Vasista Simha: ಗೌರಿ ಗಣೇಶ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿದ ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ದಂಪತಿಗಳು!

Vasista Simha: ಇತ್ತೀಚಿನ ದಿನಗಳಲ್ಲಿ ಸ್ಟಾರ್ ಸೆಲೆಬ್ರಿಟಿಗಳು ಯಾವುದೇ ಹಬ್ಬ ಹರಿದಿನಗಳು ಬಂದರು ಅದನ್ನು ತಮ್ಮ ಮನೆಯವರೊಟ್ಟಿಗೆ ಸೇರಿ ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾ ಅದರ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ವೈರಲ್ ಆಗುತ್ತಿರುತ್ತಾರೆ. ಅದರಂತೆ ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ವಶಿಷ್ಟ ಸಿಂಹ(Vasista Simha) ಹಾಗೂ ಹರಿಪ್ರಿಯ(Haripriya) ಜೋಡಿಗಳು ಕೂಡ ಕಳೆದ ಕೆಲ ದಿನಗಳ ಹಿಂದೆ ವರಮಹಾಲಕ್ಷ್ಮಿ ಹಬ್ಬವನ್ನು ಬಹಳ ವೈಭವೊಪೂರಿತವಾಗಿ ಆಚರಿಸಿ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದರು.

ಆದರಿಂದ ಪರಿಸರಸ್ನೇಹಿ ಗಣಪನನ್ನು ತಂದು ಮನೆಯಲ್ಲಿ ಪ್ರತಿಷ್ಠಾಪಿಸಿ ಹೂಮಾಲೆಗಳಿಂದ ಗಣೇಶ ಹಾಗೂ ಗೌರಿಯನ್ನು ಅಲಂಕರಿಸಿ ದೇವರಿಗೆ ಹಾಗೂ ನೈವೇದ್ಯವನ್ನು ಅರ್ಪಿಸಿ ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಬಾಗಿನವನ್ನು ರೆಡಿ ಮಾಡಿ ದೇವರ ಮುಂದಿಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳನ್ನೆಲ್ಲ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವಂತಹ ದಂಪತಿಗಳು ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂಬ ಕ್ಯಾಪ್ಶನ್ ಬರೆದಿದ್ದಾರೆ.

ಫೋಟೋದಲ್ಲಿ ನಟಿ ಹರಿಪ್ರಿಯಾ(Haripriya) ಅವರು ಸೀರೆಯನ್ನು ಉಟ್ಟಿಕೊಂಡು ಕೈಗಳಿಗೆ ಬಳೆ ಓಲೆ ಸರ ಹಾಗೂ ಹಣೆಗೆ ಕುಂಕುಮವಿಟ್ಟು ಬಹಳ ಸಂಪ್ರದಾಯಕವಾಗಿ ಕಾಣಿಸಿಕೊಂಡರೆ ನಟ ವಸಿಷ್ಠ ಸಿಂಹ ಕಚ್ಚೆ ಪಂಚೆ ಧರಿಸಿ ತಮ್ಮ ಪತ್ನಿಯೊಂದಿಗೆ ಕುಳಿತು ಗಣಪತಿ ಬಪ್ಪನಿಗೆ (Ganesha) ಪೂಜೆ ನೆರವೇರಿಸಿದ್ದಾರೆ. ಸದ್ಯ ಈ ಫೋಟೋಗಳೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು,

ಯಾವುದೇ ಹಬ್ಬ ಹರಿದಿನಗಳಾದರು ಬಹಳ ಅರ್ಥಪೂರ್ಣವಾಗಿ ಪತಿ-ಪತ್ನಿ ಇಬ್ಬರು ಸೇರಿ ಆಚರಿಸುವ ಪರಿ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ವಸಿಷ್ಟ ಸಿಂಹ ಅಭಿನಯದ ಐರ(Ira) ಮತ್ತು ಲವ್ ಲಿ(Love li) ಎರಡು ಸಿನಿಮಾಗಳು ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ ತೆರೆ ಕಾಣುತ್ತಿದ್ದು, ಪತಿಯ ಸಿನಿಮಾಗಳಿಗೆ ಪ್ರೋತ್ಸಾಹಿಸುತ್ತಾ ಹರಿಪ್ರಿಯ ಕೂಡ ಬಣ್ಣದ ಲೋಕದತ್ತ ಗಮನಹರಿಸುತ್ತಿದ್ದಾರೆ.

Leave a Comment