಈಗಾಗಲೇ ತಮ್ಮ ಮುಂದಿನ ಸಿನಿಮಾದ ಬಗ್ಗೆ ತಯಾರಿ ನಡಿತಾ ಇದೆ ಖಂಡಿತವಾಗಿ ನಿಮ್ಮನ್ನು ಹೆಚ್ಚು ದಿನ ಕಾಯಿಸುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಹೀಗಾಗಿ ಯಶ್ 19ನೇ(Yash 19) ಸಿನಿಮಾದ ಬಗ್ಗೆ ನಮಗೆ ಅತಿ ಶೀಘ್ರದಲ್ಲೇ ಅನೌನ್ಸ್ಮೆಂಟ್ ಬರಲಿದೆ ಎಂಬುದಾಗಿ ತಿಳಿದು ಬಂದಿದೆ. ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.