Yash: ಏನ್ ಸ್ವಾಮಿ ಯಶ್ ಅವರ ಲುಕ್. ಯಶ್ ಅವರ ಹೊಸ ಲುಕ್ ಫೋಟೋ ಕೂಡ ವೈರಲ್.

Yash ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರು ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಪಾದರ್ಪಣೆ ಮಾಡಿದ ನಂತರ ಪ್ರತಿಯೊಂದು ಸಿನಿಮಾಗಳ ಮೂಲಕವೂ ಕೂಡ ಪ್ರಯೋಗಾತ್ಮಕ ಕಂಟೆಂಟ್ ಗಳನ್ನು ಪ್ರೇಕ್ಷಕರಿಗೆ ತೋರ್ಪಡಿಸುತ್ತಾ ಎಲ್ಲರ ಮನಸ್ಸನ್ನು ಗೆದ್ದಿರುವ ರೀತಿ ಇಂದು ನಿಮಗೆ ಕಣ್ಣ ಎದುರುಗಿದೆ. ನಿಜಕ್ಕೂ ಕೂಡ ಒಬ್ಬ ಬಸ್ ಡ್ರೈವರ್ ಮಗನಾಗಿದ್ದು ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ ಎಂದರೆ ಪ್ರತಿಯೊಬ್ಬರೂ ಕೂಡ ಮೆಚ್ಚಿಕೊಳ್ಳಲೇಬೇಕು.

ಕೆಜಿಎಫ್(KGF) ಸಿನಿಮಾ ಗಳು ಯಶ್ ಅವರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ನೀಡಿದ್ದು ಮಾತ್ರವಲ್ಲದೆ ಅವರ ಮಾರುಕಟ್ಟೆಯನ್ನು ಮತ್ತು ಅವರ ಮಾರುಕಟ್ಟೆಯ ಜೊತೆಗೆ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಕೂಡ ಜಾಗತಿಕವಾಗಿ ವಿಸ್ತರಿಸುವಂತೆ ಮಾಡಿದೆ. ಇದಕ್ಕಾಗಿ ನಾವು ಯಶ್ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು.

ಇನ್ನು ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಾಗೂ ಗಾಳಿ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಪತ್ರಿಕೆಯಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೂಡ ಓಡಾಡುತ್ತಿವೆ. ಅಧಿಕೃತವಾದ ಸುದ್ದಿಗಳು ಬರದೇ ಹೋದರು ಕೂಡ ಯಾರ ಜೊತೆಗೆ ಸಿನಿಮಾ ಮಾಡಬಹುದೇನೋ ಸುದ್ದಿಗಳು ಓಡಾಡುತ್ತಿವೆ ನಿಜ ಆದರೆ ಯಶ್ ಅವರು ಸಮಯ ಬಂದಾಗ ಅದನ್ನು ತಿಳಿಸುತ್ತೇವೆ ಎಂಬುದಾಗಿ ಹೇಳುವ ಮೂಲಕ ಇನ್ನು ಸಾಕಷ್ಟು ಸಮಯ ಅಭಿಮಾನಿಗಳು ಕಾಯುವ ಹಾಗೆ ಮಾಡಿದ್ದಾರೆ. ಎದುರ ನಡುವಲ್ಲಿ ಅವರ ಮತ್ತೊಂದು ಲೇಟೆಸ್ಟ್ ಲುಕ್ ಇರುವಂತಹ ಫೋಟೋ ವೈರಲ್ ಆಗುತ್ತಿದೆ.

ಹೌದು ಯಶ್ ಅವರು ಸನ್ಯಾಸಿ ರೀತಿಯಲ್ಲಿ ಇರುವಂತಹ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು ಇದು AI ತಂತ್ರಜ್ಞಾನವನ್ನು ಬಳಸಿಕೊಂಡು ಮಾಡಿರುವಂತಹ ಫೋಟೋ ಎಡಿಟ್ ಆಗಿದ್ದು ನಿಜವೇ ಎಂಬ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದ್ದು ಈ ರೀತಿಯ ಲುಕ್ ನಲ್ಲಿ ಯಶ್(Yash) ರವರು ಸಿನಿಮಾ ಮಾಡಿದರೆ ಎಷ್ಟು ಚೆನ್ನಾಗಿರುತ್ತೆ ಎಂಬುದಾಗಿ ಕೂಡ ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ.

Leave a Comment