Vinod Raj: ಪುನೀತ್ ರಾಜಕುಮಾರ್ ಅವರ ವಿಚಾರದಲ್ಲಿ ವಿನೋದ್ ರಾಜ್ ಹಾಗೂ ಲೀಲಾವತಿ ರವರು ಇಬ್ಬರು ಕೂಡ ಈ ರೀತಿ ಯಾಕೆ ಮಾಡಿದ್ರು?

Vinod Raj ವಿನೋದ್ ರಾಜ್ ರವರು ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ನತದೃಷ್ಟ ನಟ ಎಂದು ಹೇಳಬಹುದಾಗಿದೆ. ಯಾಕೆಂದರೆ ಪ್ರತಿಭೆ ಇದ್ದರೂ ಕೂಡ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಮಾತ್ರ ಹುಡುಕಿಕೊಂಡು ಬರಲಿಲ್ಲ. ಕನ್ನಡ ಚಿತ್ರರಂಗದ(Kannada Film Industry) ಡ್ಯಾನ್ಸ್ ರಾಜ ಎಂಬುದಾಗಿ ಕರೆಯಲ್ಪಟ್ಟಂತಹ ಅವರು ಕೆಲವೇ ಸಿನಿಮಾಗಳ ನಂತರ ಕನ್ನಡ ಚಿತ್ರರಂಗವನ್ನು ಬಿಟ್ಟಿದ್ದು ನಿಜಕ್ಕೂ ಕೂಡ ವಿಪರ್ಯಾಸವೇ ಸರಿ ಎಂದು ಹೇಳಬಹುದು.

ಎಲ್ಲಕ್ಕಿಂತ ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಅವರ ಮದುವೆ ಹಾಗೂ ಲೀಲಾವತಿ(Leelavathi) ಮತ್ತು ರಾಜಕುಮಾರ್(Rajkumar) ರವರ ನಡುವಿನ ವಿಚಾರ ಮತ್ತೆ ಬೆಳಕಿಗೆ ಬಂದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸದ್ದು ಮಾಡಿತ್ತು. ಇದಕ್ಕೆ ಅವರೇ ಮುಂದೆ ಬಂದು ಎಲ್ಲಾ ಊಹಾಪೋಹಗಳಿಗೂ ಕೂಡ ತೆರೆ ಎಳೆಯುವಂತಹ ಕೆಲಸವನ್ನು ನೇರವಾಗಿ ಉತ್ತರ ನೀಡುವ ಮೂಲಕ ಮಾಡಿದ್ದರು.

ಆದರೆ ಇಂದಿಗೂ ಕೂಡ ವಿನೋದ್ ರಾಜ್(Vinod Raj) ಹಾಗೂ ಲೀಲಾವತಿ ರವರು ಅಪ್ಪು(Appu) ಅವರ ಕೆಲಸದಲ್ಲಿ ಮಾಡಿರುವಂತಹ ಅದೊಂದು ವಿಚಾರ ಯಾಕೆ ಎಂಬುದು ನಿಜಕ್ಕೂ ಕೂಡ ತಿಳಿದುಬಂದಿಲ್ಲ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪುನೀತ್ ರಾಜಕುಮಾರ್ ಅವರು ಅಕ್ಟೋಬರ್ 29ರಂದು ನಮ್ಮನ್ನೆಲ ಅಗಲಿದ್ದರು. ಅಪ್ಪು ಲೀಲಾವತಿಯವರ ಕುಟುಂಬದ ಜೊತೆಗೂ ಕೂಡ ಸಾಕಷ್ಟು ನಿಕಟವಾದ ಬಾಂಧವ್ಯವನ್ನೇ ಹೊಂದಿದ್ದರು ಎನ್ನುವುದಕ್ಕೆ ಫೋಟೋಗಳು ಕೂಡ ಸಾಕ್ಷಿ ಇವೆ.

ಹೀಗೆಂದ ಮಾತ್ರಕ್ಕೆ ಇವರಿಗೆ ಸಂಬಂಧ ಇದೆ ಎಂದು ಕಲ್ಪಿಸಲು ಸಾಧ್ಯವಿಲ್ಲ ಆದರೆ ಪುನೀತ್ ರಾಜಕುಮಾರ್ ಅವರು ಮರಣ ಹೊಂದಿದ ಕೆಲವೇ ದಿನಗಳಲ್ಲಿ ಶ್ರೀರಂಗಪಟ್ಟಣದ ಸಂಗಮದಲ್ಲಿ ತಾಯಿ ಮಗ ಇಬ್ಬರೂ ಕೂಡ ಪುನೀತ್ ರಾಜಕುಮಾರ್(Puneeth Rajkumar) ರವರಿಗೆ ತರ್ಪಣ ಬಿಡುವ ಕೆಲಸವನ್ನು ಮಾಡಿದ್ದು ಇಂದಿಗೂ ಕೂಡ ಬಗೆಹರಿಯದ ಸಮಸ್ಯೆಯಾಗಿದೆ. ಇದರ ಹಿಂದಿನ ಕಾರಣ ಏನಿರಬಹುದು ಎಂಬುದನ್ನು ನೀವೇ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ‌.

Leave a Comment