ಅಂದು ಕನ್ನಡ ಪತ್ರಕರ್ತನಿಂದ ಅಲ್ಲು ಅರ್ಜುನ್ ಗೆ ಅವಮಾನ ಇಂದು ಯಶ್ ಗೆ ತೆಲುಗು ಪತ್ರಕರ್ತನಿಂದ ಅದೇ ರೀತಿ ಅವಮಾನ

ಈಗಿನ ವರ್ತಮಾನದಲ್ಲಿ ಸಿನಿಮಾ ಭಾಷೆಗು ಮೀರಿದ ಗಡಿಯನ್ನು ತಲುಪುತ್ತಿದೆ. ಒಂದು ಭಾಷೆ ಈಗ ಸಿನಿಮಾ ಮಾಡಲ್ಲ ಎಲ್ಲಾ ಭಾಷೆಗಳಿಗೆ ಒಂದು ಸಿನಿಮಾವನ್ನು ಮಾಡುವ ಹಂತಕ್ಕೆ ನಾವೆಲ್ಲ ತಲುಪಿದ್ದೇವೆ. ಸಿನಿಮಾಗಳಲ್ಲಿ ಏಕತೆ ಭಾವ ಮೂಡಿ ರುವ ಅಂಶಗಳು ಕಾಣುತ್ತಿದೆ. ಸಿನಿಮಾದ ವಿಚಾರದಲ್ಲಿ ಭಾಷೆ ಒಂದು ಮಾಧ್ಯಮ ಅಷ್ಟೆ. ಮನೋರಂಜನೆಯೇ ಸಿನಿಮಾದ ಜೀವಾಳ ಎಂಬುದು ಸಾಬೀತಾಗುತ್ತಿದೆ.

ಇತ್ತೀಚೆಗೆ ತೆರೆಕಂಡ ತೆಲುಗು ಚಿತ್ರ ಪುಷ್ಪಾ ಇದಕ್ಕೆ ಉದಾಹರಣೆಯಾಗಿದೆ. ಪುಷ್ಪಾ ಚಿತ್ರದಲ್ಲಿ ನಾಯಕನಾಗಿ ಅಲ್ಲು ಅರ್ಜುನ್ ಮತ್ತು ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರು ಅಭಿನಯಿಸಿದ್ದರು. ಈ ಚಿತ್ರ ನಾನಾ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ತೆಲುಗಿನ ಮೂಲದ ಈ ಚಿತ್ರ ಕನ್ನಡ ಭಾಷೆಯಲ್ಲಿ ಕೂಡ ತೆರೆಕಂಡಿತ್ತು. ಈ ಚಿತ್ರ ಸೂಪರ್ ಹಿಟ್ ಆಗಿದೆ. ಈ ಚಿತ್ರ ತೆರೆಕಾಣುವುದು ಕ್ಕಿಂತಲೂ ಮುಂಚೆ ಪುಷ್ಪಾ ಚಿತ್ರತಂಡದವರು ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಒಂದನ್ನು ಸಿದ್ಧಗೊಳಿಸಿದರು.

ಈ ಒಂದು ಪ್ರೆಸ್ ಮೀಟ್ ಗೆ ಎಲ್ಲ ಮಾಧ್ಯಮದವರು ಹಾಗೆ ಪತ್ರಕರ್ತರು ನೆರೆದಿದ್ದರು. ಬೆಳಿಗ್ಗೆ ಹನ್ನೊಂದು ಗಂಟೆಗೆ ಆಯೋಜಿಸಲಾಗಿದ್ದ ಪ್ರೆಸ್ ಮೀಟ್ ಗೆ ಅಲ್ಲು ಅರ್ಜುನ್ ಅವರು ಒಂದು ಗಂಟೆ ತಡವಾಗಿ ಬರುತ್ತಾರೆ. ಇದರಿಂದ ಪತ್ರಕರ್ತರ ಅಸಮಾಧಾನಗೊಂಡರು. ತಕ್ಷಣ ಎದ್ದು ನಿಂತು ವೇದಿಕೆ ಮೇಲೆ ಕೂತಿದ್ದ ಅಲ್ಲು ಅರ್ಜುನ್ ಅವರಿಗೆ ನೇರವಾಗಿ ಪ್ರಶ್ನೆಯೊಂದನ್ನು ಹಾಕಿ ಅವಮಾನಿಸಿದ್ದರು. ನೀವು ಸಮಯಕ್ಕೆ ಬೆಲೆ ಕೊಡುವಂತಹವರು ಸಮಯಕ್ಕೆ ಸರಿಯಾಗಿ ಬರದೆ ನಮ್ಮಂತಹ ಪತ್ರಕರ್ತರನ್ನು ಕಾಯಿಸುವುದು ಎಷ್ಟು ಸರಿ ನಿಮಗೆ ಸಮಯದ ಪ್ರಜ್ಞೆ ಇಲ್ಲವೇ ಎಂದು ನೇರವಾಗಿ ಅಲ್ಲು ಅರ್ಜುನ್ ಅವರಿಗೆ ಪ್ರಶ್ನೆ ಹಾಕಿದ್ದರು.

