Vijaya Raghavendraspamdana: ಸ್ನೇಹಿತರೆ, ಸ್ಯಾಂಡಲ್ ವುಡ್ನಲ್ಲಿ ಬಹಳ ಅನ್ಯೋನ್ಯವಾಗಿ ಓಡಾಡಿಕೊಂಡಿದ್ದಂತಹ ವಿಜಯ ರಾಘವೇಂದ್ರ ಮತ್ತು ಸ್ಪಂದನ ದಂಪತಿಗಳ ಮೇಲೆ ಅದ್ಯಾರ ವಕ್ರದೃಷ್ಟಿ ಬಿತ್ತೋ ಗೊತ್ತಿಲ್ಲ ಸ್ಪಂದನ ಕಾಲೇಜು ಗೆಳತಿಯರೊಂದಿಗೆ ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಲಘು ಹೃದಯಘಾತ ಸಮಸ್ಯೆಯಿಂದ ಕೊನೆ ಉಸಿರಲಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಾ ಇದ್ದಹಾಗೆ ಮಾಧ್ಯಮದ ಮುಂದೆ ಬಂದು ಇದಕ್ಕೆ ಸ್ಪಷ್ಟನೆ ನೀಡಿದಂತಹ ವಿಜಯ ರಾಘವೇಂದ್ರ ಅವರ
ಸಹೋದರ ಶ್ರೀಮುರುಳಿ ಅತ್ತಿಗೆಯ ಸಾವಿನ ವಿಚಾರ ಕೇಳಿ ಕಣ್ಣೀರು ಹಾಕುತ್ತಾ ಕುಟುಂಬಸ್ಥರೊಂದಿಗೆ ಹಾಗೂ ಕೆಲ ಸ್ನೇಹಿತರೊಂದಿಗೆ ವಿಜಯ ರಾಘವೇಂದ್ರ ಮತ್ತು ಸ್ಪಂದನ ಬ್ಯಾಂಕಾಕ್ಗೆ ಹೋಗಿದ್ದರು. ಆ ಸಂದರ್ಭದಲ್ಲಿ ಶಾಪಿಂಗ್ ಮುಗಿಸಿ ಬಂದು ಹೋಟೆಲ್ನಲ್ಲಿ ಸ್ಪಂದನ ಅವರು ಮಲಗಿದ್ದಾರೆ ಮತ್ತೆ ಮೇಲೆ ಏಳಲಿಲ್ಲ. ಲೋ ಬಿಪಿ ಸಮಸ್ಯೆಯಿಂದ ಈ ರೀತಿ ಲಘು ಹೃದಯಘಾತವಾಗಿರಬಹುದು ಎಂದು ಭಾವುಕರಾದರು.
Vijaya Raghavendra spandana
ಇವರ ನಿಧನದ ವಿಚಾರ ಹೊರ ಬರುತ್ತಾ ಇದ್ದ ಹಾಗೆ ಸಾಕಷ್ಟು ಊಹ ಪೋಹಗಳಿಗೆ ದಾರಿ ಮಾಡಿಕೊಡುತ್ತದೆ, ಈ ಸಂದರ್ಭದಲ್ಲಿ ಮಾತನಾಡಿದ ವಿಜಯ ರಾಘವೇಂದ್ರ ಅವರ ಮಾವ ಬಿಕೆ ಶಿವರಾಂ ಸ್ಪಂಧನ ಎರಡು ಮೂರು ದಿನಗಳ ಹಿಂದಷ್ಟೇ ಸ್ನೇಹಿತರೊಂದಿಗೆ ಥೈಲ್ಯಾಂಡ್ ಹಾಗೂ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದರು. ವಿಜಯ ರಾಘವೇಂದ್ರ ಕೂಡ ಶೂಟಿಂಗ್ ಕೆಲಸಗಳನ್ನು ಮುಗಿಸಿ ಅವರೊಡನೆ ಜಾಯಿನ್ ಆದರೂ,
ಹೀಗೆ ಎಲ್ಲರೂ ಒಟ್ಟಿಗೆ ಕಾಲ ಕಳೆಯುತ್ತಿದ್ದ ಸಂದರ್ಭದಲ್ಲಿ ಈ ರೀತಿಯಾದ ಅಹಿತಕಾರಿ ಘಟನೆ ನಡೆದು ಹೋಗಿದೆ. ಆಕೆ ಬಹಳನೇ ವೀಕ್ ಇದ್ದಳು ಪೋಸ್ಟ್.ಬಾಟಮ್ ವರದಿ ಬರಲಿ ಬಂದ ನಂತರ ವಿವರ ಹೇಳುತ್ತೇನೆ. ನಾಳೆ ಮುಂಜಾನೆ ಫ್ಲೈಟ್ ಇದೆ ಆದಷ್ಟು ಬೇಗ ಪೋಸ್ಟ್.ಬಾಟಮ್ ಮಾಡಿ ಇಲ್ಲಿಗೆ ಕರೆ ತರುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ಸ್ಪಂದನ ಅವರು ಫಿಟ್ನೆಸ್ ಕಾಯ್ದುಕೊಳ್ಳುವ ಸಲುವಾಗಿ ಜಿಮ್ನಲ್ಲಿಯೂ ವರ್ಕೌಟ್ ಮಾಡುತ್ತಿದ್ದರು. ಲೋ ಬಿಪಿ ಹೊರೆತುಪಡಿಸಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಅವರಿಗೆ ಇರಲಿಲ್ಲ, ಹೀಗೆ ಬಹಳ ಲವಲವಿಕೆ ಇಂದ ಎಲ್ಲರೊಂದಿಗೆ ಓಡಾಡಿಕೊಂಡಿದ್ದಂತಹ ಸ್ಪಂದನ ಇಹಲೋಕ ತ್ಯಜಿಸಿರುವುದು ಪ್ರತಿಯೊಬ್ಬರಿಗೂ ಅಗಾಧವಾದ ನೋವನ್ನುಂಟು ಮಾಡಿದೆ.
ಇವರ ಸಾವಿಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕುಮಾರಸ್ವಾಮಿ, ವಿ ರವಿಚಂದ್ರನ್, ಜಗ್ಗೇಶ್ ಸೇರಿದಂತೆ ಮುಂತಾದ ಆತ್ಮೀಯರು ಸಂತಾಪ ಸೂಚಿಸುತ್ತಿದ್ದಾರೆ. ಇದನ್ನೂ ಓದಿ ಬಟ್ಟೆಯನ್ನೇ ಹಾಕಿಕೊಳ್ಳದೆ ಕೇವಲ ಆಭರಣಗಳಿಂದಲೇ ಮೈಮುಚ್ಚಿಕೊಂಡ ಸ್ಟಾರ್ ನಟಿ! ವೈರಲ್ ಫೋಟೋ ಕಂಡು ನಿಬ್ಬರಗಾದ ನೆಟ್ಟಿಗರು