Vijay Raghavendra wife spandana: ಸ್ನೇಹಿತರೆ, ಕನ್ನಡ ಸಿನಿಮಾ ರಂಗಕ್ಕೆ ಒಂದರ ಮೇಲೆ ಒಂದರಂತೆ ಬಡ ಸಿಡಿಲು ಬಡೆದಂತಾಗಿದೆ, ಕಳೆದ ಕೆಲವು ದಿನಗಳ ಹಿಂದಷ್ಟೇ ಚಿರಂಜೀವಿ ಸರ್ಜಾ ಹೃದಯಘಾತ ಸಮಸ್ಯೆ ಗೀಡಾದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಹೃದಯದ ಸಮಸ್ಯೆ ಇಂದಾಗಿ ಅಶ್ವಿನಿ ಅವರನ್ನು ಒಬ್ಬಂಟಿಯನ್ನಾಗಿಸಿ ಇಹಲೋಕ ತ್ಯಜಿಸಿದರು. ಈಗ ವಿಜಯ್ ರಾಘವೇಂದ್ರ(Vijay Raghavendra) ಅವರನ್ನು ಒಬ್ಬಂಟಿ ಮಾಡಿ ಸ್ಪಂದನ ಹೃದಯ ಘಾತದಿಂದ ಬಾರದ ಲೋಕಕ್ಕೆ ತೆರಳಿದ್ದಾರೆ.
ಹೌದು ಗೆಳೆಯರೇ ಕೆಲ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಥೈಲ್ಯಾಂಡಿನ ಬ್ಯಾಂಕಾಕ್ ಪ್ರವಾಸಕ್ಕೆ ಕಳೆದ ಮೂರು ದಿನಗಳ ಹಿಂದೆ ತೆರಳಿದಂತಹ ಸ್ಪಂದನ ಮತ್ತೆ ವಾಪಸ್ ಆಗಿದ್ದು ಮೃತರಾಗಿ. ನಿದ್ರೆಗೆ ಜಾರಿದಂತಹ ಸಮಯದಲ್ಲಿ ಲಘು ಹೃದಯಘಾತ ಉಂಟಾಗಿ ಸ್ಪಂದನ ಎಲ್ಲರನ್ನೂ ಅನಾಥರನ್ನಾಗಿಸಿ ಇಹಲೋಕ ತ್ಯಜಿಸಿದ್ದಾರೆ.
ಅತಿ ಚಿಕ್ಕ ವಯಸ್ಸಿನಲ್ಲಿಯೇ ಹೃದಯಘಾತ ಸಮಸ್ಯೆ ಇಂದಾಗಿ ಸ್ಪಂದನ ಇಹಲೋಕ ತ್ಯಜಿಸಿರುವುದು ಪ್ರತಿಯೊಬ್ಬ ಅಭಿಮಾನಿಗಳಿಗೂ ಬೇಸರವನ್ನು ಉಂಟುಮಾಡಿದೆ. ಕಡಕ್ ಪೊಲೀಸ್ ಅಧಿಕಾರಿಯಾಗಿದ್ದ ಬಿಕೆ ಶಿವರಾಂ ಅವರ ಮಗಳಾಗಿ ಜನಿಸಿದ ಸ್ಪಂದನ ಕಳೆದ ಕೆಲವು ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಡೆದಂತಹ ನಮ್ ಕಥೆ ನಿಮ್ಮ ಜೊತೆ ಎಂಬ ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ವಿಡಿಯೋ ಸದ್ಯ ಸೋಶಿಯಲ್
ಮೀಡಿಯಾದಲ್ಲಿ ಹರಿದಾಡುತ್ತಿದ್ದು ಸ್ಪಂದನ ಅವರಿಗೆ ರಕ್ಷಿತ್ ಎಂಬ ಅಣ್ಣನಿರುತ್ತಾರೆ. ಚಿಕ್ಕಂದಿನಿಂದಲೂ ಒಟ್ಟಿಗೆ ಆಡಿ ಬೆಳೆದಂತಹ ಇವರಿಬ್ಬರ ನಡುವೆ ಪ್ರೀತಿ ಎಷ್ಟಿತ್ತು ಅಷ್ಟೇ ಜಗಳ ಕೂಡ ಆಡ್ತಿದ್ರಂತೆ. ಇನ್ನು ಬಹಳ ಸೈಲೆಂಟ್ ಹಾಗೂ ಸೌಮ್ಯ ಸ್ವಭಾವದ ಹುಡುಗಿಯಾಗಿದ್ದ ಸ್ಪಂದನ ಅವರು ತಮ್ಮ ಅಣ್ಣನೊಂದಿಗೆ ಎಷ್ಟೇ ಜಗಳ ಮಾಡಿದರು ಆತ ಎಷ್ಟೇ ಹೊಡೆದರು ಬೈದರು ಅದನ್ನೆಲ್ಲ ಸಂಜೆ ತಂದೆ ಬಂದ ಕೂಡಲೇ ಒಪ್ಪಿಸುತ್ತಿದ್ದಾರಂತೆ.