ಆಗ ಅಲ್ಲು ಅರ್ಜುನ್ ಅವರು ತಕ್ಷಣ ಎದ್ದು ನಿಂತಿತ್ತು ಪತ್ರಕರ್ತರಿಗೆ ಕೈಮುಗಿದು ಕ್ಷಮಿಸಿ ಎಂದು ಕ್ಷಮೆ ಕೇಳಿದ್ದರು. ಈಗ ಇದೇ ಪರಿಸ್ಥಿತಿಯನ್ನು ಯಶ್ ಅವರು ಕೂಡ ಅನುಭವಿಸಿದ್ದಾರೆ. ಕೆಜಿಎಫ್ ಚಿತ್ರದ ಪ್ರಚಾರಕ್ಕೋಸ್ಕರ ಆಂಧ್ರಪ್ರದೇಶದ ವೈಜಾಗ್ ನಲ್ಲಿ ಪ್ರೆಸ್ ಮೀಟ್ ಒಂದನ್ನು ಆಯೋಜಿಸಿದ್ದರು. ಬೆಳಿಗ್ಗೆ ಹನ್ನೊಂದು ಗಂಟೆಗೆ ಕಾರ್ಯಕ್ರಮ ಆರಂಭವಾಗಬೇಕಿತ್ತು ಆದರೆ ನಟ ಯಶ್ ಅವರು ಒಂದು ಗಂಟೆ ತಡವಾಗಿ ಬಂದಿದ್ದರು. ಆದಕಾರಣ ಪತ್ರಕರ್ತರು ಹಾಗೂ ಮಾಧ್ಯಮದ ಮಿತ್ರರು ಸುಮಾರು ಒಂದು ಗಂಟೆಗಳ ಕಾಲ ಯಶ್ ಅವರಿಗೋಸ್ಕರ ಕಾದು ಕುಳಿತಿದ್ದರು. ಯಶ್ ಅವರನ್ನು ಕೆಲವು ಪತ್ರಕರ್ತರು ಜಿಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಹನ್ನೊಂದು ಗಂಟೆಗೆ ಇದ್ದ ಕಾರ್ಯಕ್ರಮಕ್ಕೆ ನೀವು ಹನ್ನೆರಡು ಗಂಟೆಗೆ ಬಂದಿದ್ದೀರಾ ನಿಮಗೆ ಸಮಯದ ಪ್ರಜ್ಞೆ ಇಲ್ಲವಾ.. ನಿಮ್ಮಿಂದ ಪತ್ರಕರ್ತರಿಗೆಲ್ಲ ತೊಂದರೆಯಾಗಿದೆ. ನಮ್ಮ ಸಮಯ ಹಾಳಾಗಿದೆ ಇದಕ್ಕೆ ಏನು ಹೇಳುತ್ತೀರಿ ಎಂದು ಯಶ್ ಅವರಿಗೆ ಖಡಕ್ಕಾಗಿ ಪ್ರಶ್ನೆಯೊಂದನ್ನು ತೆಲುಗು ಪತ್ರಕರ್ತ ಕೇಳಿದ್ದಾನೆ. ಇದಕ್ಕೆ ಯಶ್ ಅವರು ದಯವಿಟ್ಟು ಕ್ಷಮಿಸಿ ನಾನು ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ಬಂದಿದ್ದೇನೆ ಆದ ಕಾರಣ ತಡವಾಗಿದೆ. ಅಷ್ಟೆ ಅಲ್ಲದೆ ನನಗೆ ಕಾರ್ಯಕ್ರಮ ಇದೆ ಎಂಬ ಸುಳಿವು ಕೂಡ ಇರಲಿಲ್ಲ. ಪ್ರೈವೇಟ್ ವಿಮಾನದಲ್ಲಿ ಬರುವ ತನಕ ಲೇಟ್ ಆಗಿದೆ. ತಾಂತ್ರಿಕ ದೋಷದಿಂದ ನಿಮ್ಮನ್ನೇಲ್ಲಾ ಕಾಯಿಸುವ ಪರಿಸ್ಥಿತಿ ಬಂತು. ದಯವಿಟ್ಟು ಕ್ಷಮಿಸಿ ಹೊಟ್ಟೆಗೆ ಹಾಕಿಕೊಳ್ಳಿ ಎಂದು ಯಶ್ ಅವರು ಕ್ಷಮೆಯಾಚಿಸಿದ್ದಾರೆ. ಆ ದಿನ ಅಲ್ಲು ಅರ್ಜುನ್ ಅವರು ಲೇಟಾಗಿ ಬಂದರೂ ಅಂತ ನಾವು ಅವಮಾನಿಸಿದ್ದ ಕಾರಣ ಇಂದು ಯಶ್ ಅವರಿಗೆ ತೆಲುಗು ಪ್ರೇಕ್ಷಕರು ಇದೇ ರೀತಿ ನಡಿಸಿಕೊಂಡಿರುವುದು ನಿಜಕ್ಕೂ ಬೇಸರದ ವಿಷಯವೇ ಸರಿ .

Leave a Comment