Vijay Sethupathi: ಆಕೆಯ ಜೊತೆ ನಾನು ರೋ-ಮ್ಯಾನ್ಸ್ ಮಾಡಲಾರೆ, ಬೇರೆ ಹೀರೋಯಿನ್ ಬೇಕು ಎಂದು ಕರ್ನಾಟಕದ ನಟಿಯನ್ನು ರಿಜೆಕ್ಟ್ ಮಾಡಿದ ವಿಜಯ್ ಸೇತುಪತಿ! ಅಷ್ಟಕ್ಕೂ ಆ ನಟಿ ಯಾರು ಗೊತ್ತೇ..

ತಮಿಳು ಸಿನಿಮಾ ರಂಗದಲ್ಲಿ ಖಡಕ್ ಪಾತ್ರಗಳ ಮೂಲಕ ತೆರೆಯ ಮೇಲೆ ಮಿಂಚಿ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವಂತಹ ವಿಜಯ್ ಸೇತುಪತಿಯವರು(Vijay Sethupathi) ಕಾಲಿವುಡ್ನ ಬಹು ಬೇಡಿಕೆಯ ನಟ. ನಟನಿಗೆ ಬಾಹ್ಯ ರೂಪ ಸೌಂದರ್ಯ ಮುಖ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿರುವಂತಹ ವಿಜಯ್ ಸೇತುಪತಿ ಯಾವುದೇ ಚಿತ್ರದಲ್ಲಿ ಅಭಿನಯಿಸಿದರು ಆ ಸಿನಿಮಾ ಬಹುದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ.

ಅದರಂತೆ ಜವಾನ್(Jawaan) ಸಿನಿಮಾದ ಸಕ್ಸಸ್ ನ ಖುಷಿಯಲ್ಲಿ ತೇಲುತ್ತಿರುವಂತಹ ವಿಜಯ್ ಸೇತುಪತಿಯವರು ಕರ್ನಾಟಕ ಮೂಲದ ನಟಿ ಒಬ್ಬರನ್ನು ತಿರಸ್ಕರಿಸಿದ್ದರಂತೆ. ಹೌದು ಗೆಳೆಯರೇ ಆಕೆಯ ಜೊತೆ ನಾನು ರೋ-ಮ್ಯಾನ್ಸ್ ಮಾಡಲಾರೆ ಬೇರೆ ಹೀರೋಯಿನನ್ನು ಕರೆಸಿ ಎಂದು ಕಾರಣ ನೀಡಿ ವಿಜಯ್ ಸೇತುಪತಿ ಉಪ್ಪೇನಾ ಸಿನಿಮಾ ಖ್ಯಾತಿಯ ಕೃತಿ ಶೆಟ್ಟಿ(Krithi Shetty) ಅವರನ್ನು ರಿಜೆಕ್ಟ್ ಮಾಡಿದ್ದಾರಂತೆ.

ಹೌದು ಗೆಳೆಯರೇ ತೆಲುಗುನ ಉಪ್ಪೇನ ಸಿನಿಮಾದ ಮೂಲಕ ಟಾಲಿವುಡ್ ಸಿನಿ ಇಂಡಸ್ಟ್ರಿಯನ್ನು ಪ್ರವೇಶ ಮಾಡಿದಂತಹ ಕೃತಿ ಶೆಟ್ಟಿ ತೆಲುಗು ಸಿನಿಮಾ ಇಂಡಸ್ಟ್ರಿಯ ಬಹು ಬೇಡಿಕೆಯ ನಟಿ. ಸಿನಿಮಾ ಇಂಡಸ್ಟ್ರಿಯನ್ನು ಪ್ರವೇಶ ಮಾಡಿದ ಕೆಲವು ವರ್ಷಗಳೊಂದಿಗೆ ಒಳ್ಳೊಳ್ಳೆ ಆಫರ್ ಗಿಟ್ಟಿಸಿಕೊಂಡು ಸಿಕ್ಕಾಪಟ್ಟೆ ಬ್ಯುಸಿಯಾಗಿರುವಂತಹ ಕೃತಿ ಶೆಟ್ಟಿ(Krithi Shetty) ಅವರಿಗೆ ವಿಜಯ್ ಸೇಟುಪತಿ ಅವರ ಜೊತೆಗೆ ನಟಿಸುವ ಅವಕಾಶ ದೊರಕಿತ್ತು.

ಈ ಹಿಂದೆ ತೆಲುಗಿನ ಉಪೇಂದ್ರ ಸಿನಿಮಾದಲ್ಲಿ ವಿಜಯ್ ಸೇತುಪತಿ ಕೃತಿ ಶೆಟ್ಟಿಯ ತಂದೆಯಾಗಿ ಅಭಿನಯಿಸಿದ್ದರು. ಆದರೆ ಈಗ ಆಕೆಯೊಂದಿಗೆ ನಾಯಕನಟನಾಗಿ ಪಾತ್ರ ಮಾಡಲು ಸಾಧ್ಯವಿಲ್ಲ ಎಂದು ವಿಜಯ್ ಸೇತುಪತಿ ತಿರಸ್ಕರಿಸಿದ್ದಾರೆ. ಲಾಭಂ ಸಿನಿಮಾದ ಪ್ರಚಾರದ ವೇಳೆ ಈ ಒಂದು ವಿಡಿಯೋ ವೈರಲ್ ಆಗಿದ್ದು, “ನಾನು ಉಪ್ಪೇನಾ(Uppena) ಚಿತ್ರದಲ್ಲಿ ಕೃತಿಗೆ ತಂದೆಯಾಗಿ ಅಭಿನಯಿಸಿದ್ದೇನೆ ಎಂಬುದು ಚಿತ್ರ ತಂಡಕ್ಕೆ ಗೊತ್ತಿರಲಿಲ್ಲ.

ನನ್ನ ಮಗಳೆಂದು ಭಾವಿಸಿದ ಮೇಲೆ ಅವಳೊಂದಿಗೆ ನಾನು ಹೇಗೆ ರೋಮ್-ಯಾನ್ಸ್ ಮಾಡಲು ಸಾಧ್ಯ? ಉಪ್ಪೇನ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣದ ಮೇಲೆ ನನ್ನನ್ನು ನಿನ್ನ ತಂದೆಯಂದೆ ಭಾವಿಸು ಎಂದಿದ್ದೆ, ನನ್ನ ಮಗನಿಗೆ ಸುಮಾರು ಹದಿನೈದು ವರ್ಷ ಆತ ಕೃತಿಗಿಂತ ಸ್ವಲ್ಪ ಚಿಕ್ಕವನು ಕೃತಿಯನ್ನು ಕೂಡ ನಾನು ಮಗಳಂತೆ ಭಾವಿಸುತ್ತೇನೆ. ಆದರೆ ತೆರೆಯ ಮೇಲೆ ನಾನು ಹೇಗೆ ಅವಳೊಂದಿಗೆ ರೋಮ್’ಯಾನ್ಸ್ ಮಾಡಲು ಸಾಧ್ಯ? ಹೀಗಾಗಿ ಚಿತ್ರದ ನಾಯಕಿಯಾಗಿ ಅವಳ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದೇನೆ” ಎಂದಿದ್ದಾರೆ.

Leave a Comment