Vijayalakshmi Darshan ಅಭಿಷೇಕ್ ಅಂಬರೀಶ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟು ವರ್ಷಗಳಿಂದ ಡೇಟಿಂಗ್ ನಡೆಸುತ್ತಿರುವಂತಹ ಅವಿವಾ(Aviva Bidapa) ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವಂತಹ ಅತ್ಯಂತ ದೊಡ್ಡ ಮದುವೆ ಇದಾಗಿದೆ.
ಹೌದು ಗೆಳೆಯರೇ ಅಂಬರೀಶ್ ಸುಪುತ್ರ ಆಗಿರುವಂತಹ ಅಭಿಷೇಕ್ ಅಂಬರೀಶ್(Abhishek Ambareesh) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಮರ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿರುತ್ತಾರೆ ಆದರೆ ಎರಡನೇ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇನ್ನು ಈ ಮದುವೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ಪತ್ನಿ ಆಗಿರುವಂತಹ ವಿಜಯಲಕ್ಷ್ಮಿ ಅವರು ಕೂಡ ಆಗಮಿಸಿ ನವಜೋಡಿಗಳಿಗೆ ಶುಭ ಹಾರೈಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಅವಿವಾ ಅವರಿಗೆ ವಿಜಯಲಕ್ಷ್ಮಿ ಅವರು ಒಂದು ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ವಿಜಯಲಕ್ಷ್ಮಿ ದರ್ಶನ್(Vijayalakshmi Darshan) ಅವರು ಅವಿವಾ ಅವರಿಗೆ ನೀಡಿರುವಂತಹ ಚಿನ್ನದ ಉಂಗುರದ ಬೆಲೆ 2 ಲಕ್ಷಕ್ಕೂ ಅಧಿಕ ಎಂಬುದಾಗಿ ತಿಳಿದು ಬಂದಿದ್ದು ಈ ಮೂಲಕ ದರ್ಶನ್ ಹಾಗೂ ಅಂಬರೀಶ್ ಅವರ ಕುಟುಂಬ ಎಷ್ಟು ಮಟ್ಟಿಗೆ ಅನ್ಯೋನ್ಯವಾಗಿದೆ ಎಂಬುದಾಗಿ ಸಾಬೀತಾಗುತ್ತದೆ.