ಲೈಗರ್ ಟ್ರೇಲರ್ ರಿಲೀಸ್ ಗೆ ಬಂದ ವಿಜಯ ದೇವರಕೊಂಡ ಧರಿಸಿದ್ದ ಚಪ್ಪಲಿಯ ಬೆಲೆ ಎಷ್ಟಿತ್ತು ನೋಡಿ!

ಟಾಲಿವುಡ್ ನಲ್ಲಿ ನಟ ವಿಜಯ್ ದೇವರಕೊಂಡ ಎಲ್ಲರ ಫೇವರೆಟ್ ಆಕ್ಟರ್! ಸಿನಿಪ್ರಿಯರಿಗೆ ತುಂಬಾನೇ ಇಷ್ಟವಾಗುವ ನಟ ವಿಜಯ್ ಈಗಾಗಲೇ ಸಿಕ್ಕಾಪಟ್ಟೆ ಫ್ಯಾನ್ಸ್ ನ್ನು ಗಳಿಸಿದ್ದಾರೆ. ವಿಜಯ ದೇವರಕೊಂಡ ಅತ್ಯಂತ ನೈಜ ಅಭಿನಯಕ್ಕೆ ಹೆಸರಾಗಿದ್ದು, ಹೆಣ್ಣುಮಕ್ಕಳ ಹಾಟ್ ಫೇವರೆಟ್ ನಟ ಎನಿಸಿದ್ದಾರೆ. ಸದ್ಯ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ ವಿಜಯ್ ದೇವರಕೊಂಡ ಅವರ ಲೈಗರ್ ಸಿನಿಮಾ.

ಹೌದು ಬಾಲಿವುಡ್ ನಲ್ಲಿಯೂ ಅದೃಷ್ಟ ಪರೀಕ್ಷೆಗೆ ನಿಂತಿರುವ ನಟ ವಿಜಯ್ ದೇವರಕೊಂಡ ನಟಿ ಅನನ್ಯ ಪಾಂಡೆ ಜೊತೆ ಲೈಗರ್ ಸಿನಿಮಾದಲ್ಲಿ ತೆರೆಹಂಚಿಕೊಂಡಿದ್ದರೆ. ಇನ್ನು ಬಾಲಿವುಡ್ ನಲ್ಲಿ ಈ ಸಿನಿಮಾ ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಹುಟ್ಟು ಹಾಕಿದ್ದು, ಬಾಲಿವುಡ್ ನ ಹೆಸರಾಂತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಹಾಗೂ ರಣವೀರ್ ಸಿಂಗ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಲೈಗರ್ ಸಿನಿಮಾ ಟ್ರೈಲರ್ ಬಿಡುಗಡೆಯ ಸಮಯದಲ್ಲಿ ನಟ ವಿಜಯ ದೇವರಕೊಂಡ, ಅನನ್ಯ ಪಾಂಡೆ, ಕರಣ್ ಜೋಹರ್, ರಣವೀರ್ ಸಿಂಗ್ ಹಾಗೂ ಮತ್ತಿತರ ಸೆಲೆಬ್ರಿಟಿಗಳು ಉಪಸ್ಥಿತರಿದ್ದರು.