ಹೀಗಾಗಿ ಮನೆಯಲ್ಲಿ ಈಕೆಯನ್ನು ಚಾಡಿ ಬುರುಕಿ ಎಂದು ಸಹ ಕರೆಯುತ್ತಿದ್ದರಂತೆ. ಇನ್ನು ಸ್ಪಂದನ ಅವರನ್ನು ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ಅಚ್ಚು ಎಂದು ಕರೆಯುತ್ತಾರೆ. ಅಲ್ಲದೆ ಸದಾ ಕಾಲ ಚಿಕ್ಕ ಚಿಕ್ಕ ಹಾಗೂ ಅತಿ ಕಡಿಮೆ ಬಟ್ಟೆ ಹಾಕುತ್ತಿದ್ದ ಕಾರಣ ಸ್ಪಂದನ ಅವರಿಗೆ ತಂದೆ ಶಿವರಾಮ್ ಅವರು ಮೋಗ್ಲಿ ಎಂಬ ಅಡ್ಡ ಹೆಸರನ್ನಿಟ್ಟಿದರಂತೆ. ಇನ್ನು ವಿಶೇಷವೆಂದರೆ ಡ್ಯೂಟಿ ನಿಮಿತ್ತ ತಂದೆ ಸ್ಟೇಷನ್ನಲ್ಲಿ ಇರುತ್ತಿದ್ದಾಗಲೆಲ್ಲ ಸ್ಪಂದನ ಅವರನ್ನು ಅಣ್ಣ ರಕ್ಷತ್ ಜೋಪಾನ ಮಾಡುತ್ತಿದ್ದರಂತೆ.
ಸ್ಪಂದನ(Spandhana) ಹಾಗೂ ವಿಜಯ್ ರಾಘವೇಂದ್ರ ಅವರ ಪ್ರೀತಿಯ ವಿಚಾರ ಮನೆಯವರಿಗೆ ತಿಳಿದ ನಂತರ ಮನೆಯಲ್ಲಿ ಚಿತ್ರರಂಗದಲ್ಲಿರುವವರಿಗೆ ಮದುವೆ ಮಾಡಿಕೊಡೋದು ಬೇಡ ಎಂಬ ಮಾತು ಕೇಳಿ ಬಿಟ್ಟರು, ಆದರೆ ಎಲ್ಲವನ್ನು ಯೋಚಿಸಿ ಅಳೆದು ತೂಗಿ ನೋಡಿದಾಗ ವಿಜಯ್ ರಾಘವೇಂದ್ರ ಎಲ್ಲದಕ್ಕೂ ತದ್ವಿರುದ್ಧವಾಗಿ ಇದ್ದ ಕಾರಣ ಅವರ ಸರಳತೆ ಸಜ್ಜನಿಕೆಯ ವ್ಯಕ್ತಿತ್ವವನ್ನು ಇಷ್ಟಪಟ್ಟು ವಿಜಯ್ ರಾಘವೇಂದ್ರ(Vijay Raghavendra) ಅವರಿಗೆ ಮದುವೆ ಮಾಡಿ ಕೊಟ್ಟರಂತೆ.
ಈ ಕಾರ್ಯಕ್ರಮದಲ್ಲಿ ನನ್ನ ಭಾವನಾಗಿ ವಿಜಯ್ ರಾಘವೇಂದ್ರ ಅವರನ್ನು ಪಡೆದಿದ್ದು ಅದೃಷ್ಟ ಎಂದು ರಕ್ಷಿತ್(Rakshith) ಹಲವರು ಬಾರಿ ಹೇಳಿದರು. ಇದನ್ನೂ ಓದಿ.. ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ರಾತ್ರಿ ಮಲಗಿದ್ದೆ ಬೆಳಗ್ಗೆ ಏಳಲೇ ಇಲ್ಲ ಇದ್ದಕಿದ್ದಂತೆ ಆಗಿದ್ದೇನು ನೋಡಿ