ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅಭಿನಯಿಸಿರುವ ವಿಕ್ರಾಂತ್ ರೋಣ ಸಿನಿಮಾ ಇದೇ ಗುರುವಾರ ಬಿಡುಗಡೆಯಾಗಿದೆ ಬಿಡುಗಡೆಯಾದ ಎರಡೇ ದಿನದಲ್ಲಿ ಬೆರಗು ಮೂಡಿಸುವಂಥ ಕಲೆಕ್ಷನ್ ಮಾಡಿದೆ. ಎಲ್ಲೆಡೆ ವಿಕ್ರಾಂತ್ ರೋಣ ಭರ್ಜರಿ ಪ್ರದರ್ಶನ ಕಾಣುತ್ತಿದೆ ಎಲ್ಲಾ ಥಿಯೇಟರ್ ಗಳಲ್ಲೂ ಹೌಸ್ ಫುಲ್ ಆಗಿ ಓಡುತ್ತಿದೆ. ಗುರುವಾರ ಮುಂಜಾನೆ ಆರು ಗಂಟೆಯಿಂದಲೇ ವಿಕ್ರಾಂತ್ ದ್ರೋಣ ಚಿತ್ರದ ಪ್ರದರ್ಶನ ಶುರುವಾಗಿತ್ತು. ಸುದೀಪ್ ಅವರ ಈ ಚಿತ್ರ ಹಳೆಯ ರೆಕಾರ್ಡ್ ಗಳನ್ನೆಲ್ಲ ಉಡೀಸ್ ಮಾಡುತ್ತಿದೆ.
ಕಿಚ್ಚ ಸುದೀಪ್ ಅವರ ಕೆರಿಯರ್ ನಲ್ಲಿ ವಿಕ್ರಾಂತ್ ರೋಣ ಚಿತ್ರ ಒಂದು ಮೈಲಿಗಲ್ಲು ಸಾಧಿಸಿದೆ ಎಂತಲೇ ಹೇಳಬಹುದು. ಸುದೀಪ್ ಅವರ ಅಭಿನಯ ಮತ್ತು ಸ್ಟೈಲಿಶ್ ಲುಕ್ ವಿಕ್ರಾಂತ್ ರೋಣಾ ಸಿನಿಮಾದ ಹೈಲೆಟ್ ಆಗಿದೆ. ಸುದೀಪ್ ಅವರನ್ನ ಈ ರೀತಿಯ ಸಿನಿಮಾಗಳಲ್ಲಿ ನೋಡಬೇಕೆಂದು ಅಭಿಮಾನಿಗಳು ತುಂಬಾ ಕಾತುರದಿಂದ ಕಾಯುತ್ತಿದ್ದರು. ಯಾವುದೇ ಆ್ಯಕ್ಷನ್ ಬಿಲ್ಡಪ್ ಮತ್ತು ಮಸಾಲಾ ಸೀನ್ ಗಳಿಲ್ಲದೆ ಕೇವಲ ಕಥೆ ಚಿತ್ರಕಥೆ ಮತ್ತು ಸಿನೆಮಾಟೋಗ್ರಫಿ ಮೂಲಕ ವಿಕ್ರಾಂತ್ ರೋಣ ಎಲ್ಲೆಡೆ ಸದ್ದು ಮಾಡುತ್ತಿದೆ.
ಬುಡದಿಂದ ತುದಿಯವರೆಗೂ ಪ್ರೇಕ್ಷಕರನ್ನು ಮುಂದೇನಾಗುತ್ತೆ ಮುಂದೇನಾಗುತ್ತೆ ಎಂಬ ಕುತೂಹಲದಲ್ಲಿಯೇ ಕಾದಿರುಸುವುದರಲ್ಲಿ ವಿಕ್ರಾಂತ್ ರೋಣ ಯಶಸ್ವಿಯಾಗಿದೆ. ಸುದೀಪ್ ಅವರ ಕೆರಿಯರ್ ನಲ್ಲೇ ಇದು ಅತ್ಯದ್ಭುತ ಸಿನಿಮಾವಾಗಲಿದೆ. ಸುದೀಪ್ ಅವರ ಸಿನಿ ಜರ್ನಿಯಲ್ಲಿ ಮೊದಲ ದಿನದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ ವಿಕ್ರಾಂತ್ ರೋಣ ಯಾಕೆಂದರೆ ಮೊದಲ ದಿನವೇ ವಿಕ್ರಾಂತ್ ರೋಣ ಕರ್ನಾಟಕದಲ್ಲಿ ಹದಿನೆಂಟು ಕೋಟಿ ರುಪಾಯಿಗಳನ್ನು ಬಾಚಿಕೊಂಡಿದೆ.