ಈ ಸಮಯದಲ್ಲಿ ಎಲ್ಲರೂ ಸೂಟು ಬೂಟು ತೊಟ್ಟು ಸ್ಟ್ರೈಲ್ ಆಗಿ ಬಂದಿದ್ರೆ ನಟ ವಿಜಯ್ ದೇವರಕೊಂಡ ಮಾತ್ರ ಬಹಳ ಸರಳವಾಗಿ ಟಿ ಶರ್ಟ್ ಹಾಗೂ ಸಿಂಪಲ್ ಬಾಟಮ್ ಧರಿಸಿದ್ದರು. ಅದಕ್ಕಿಂತ ಹೆಚ್ಚು ಅವರು ಬಹಳ ಕಡಿಮೆ ಬೆಲೆಯ ಚಪ್ಪಲಿ ಧರಿಸಿದ್ದರು. ಕೇವಲ್ಲ 199ರೂ. ಎನ್ನಲಾದ ಆ ಚಪ್ಪಲಿ ಧರಿಸಿ ಬಂದಿತ್ತು ಎಲ್ಲರಿಗೂ ಆಶ್ವರ್ಯವಾಯ್ತು. ಇನ್ನು ಇಷ್ಟು ಸರಳವಾಗಿ ಬಂದಿದ್ದ ವಿಜಯ್ ಅವರನ್ನ ನೋಡಿ ನಟ ರಣವೀರ್ ಸಿಂಗ್ ಇಲ್ಲಿ ನಡೆಯುತ್ತಿರುವ ಸಿನಿಮಾ ಟ್ರೇಲರ್ ನನ್ನ ಸಿನಿಮಾವೂ ಅಥವಾ ನಿಮ್ಮದೂ ಎಂದು ಅನುಮಾನ ಬರುತ್ತಿದೆ ಎಂದು ತಮಾಷೆ ಮಾಡಿದರು. ಅದಕ್ಕೆ ವಿಜಯ್ ನಾನಿರೋದೇ ಹೀಗೆ ಎಂದು ಉತ್ತರಿಸಿದರು.

ವಿಜಯ್ ದೇವರ ಕೊಂಡ ಅವರ ಸರಳ ವ್ಯಕ್ತಿತ್ವವನ್ನು ನೋಡಿ ಜನರೂ ಆಶ್ಚರ್ಯ ವ್ಯಕ್ತಪಡಿಸಿತ್ತಾರೆ. ಇಂದು ಸ್ಟಾರ್ ನಟ ಎನಿಸಿಕೊಂಡಿರುವ ವಿಜಯ್ ಬೇಕಾದ ಹಾಗೆ ಶೋಕಿ ಮಾಡಬಹುದು. ಆದರೆ ಅವರು ಇದೆಲ್ಲವನ್ನು ಬಿಟ್ಟು ಹೆಚ್ಚು ಸರಳವಾಗಿಯೇ ಇರುತ್ತಾರೆ. ಇಂದು ಬಾಲಿವುಡ್ಡಿಗರೂ ಮಾತನಾಡಿ ಕೊಳ್ಳುವಷ್ಟು ಸರಳ ವ್ಯಕ್ತಿ ಅವರು.ವಿಜಯ ದೇವರ ಕೊಂಡ ಅಂದ್ರೆ ಇಂದು ಸೌತ್ ನಲ್ಲಿ ಮಾತ್ರವಲ್ಲ ಬಾಲಿವುಡ್ ನಟಿಯರಿಗೂ ಕ್ರೇಜ್.

ಇತ್ತೀಚಿಗೆ ಕಾಫಿ ವಿಟ್ ಕರಣ್ ಶೋ ನಲ್ಲಿ ಉಪಸ್ಥಿತರಿದ್ದ ನಟಿ ಜಾಹ್ನವಿ ಹಾಗೂ ಸಾರಾ ಅಲಿ ಖಾನ್ ಕೂಡ ಕ್ರಶ್ ಯಾರು ಅಂದ್ರೆ ಈ ಹೆಸರನ್ನೇ ಹೇಳಿದ್ದಾರೆ. ಇನ್ನು ಬಹಳ ಸಮಯದ ಹಿಂದಿನಿಂದಲೂ ನಟಿ ರಶ್ಮೀಕ ಮಂದಣ್ಣ ಹಾಗೂ ವಿಜಯ್ ಬಗ್ಗೆ ಗಾಸಿಪ್ ಗಳು ಕೇಳಿ ಬರುತ್ತಿವೆ. ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಮೆಚ್ಚುಗೆಯ ಮಾತುಗಳನ್ನ ಆಡುತ್ತಿರುತ್ತಾರೆ. ಆದರೆ ಅವರ ರಿಲೇಶನ್ ಶಿಪ್ ಬಗ್ಗೆ ಎಲ್ಲೂ ಮಾಹಿತಿ ಇಲ್ಲ. ಒಟ್ಟಿನಲ್ಲಿ ಮೋಸ್ಟ್ ವಾಂಟೆಡ್ ಬ್ಯಾಚುಲರ್ ವಿಜಯ ದೇವರಕೊಂಡ ದಿನದಿಂದ ದಿನಕ್ಕೆ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

Leave a Comment