Vinay prasad: ಸ್ನೇಹಿತರೆ, ಅದೊಂದು ಕಾಲದಲ್ಲಿ ಡಾಕ್ಟರ್ ವಿಷ್ಣುವರ್ಧನ್, ಟೈಗರ್ ಪ್ರಭಾಕರ್, ಶಶಿಕುಮಾರ್, ಅನಂತ್ ನಾಗ್ ರಂತಹ ದಿಗ್ಗಜ ನಟರೊಂದಿಗೆ ಅಭಿನಯಿಸುತ್ತ ಪೀಕ್ ನಲ್ಲಿ ಇದ್ದಂತಹ ಕನ್ನಡ ಚಿತ್ರರಂಗದ ಹಿರಿಯ ನಟಿ ಎಂದರೆ ಅದು ವಿನಯ ಪ್ರಸಾದ್(Vinaya Prasad) ಎಂತಹ ಪಾತ್ರ ನೀಡಿದರು ಲೀಲಾ ಜಾಲವಾಗಿ ಅಭಿನಯಿಸುತ್ತಾ ಎಲ್ಲರಿಂದ ಮೆಚ್ಚುಗೆಗೆ ಒಳಗಾಗುತ್ತಿದ್ದಂತಹ ವಿನಯ ಪ್ರಸಾದ ಅವರು ಉತ್ತುಂಗದ ಶಿಖರದಲ್ಲಿರುವಾಗಲೇ ಪ್ರಸಾದ್(Prasad) ಎಂಬ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.
ಬಹಳ ಅನ್ಮೋನ್ಯವಾಗಿ ಎಲ್ಲರಿಗೂ ಆದರ್ಶವಾಗುವಂತೆ ದಾಂಪತ್ಯ ಜೀವನವನ್ನು ನಡೆಸುತ್ತಿದ್ದ ಈ ಜೋಡಿಗಳ ಬಾಳಲ್ಲಿ ವಿಧಿ ವಿಕೃತಿಯನ್ನು ಮೆರೆದು ಬಿಡುತ್ತದೆ. ಪ್ರಸಾದ್ ಅವರು ರಸ್ತೆ ಅಪಘಾತದಿಂದಾಗಿ ಇಹಲೋಕ ತ್ಯಜಿಸಿಬಿಟ್ಟರು, ಆಗ ವಿನಯ ಪ್ರಸಾದವರಿಗೆ ಮೂರು ವರ್ಷದ ಪ್ರಥಮ ಎಂಬ ಪುಟ್ಟ ಮಗಳಿರುತ್ತಾಳೆ. ಹೀಗೆ ಗಂಡನ ಅಗಲಿಕೆಯಿಂದ ಖಿನ್ನತೆಗೆ ಜಾರಿದಂತಹ ವಿನಯ ಪ್ರಸಾದ್ ತಮ್ಮ ಈ ನೋವನ್ನು ಮರೆಯುವ ಸಲುವಾಗಿ ಸಿನಿ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬಿಸಿಯಾದರೂ ಆಗ ಜ್ಯೋತಿಪ್ರಕಾಶ್ (Jyothi Prakash)
ಅವರ ಪರಿಚಯವಾಗಿ ಇವರಿಬ್ಬರ ಪರಿಚಯ ಕಾಲಕ್ರಮೇಣ ಪ್ರೀತಿಗೆ ತಿರುಗುತ್ತದೆ. ಮದುವೆಯಾಗುವಂತಹ ಸಂದರ್ಭದಲ್ಲಿ ತಮ್ಮ ಮಗಳು ಪ್ರಥಮ ಪ್ರಸಾದ್ ಅವರ ಒಪ್ಪಿಗೆ ಕೇಳಿದಾಗ ಆಕೆ ಕೂಡ ಇದಕ್ಕೆ ಒಪ್ಪಿಕೊಂಡ ಮೇರೆಗೆ ಜ್ಯೋತಿ ಪ್ರಕಾಶ್ ಅವರೊಂದಿಗೆ ಎರಡನೇ ಸಾಂಸಾರಿಕ ಜೀವನವನ್ನು ವಿನಯ ಪ್ರಸಾದ್ ಪ್ರಾರಂಭ ಮಾಡಿದರು. ಅಂದಹಾಗೆ ಜ್ಯೋತಿಪ್ರಕಾಶ್ ಅವರಿಗೂ ಕೂಡ ಅದಾಗಲೇ ಒಂದು ಮದುವೆಯಾಗಿ ಮಗನಿದ್ದನು, ಆತನ ತಾಯಿ ಕೂಡ ಅನಾರೋಗ್ಯ ಸಮಸ್ಯೆಯಿಂದ ತೀರಿ ಹೋಗಿದ್ದ ಕಾರಣ ತಮಗೂ ಒಬ್ಬ ಸಂಗಾತಿ ಸಿಕ್ಕ ಹಾಗೆ ಆಗುತ್ತದೆ ಹಾಗೂ ತಮ್ಮ ಮಕ್ಕಳಿಗೂ ಪೋಷಕರ ಪ್ರೀತಿ ದೊರಕುತ್ತದೆ.
ಎಂಬ ಕಾರಣಕ್ಕೆ ಎರಡನೇ ದಾಂಪತ್ಯ ಜೀವನವನ್ನು ಪ್ರಾರಂಭ ಮಾಡಿದರು. ಕಳೆದ ಕೆಲವು ವರ್ಷಗಳ ಹಿಂದಷ್ಟೇ ಮಗಳು ಪ್ರಥಮ ಪ್ರಸಾದ್(Prathama Prasad), ಸೂರ್ಯ ರಾವ್(Surya Rao) ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈ ದಂಪತಿಗಳಿಗೆ ಓರ್ವ ಮುದ್ದಿನ ಮಗಳಿದ್ದಾಳೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸುಂದರ ಕುಟುಂಬದ ಫೋಟೋಗಳನ್ನು ಹಂಚಿಕೊಳ್ಳುವ ವಿನಯ ಪ್ರಸಾದ್(Vinaya Prasad) ಅವರಿಗೆ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವಿದ್ದು, ಈ ನಟಿ ಏನೇ ಪೋಸ್ಟ್ ಮಾಡಿದರು ಅದಕ್ಕೆ ತುಂಬು ಹೃದಯದ ಪ್ರೀತಿಯನ್ನು ನೀಡುತ್ತಾರೆ.