ಕೆಜಿಎಫ್, ಜೇಮ್ಸ್ ನಂತರ ಕರ್ನಾಟಕದಲ್ಲಿ ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ ಅಂದರೆ ಅದು ವಿಕ್ರಾಂತ್ ರೋಣ. ವಿಕ್ರಾಂತ್ ರೋಣ ಸಿನೆಮಾ ಮೊದಲ ದಿನದ ಕರ್ನಾಟಕದ ಕಲೆಕ್ಷನ್ ಹದಿನೆಂಟು ಕೋಟಿಯಾದರೆ ವಿಶ್ವದ ಕಲೆಕ್ಷನ್ ಒಟ್ಟಾರೆ 30 ಕೋಟಿಗೂ ಅಧಿಕವಾಗಿದೆ. ರಜೆ ಇಲ್ಲದೇ ಇದ್ದರೂ ವಿಕ್ರಾಂತ್ ರೋಣ ಸಿನೆಮಾ ಇಷ್ಟೊಂದು ಕಲೆಕ್ಷನ್ ಮಾಡಿರುವುದು ನಿಜಕ್ಕೂ ಊಹೆಗೂ ಮೀರಿದ್ದು. ಹಾಗೆ ಎರಡನೆಯ ದಿನದ ಕಲೆಕ್ಷನ್ ಕೂಡ ಕಡಿಮೆಯಿಲ್ಲ ಮೊದಲ ದಿನದ ಕಲೆಕ್ಷನ್ ಗೆ ಸಮನಾಗಿದೆ.
ಎರಡನೇ ದಿನ ವಿಕ್ರಾಂತ್ ರೋಣ ಸುಮಾರು 25 ಕೋಟಿ ಒಟ್ಟು ಕಲೆಕ್ಷನ್ ಮಾಡಿದೆ. ಒಟ್ಟಾರೆ ಎರಡೇ ದಿನದಲ್ಲಿ ವಿಕ್ರಾಂತ್ ರೋಣ ಐವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ರೆಕಾರ್ಡ್ ಹುಟ್ಟಿ ಹಾಕಿದೆ. ಇನ್ನೂ ಮೊದಲ ವಾರದ ಕೊನೆಯ ದಿನಕ್ಕೆ ವಿಕ್ರಾಂತ್ ರೋಣ ಸಿನಿಮಾ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಕನ್ನಡ ಚಿತ್ರರಂಗ ನೂರು ಕೋಟಿ ಕಲೆಕ್ಷನ್ ಗಳನ್ನು ಒಂದು ವಾರದಲ್ಲಿಯೇ ಮಾಡುತ್ತಿರುವ ಬೆಳವಣಿಗೆ ನೋಡಿದರೆ ಹೆಮ್ಮೆ ಎನಿಸುತ್ತೆ. ಕೆಜಿಎಫ್ ಜೇಮ್ಸ್ ಚಾರ್ಲಿ ಮತ್ತು ಒಟ್ಟಾರೆ ಇದೇ ವರ್ಷ ನಾಲ್ಕು ಕನ್ನಡ ಸಿನಿಮಾಗಳು ನೂರು ಕೋಟಿ ಕಲೆಕ್ಷನ್ ಕ್ಲಬ್ ಸೇರಿಕೊಳ್ಳಲಿದೆ.
ಅನೂಪ್ ಭಂಡಾರಿ ಅವರ ನಿರ್ದೇಶನವನ್ನು ಕೂಡ ಪ್ರೇಕ್ಷಕರು ಹಾಡಿಹೊಗಳುತ್ತಿದ್ದಾರೆ. ಅನೂಪ್ ಭಂಡಾರಿ ಮತ್ತು ಸುದೀಪ್ ಅವರ ಜುಗಲ್ ಬಂದಿಯಲ್ಲಿ ರೆಡಿ ಆಗಿರುವ ವಿಕ್ರಾಂತ್ ರೋಣ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ ಇದೀಗ ಅಭಿಮಾನಿಗಳಿಗೆ ಇನ್ನೊಂದು ಖುಷಿಯ ವಿಚಾರ ಅದು ಏನೆಂದರೆ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಇಬ್ಬರೂ ಸೇರಿಕೊಂಡು ಇನ್ನೊಂದು ಸಿನಿಮಾ ಮಾಡಲಿದ್ದಾರಂತೆ ಆ ಸಿನಿಮಾ ಇದೇ ವರ್ಷ ಸೆಟ್ಟೇರಲಿದೆ ಮತ್ತು ಆ ಸಿನಿಮಾದ ಹೆಸರು ರಂಗಾ ಬಿಲ್ಲಾ ಭಾಷಾ. ವಿಕ್ರಾಂತ್ ರೋಣ ಸಿನೆಮಾ ಸಿನಿಮಾವನ್ನು ನೀವು ಈಗಾಗಲೇ ನೋಡಿದ್ದರೆ ಹೇಗಿದೆ ಎಂದು ಕಮೆಂಟ್ ಮಾಡಿ