Vinod Raj ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಡ್ಯಾನ್ಸಿಂಗ್ ಐಕಾನ್ ಆಗಿದ್ದ ವಿನೋದ್ ರಾಜ್(Vinod Raj) ಅವರು ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಕೂಡ ಕಾಣಿಸಿಕೊಂಡಿರುವಂತಹ ಕೆಲವೇ ಕೆಲವು ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಪ್ರೇಕ್ಷಕರ ಮನ ಗೆಲ್ಲಲು ಯಶಸ್ವಿಯಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿನೋದ್ ರಾಜ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಮ್ಮ ಮದುವೆ ಹಾಗೂ ತಾಯಿ ಲೀಲಾವತಿಯವರ(Leelavathi) ವಿಚಾರವಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಅವರು ಕೂಡ ಆ ಸುದ್ದಿಗಳಿಗೆ ಯೂಟ್ಯೂಬ್ ಚಾನೆಲ್ನಲ್ಲಿ ಸಂದರ್ಶನ ನೀಡುವ ಮೂಲಕ ಉತ್ತರವನ್ನು ಕೂಡ ನೀಡಿದ್ದಾರೆ.
ಇನ್ನು ನೋಡೋದಕ್ಕೆ ಸಿಂಪಲ್ ಆಗಿದ್ದರೂ ಕೂಡ ಅವರ ಬಳಿ ಇರುವಂತಹ ಕಾರುಗಳು ಅಷ್ಟೇನೆ ಸಿಂಪಲ್ ಆಗಿಲ್ಲ ಎಂಬುದನ್ನು ಅವರ ಕೆಲವೊಂದು ಮನೆಯ ಟೂರ್ ವಿಡಿಯೋ ನೋಡಿದವರು ಒಪ್ಪಿಕೊಳ್ಳುತ್ತಾರೆ. ಹೌದು ಮಿತ್ರರೇ ವಿನೋದ್ ರಾಜ್ ಅವರ ಬಳಿ ದುಬಾರಿ ಬೆಲೆಯ Audi ಕಾರಿದೆ. ಹಾಗಿದ್ರೆ ಅದರ ಬೆಲೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ತಿಳಿದು ಬಂದಿರುವ ಮೂಲಗಳ ಪ್ರಕಾರ ವಿನೋದ್ ರಾಜ್ ಅವರ ಈ ದುಬಾರಿ ಬೆಲೆಯ ಕಾರಿನ ನಿಜವಾದ ಬೆಲೆ ಒಂದು ಕೋಟಿ ರೂಪಾಯಿಯ ಆಸು ಪಾಸಿನಲ್ಲಿದೆ ಎಂಬುದಾಗಿ ತಿಳಿದುಬಂದಿದೆ. ವಿನೋದ್ ರಾಜ್(Vinod Raj) ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಬಹುದಾಗಿದೆ.