ನಟಿ ಸಾಯಿ ಪಲ್ಲವಿ ಅವರು ದಕ್ಷಿಣ ಭಾರತದ ಸುಪ್ರಸಿದ್ಧ ನಟಿ. ಇವರು ದೊಡ್ಡ ಸೆಲೆಬ್ರಿಟಿ ಆದರೂ ಕೂಡ ತುಂಬಾ ಸಿಂಪಲ್ ಮತ್ತು ಸಾಧಾರಣ ಬದುಕನ್ನು ಬದುಕುತ್ತಾರೆ. ಎನ್ನುವುದು ವಿಶೇಷ. ಯಾವುದೇ ರೀತಿಯ ಆಡಂಬರ ಮತ್ತು ವೈಭವೀಕರಣದ ಜೀವನವನ್ನು ನಡೆಸುವುದಕ್ಕೆ ಸಾಯಿ ಪಲ್ಲವಿಗೆ ಇಷ್ಟವಿಲ್ಲ. ಸಾಯಿ ಪಲ್ಲವಿ ಅವರ ಅಭಿಮಾನಿಗಳಿಗೆ ಕೂಡ ಇವರ ಈ ಒಂದು ವ್ಯಕ್ತಿತ್ವ ತುಂಬ ಇಷ್ಟವಾಗುತ್ತೆ. ತನ್ನ ಸರಳ ಮತ್ತು ಸಾಧಾರಣ ವ್ಯಕ್ತಿತ್ವದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾಳೆ.
ಈಗಿನ ಕಾಲದ ಆಧುನಿಕ ನಟಿಯರು ಹೇಗೆ ಬದುಕುತ್ತಾರೆ ಮತ್ತು ಯಾವ ರೀತಿಯ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ ಎಂಬುದು ನಿಮಗೆಲ್ಲ ಗೊತ್ತು. ಮೈಯೆಲ್ಲ ಕಾಣಿಸುವಂತೆ ಅರೆಬರೆ ಬಟ್ಟೆಗಳನ್ನು ಹಾಕಿಕೊಂಡು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವುದು ಈಗಿನ ನಟಿಯರಿಗೆ ಕಾಮನ್. ಸಿನಿಮಾಗಳ ಚಿತ್ರೀಕರಣದಲ್ಲಿ ಕೂಡ ನಟಿಯರು ಅರೆಬರೆ ಬಟ್ಟೆ ಗಳನ್ನು ಹಾಕಿಕೊಳ್ಳುವುದು ಸರ್ವೇಸಾಮಾನ್ಯ. ಆದರೆ ನಟಿ ಸಾಯಿ ಪಲ್ಲವಿ ಅವರು ಮಾತ್ರ ತಮ್ಮ ಯಾವುದೇ ಚಿತ್ರಗಳನ್ನು ಅರೆಬರೆ ಬಟ್ಟೆಗಳನ್ನು ತೊಡುವುದು ಆಗಲಿ ಮತ್ತು ಹಾಟ್ ಸಿನಿಮಾಗಳಲ್ಲಿ ಅಭಿನಯಿಸುವುದೇ ಆಗಲಿ ಮಾಡಲ್ಲ.
