ಕೋಟಿ ಕೋಟಿ ಬೆಲೆಬಾಳುವ ಬಿಎಂಡಬ್ಲ್ಯು ಕಾರನ್ನು ಖರೀದಿ ಮಾಡಿ ನೆಟ್ಟಿಗರ ಟೀಕೆಗೆ ಗುರಿಯಾದ ನಟ ಜಗ್ಗೇಶ್

ಸೆಲೆಬ್ರಿಟಿಗಳು ಅಂದ ಮೇಲೆ ಟೀಕೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಸೆಲೆಬ್ರಿಟಿಗಳ ನಡತೆಗಳನ್ನು ಸಿಸಿ ಕ್ಯಾಮೆರಾ ದಂತೆ ಮೀಡಿಯಾಗಳು ರೆಕಾರ್ಡ್ ಮಾಡುತ್ತ‍ಾರೆ. ಒಂದು ಹೆಜ್ಜೆ ಇಡುವುದರಲ್ಲಿ ತಪ್ಪಾದರೂ ಸಹ ಅದು ಮರುದಿನ ಟೀವಿಯಲ್ಲಿ ದೊಡ್ಡ ನ್ಯೂಸ್ ಆಗಿಬಿಡುತ್ತೆ. ಇತ್ತೀಚೆಗೆ ನವರಸ ನಾಯಕ ನಟ ಜಗ್ಗೇಶ್ ಅವರು ಕಾರ್ ಒಂದನ್ನು ಖರೀದಿ ಮಾಡಿದ್ದಾರೆ. ಜಗ್ಗೇಶ್ ಅವರು ಹೊಸ ಬಿಎಂಡಬ್ಲ್ಯು ಕಾರ್ ಅನ್ನು ತನ್ನ ಪತ್ನಿಗೆ ಉಡುಗೊರೆ ಮಾಡಿದ್ದಾರೆ.

ಇದೀಗ ಜಗ್ಗೇಶ್ ಅವರು ಖರೀದಿ ಮಾಡಿರುವ ಬಿಎಂಡಬ್ಲ್ಯೂ ಕಾರ್ ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಆಗುತ್ತಿವೆ. ಜಗ್ಗೇಶ್ ಅವರು ಕೋಟಿ ಕೋಟಿ ಹಣವನ್ನು ಕೊಟ್ಟು ಬಿಎಂಡಬ್ಲ್ಯು ಕಾರ್ ತೆಗೆದುಕೊಂಡರೆ ಅದಕ್ಕೆ ಜನ ಏಕೆ ಟೀಕೆ ಮಾಡುತ್ತಾರೆ ಎಂದು ನಿಮಗೆಲ್ಲ ಪ್ರಶ್ನೆ ಮೂಡಬಹುದು. ಇದಕ್ಕೆ ಕಾರಣ ಜಗ್ಗೇಶ್ ಅವರ ಪುತ್ರ. ಹತ್ತು ತಿಂಗಳ ಹಿಂದೆ ಜಗ್ಗೇಶ್ ಅವರ ಕಿರಿಯ ಪುತ್ರ ಯತಿರಾಜ್ ಚಿಕ್ಕಬಳ್ಳಾಪುರದಲ್ಲಿ ಕಾರು ಚಲಾಯಿಸುತ್ತಿದ್ದ ವೇಳೆ ಆ’ಕ್ಸಿ’ಡೆಂಟ್ ಮಾಡಿಕೊಂಡಿದ್ದ.

ಅದು ಸಾಮಾನ್ಯವಾದ ಅಪಘಾತವಲ್ಲ. ಸಿನೆಮಾ ಸ್ಟೈಲಿನಲ್ಲಿ ಕಾರನ್ನು ಎಗರಿಸಿ ಅಪಘಾತಕ್ಕೆ ಸಿಲುಕಿದ್ದ. ಸುಮಾರು ಹತ್ತು ಅಡಿಯಷ್ಟು ಎತ್ತರಕ್ಕೆ ಕಾರು ಜಿಗಿದಿತ್ತು. ಕಾರಿನಲ್ಲಿ ಏರ್ ಬ್ಯಾಗ್ ಇದ್ದಿದ್ದರಿಂದ ಯತಿರಾಜ್ ಪ್ರಾಣಾಪಾಯದಿಂದ ಪಾರಾಗಿದ್ದ. ಯತಿರಾಜ್ ಓಡಿಸುತ್ತಿದ್ದ ಬಿಎಂಡಬ್ಲ್ಯೂ ಕಾರ್ ಎತ್ತರಕ್ಕೆ ಜಿಗಿದು ಮರಕ್ಕೆ ಡಿಕ್ಕಿ ಹೊಡೆದು ಪುಡಿಪುಡಿಯಾಗಿತ್ತು. ಇದೀಗ ಜಗ್ಗೇಶ್ ಅವರು ಮತ್ತೆ ಬಿಎಂಡಬ್ಲ್ಯು ಕಾರನ್ನೇ ಖರೀದಿ ಮಾಡಿದ್ದಾರೆ. ಇದೇ ಕಾರಣಕ್ಕೆ ಜಗ್ಗೇಶ್ ಅವರನ್ನು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ .

ಮಗನ ಕೈಗೆ ಮತ್ತೆ ಬಿಎಂಡಬ್ಲ್ಯು ಕಾರ್ ಕೊಡಬೇಡಿ ಅವನು ಮತ್ತೆ ಎಗರಿಸಿ ಬಿಡುತ್ತಾನೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ನಿಮ್ಮ ಮಗ ಯತಿರಾಜ್ ಬಳಿ ಕೋಟಿ ಕೋಟಿ ಬೆಲೆ ಬಾಳುವ ಬಿಎಂಡಬ್ಲ್ಯು ಕಾರನ್ನು ಕೊಟ್ಟರೆ ಅವನು ಟಿಶ್ಕಾಂವ್ ಅಂತ ಎಗರಿಸಿ ಬಿಡುತ್ತಾನೆ ಅಂತ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಜಗ್ಗೇಶ್ ಅವರು ಮಡದಿಯ ಆಸೆಗೆ ಕೋಟಿ ಕೋಟಿ ವೆಚ್ಚ ಮಾಡಿ ಭಾರಿ ಕಾರನ್ನು ಖರೀದಿ ಮಾಡಿ ಇದೀಗ ಜನರ ಬಾಯಲ್ಲಿ ಟೀಕೆಗಳನ್ನು ಎದುರಿಸುವ ಪರಿಸ್ಥಿತಿ ಬಂದಿದೆ.

Leave a Comment