ದುಬಾರಿ ಮಾರುತಿ ಕಾರನ್ನು ಖರೀದಿ ಮಾಡಿದ್ದಾಳೆ ನಮ್ಮ ವಂಶಿಕಾ ಪುಟ್ಟಿ. ಈ ಕಾರಿನ ಬೆಲೆ ಎಷ್ಟು ಗೊತ್ತಾ

ಮಾಸ್ಟರ್ ಆನಂದ್ ಮಗಳು ವಂಶಿಕ ಇದೀಗ ಕರ್ನಾಟಕದ ಮನೆಮಾತಾಗಿದ್ದಾಳೆ. ಎಲ್ಲಿ ನೋಡಿದರೂ ವಂಶಿಕಾ ಅವಳದ್ದೇ ಹವಾ. ಇಂಟರ್ನೆಟ್ನಲ್ಲಿ ಟಿವಿಯಲ್ಲಿ ಎಲ್ಲಿ ನೋಡಿದರೂ ವಂಶಿಕಾ ಕಾಣುತ್ತಾಳೆ. ಕೇವಲ ಐದು ವರ್ಷದ ವಯಸ್ಸಿನ ವಂಶಿಕಾ ತನ್ನ ವಯಸ್ಸಿಗೂ ಮೀರಿದ ಸಾಧನೆಯನ್ನು ಮಾಡಿದ್ದಾಳೆ. ಈಕೆಯು ಚಿಕ್ಕವಯಸ್ಸಿಗೆ ಇಷ್ಟೊಂದು ಟ್ಯಾಲೆಂಟ್ ಬೆಳೆಸಿಕೊಂಡಿರೋದನ್ನಾ ಪ್ರತಿಯೊಬ್ಬರು ಇಷ್ಟಪಡುತ್ತಿದ್ದಾರೆ. ಹುಟ್ಟಿನಿಂದಲೇ ಈಕೆಗೆ ಕಲಾಸರಸ್ವತಿ ಒಲಿದು ಹೊಂದಿದ್ದಾಳೆ.

ವಂಶಿಕ ಅವರ ತಂದೆ ಮಾಸ್ಟರ್ ಆನಂದ್ ಕೂಡ ಚಿಕ್ಕ ವಯಸ್ಸಿನಲ್ಲೇ ಅಭಿನಯದಲ್ಲಿ ಸೈ ಎನಿಸಿಕೊಂಡಿದ್ದರು ಇದೀಗ ಮಾಸ್ಟರ್ ಆನಂದ್ ಅವರ ಮಗಳು ಮೋನಿಕಾ ತನ್ನ ತಂದೆ ಗೂ ಮೀರಿದ ಅಭಿನಯವನ್ನು ಪ್ರದರ್ಶಿಸುತ್ತಿದ್ದಾಳೆ. ತನ್ನ ತಂದೆಯಿಂದಲೇ ಹುಟ್ಟುತ್ತಲೇ ಅಭಿನಯವು ಉಡುಗೊರೆಯಾಗಿ ಒಲಿದು ಬಂದಿದೆ. ಕೇವಲ ಒಂದು ವರ್ಷದ ಒಳಗೆ ಕರ್ನಾಟಕದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾಳೆ ವಂಶಿಕಾ. ರಿಯಾಲಿಟಿ ಶೋಗಳಲ್ಲಿ ವಂಶಿಕಾ ಹವಾ ಕಡಿಮೆ ಇಲ್ಲ.

ಕಲರ್ಸ್ ಕನ್ನಡದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಎಂಬ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ವಂಶಿಕ ಸ್ಪರ್ಧಿಯಾಗಿ ಭಾಗವಹಿಸಿದ್ದಳು. ವಂಶಿಕಾ ಮತ್ತು ಅಮ್ಮ ಯಶಸ್ವಿನಿ ಈ ಸ್ಪರ್ಧೆಯ ಫೈನಲ್ ತಲುಪಿ ಕೊನೆಗೆ ವಿನ್ನರ್ ಪಟ್ಟವನ್ನು ಕೂಡ ಮುಡಿಗೇರಿಸಿಕೊಂಡಿದ್ದರು. ಅದ್ಭುತವಾದ ಮಾತಿನ ವೈಖರಿ ಮತ್ತು ನಟನಾ ಕೌಶಲ್ಯದಿಂದ ವಂಶಿಕಾ ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್ ಆಗಿದ್ದಾಳೆ. ಈ ರಿಯಾಲಿಟಿ ಶೋ ಗೆದ್ದು ವಂಶಿಕಾ ಮತ್ತು ಅಮ್ಮ ಯಶಸ್ವಿನಿ ಐದು ಲಕ್ಷ ರುಪಾಯಿಗಳ ಬಹುಮಾನ ಹಾಗೆ ಪ್ರತಿ ವಾರಕ್ಕೆ ತಲಾ ಇಪ್ಪತ್ತು ಸಾವಿರ ರುಪಾಯಿಗಳ ಸಂಭಾವನೆಯನ್ನು ಕೂಡ ಪಡೆದಿದ್ದರು.

ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಮುಗಿಯುತ್ತಿದ್ದಂತೆ ವಂಶಿಕಾ ಕಲರ್ಸ್ ಕನ್ನಡದ ಇನ್ನೊಂದು ಹೆಸರಾಂತ ರಿಯಾಲಿಟಿ ಶೋ ಗಿಚ್ಚ ಗಿಲಿಗಿಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಳೆ. ಹೆಸರು ಹಣ ಎಲ್ಲವೂ ಅಂದುಕೊಂಡಂತೆ ವಂಶಿಕಾ ಳಿಗೆ ಚಿಕ್ಕವಯಸ್ಸಿನಲ್ಲೇ ಸಿಕ್ಕಿರುವುದು ವಂಶಿಕ ತಂದೆ ತಾಯಿಗೂ ಕೂಡ ಸ್ವಂತ ಬದುಕಿನ ಹಾಕಿ ಈ ಸಂತಸವನ್ನು ಈಗ ಸಂಭ್ರಮ ದಿಂದ ಆಚರಣೆ ಮಾಡುತ್ತಿದ್ದಾರೆ. ವಂಶಿಕಾ ಅವಳ ಅಮ್ಮ ಯಶಸ್ವಿನಿ ಇದೀಗ ಹೊಸ ದುಬಾರಿ ಮಾರುತಿ ಸುಜುಕಿ ಕಾರನ್ನು ಖರೀದಿ ಮಾಡಿದ್ದಾರೆ. ಇಡೀ ಭಾರತ ದೇಶದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಸೇಲ್ ಆಗುತ್ತಿರುವ ಮಾರುತಿ ಬ್ರೀಜ್ಜಾ ಎಸ್ಯುವಿ ಕಾರ್ ಅನ್ನು ವಂಶಿಕಾ ಖರೀದಿ ಮಾಡಿದ್ದಾಳೆ.

ಮಾರುತಿ ಬ್ರೀಜಾ ಕಾರ್ ವಿಶ್ವದಲ್ಲೇ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿದೆ. ಪ್ರತಿವರ್ಷ ಒಂದೂವರೆ ಲಕ್ಷಕ್ಕೂ ಅಧಿಕ ಕಾರುಗಳು ಮಾರಾಟವಾಗುತ್ತಿದೆಯೆಂದರೆ ನೀವೆಲ್ಲಾ ನಂಬಲೇ ಬೇಕು. ಒಳ್ಳೆಯ ಗುಣಮಟ್ಟ ಹೊಂದಿರುವ ಮಾರುತಿ ಬ್ರೀಜ್ಜಾ ಕಾರು ತೆಗೆದುಕೊಂಡಿರುವ ವಂಶಿಕಾ ಮತ್ತು ಅಮ್ಮ ಇದೀಗ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಇನ್ನು ಈ ಕಾರಿನ ಬೆಲೆ ವಿಚಾರಕ್ಕೆ ಬಂದರೆ ಮಾರುತಿ ಬ್ರಿಜಾ ಕಾರ್ ನ ಬೇಸ್ ಮಾಡೆಲ್ ಬೆಲೆ ಎಳು ಲಕ್ಷ ರೂಪಾಯಿಗಳಿಂದ ಶುರುವಾಗುತ್ತೆ. ಟಾಪ್ ಮಾಡೆಲ್ ಹನ್ನೊಂದು ಲಕ್ಷ ರೂಪಾಯಿಗೆ ಸಿಗುತ್ತೆ. ವಂಶಿಕಾ ಅಮ್ಮ ಹನ್ನೊಂದು ಲಕ್ಷ ರೂಪಾಯಿ ಬೆಲೆ ಬಾಳುವ ಟೋಪ್ ಮಾಡಲ್ ಅನ್ನು ಖರೀದಿ ಮಾಡಿದ್ದಾರೆ.

Leave a Comment