ನಟಿ ಸಾಯಿ ಪಲ್ಲವಿ ಅವರು ಮಾತ್ರ ಯಾಕೆ ತುಂಡು ಬಟ್ಟೆಗಳನ್ನು ಹಾಕಿಕೊಳ್ಳುವುದಿಲ್ಲ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ ತನ್ನ ಮನಸ್ಸಿನ ಅಂತರಾಳದ ನೋವನ್ನು ಸಾಯಿಪಲ್ಲವಿ ಹೊರಹಾಕಿದ್ದಾರೆ. ತನ್ನ ಜೀವನದಲ್ಲಿ ನಡೆದ ಒಂದೇ ಒಂದು ಕೆಟ್ಟ ಘಟನೆ ನನ್ನನ್ನು ಈ ರೀತಿಯಾಗಿ ಬದಲಾಯಿಸಲು ಕಾರಣ ಎಂದು ಹೇಳಿಕೊಂಡಿದ್ದಾರೆ. ನಟಿ ಸಾಯಿ ಪಲ್ಲವಿ ಶಿಕ್ಷಣವನ್ನು ಕಲಿಯಲಿಕ್ಕೆ ಅಮೆರಿಕಕ್ಕೆ ಹೋಗಿದ್ದರು. ಆಗ ಅವರು ಟ್ಯಾಂಗೋ ನೃತ್ಯವನ್ನು ಕಲಿಯಲಿಕ್ಕೆ ಹೋಗಿದ್ದರು. ಟ್ಯಾಂಗೋ ನೃತ್ಯ ಮಾಡುವಾಗ ವಿಶೇಷವಾದ ವೇಷ ಭೂಷಣವನ್ನು ಧರಿಸಬೇಕು ಎಂದು ಹೇಳುತ್ತಾರೆ.
ಸಾಯಿ ಪಲ್ಲವಿ ಪಾಲಕರ ಅನುಮತಿಯೊಂದಿಗೆ ಆ ಉಡುಗೆಯನ್ನು ತೊಟ್ಟು ಡ್ಯಾನ್ಸ್ ಮಾಡಲು ಒಪ್ಪಿಕೊಳ್ಳುತ್ತಾಳೆ. ಕೆಲವು ತಿಂಗಳುಗಳ ನಂತರ ನಟಿ ಸಾಯಿ ಪಲ್ಲವಿಗೆ ಪ್ರೇಮಂ ಎಂಬ ಚಿತ್ರದಲ್ಲಿ ನಟಿಸಲು ಅವಕಾಶ ಸಿಗುತ್ತೆ. ಪ್ರೇಮಂ ಚಿತ್ರದ ನಂತರ ಸಾಯಿ ಪಲ್ಲವಿ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸುತ್ತಾರೆ. ಹಾಗೂ ಅದೇ ಸಮಯದಲ್ಲಿ 2013 ರಲ್ಲಿ ಸಾಯಿ ಪಲ್ಲವಿಯ ಟ್ಯಾಂಗೋ ನೃತ್ಯದ ವಿಡಿಯೋಗಳು ಕೂಡ ವೈರಲ್ ಆಗುತ್ತವೆ. ಸಾಯಿ ಪಲ್ಲವಿ ಅವರು ಟ್ಯಾಂಗೋ ನೃತ್ಯ ದಲ್ಲಿ ಹಾಕಿದ ಬಟ್ಟೆಯನ್ನು ನೋಡಿ ನೆಟ್ಟಿಗರು ಕೆಟ್ಟದಾಗಿ ಕಮೆಂಟ್ ಮಾಡಲು ಪ್ರಾರಂಭಿಸಿದ್ದರು. ಇದು ಸಾಯಿ ಪಲ್ಲವಿ ಅವರಿಗೆ ತುಂಬಾ ಮನಸ್ಸಿಗೆ ಬೇಸರವನ್ನುಂಟು ಮಾಡಿತ್ತು. ಜನರು ಮಾಡಿದ ಕಮೆಂಟುಗಳಿಂದ ಸಾಯಿಪಲ್ಲವಿ ಇನ್ನೆಂದೂ ಗ್ಲ್ಯಾಮರಸ್ ನೃತ್ಯಗಳಲ್ಲಿ ಮತ್ತು ದೃಶ್ಯಗಳಲ್ಲಿ ಕಾಣಿಸಿಕೊಳ್ಳಲ್ಲ ಅಂತ ನಿರ್ಧಾರ ಮಾಡಿದವರು, ಇಂದಿಗೆ ಕೂಡ ಒಂದೇ ಒಂದು ಗ್ಲಾಮರಸ್ ಚಿತ್ರಗಳಲ್ಲಿ ಸಾಯಿಪಲ್ಲವಿ ನಟನೆ ಮಾಡಿಲ್ಲ.