ಅಪ್ಪು ಅವರ ಕೊನೆಯ ಸಿನಿಮಾದ ಲುಕ್ ಹೇಗಿತ್ತು ನೋಡಿ. ಅಪ್ಪು ಅವರನ್ನು ಹಿಂದೆಂದೂ ನೋಡಿರದ ಹೊಸ ಅವತಾರ

ಅಪ್ಪು ಅವರನ್ನು ನಾವು ಎಷ್ಟು ಇಷ್ಟ ಪಡುತ್ತಿದ್ದೆವೋ ಅಪ್ಪು ಅವರ ಸಿನಿಮಾಗಳನ್ನು ಕೂಡ ಅಷ್ಟೇ ಇಷ್ಟ ಪಡುತ್ತಿದ್ದೆವು. ಪುನೀತ್ ಅವರ ಸಿನಿಮಾಗಳು ತುಂಬಾ ವಿಭಿನ್ನ ಮತ್ತು ವಿಶೇಷ ವಾಗಿರುತ್ತಿತ್ತು. ಯಾಕೆಂದರೆ ಪುನೀತ್ ರಾಜ್ ಕುಮಾರ್ ಅವರು ನಟಿಸುವ ಚಿತ್ರಗಳಲ್ಲಿ ಸಮಾಜಕ್ಕೆ ಉಪಯೋಗವಾಗುವಂತಹ ಮೆಸೇಜ್ ಇರುತ್ತಿತ್ತು ಮನೆಮಂದಿಯೆಲ್ಲಾ ಥಿಯೇಟರ್ ಗೆ ಬಂದು ಕೂತುಕೊಂಡು ಯಾವುದೇ ಮುಜುಗರವಿಲ್ಲದೆ ಸಿನಿಮಾವನ್ನು ನೋಡಿ ಆನಂದಪಡುವಂತಹ ಚಿತ್ರಗಳನ್ನೇ ಪುನೀತ್ ಅವರು ಮಾಡುತ್ತಿದ್ದರು.

ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ಮೇಲೆ ಇನ್ಮುಂದೆ ಕುಟುಂಬದವರೆಲ್ಲ ಹೋಗಿ ಥಿಯೇಟರ್ ನಲ್ಲಿ ಕುಳಿತುಕೊಂಡು ನೋಡುವಂಥ ಸಿನೆಮಾಗಳು ಬರುತ್ತೋ ಇಲ್ಲವೋ ಎಂಬ ಚಿಂತೆಯಾಗಿದೆ. ಪುನಿತ್ ಅವರನ್ನು ಕಳೆದುಕೊಂಡ ಮೇಲೆ ಕೂಡ ಪುನೀತ್ ಅವರ ಕೊನೆಯ ಸಿನಿಮಾವನ್ನು ನೋಡುವುದಕ್ಕೆ ಸಿಕ್ಕಿದ್ದು ನಮ್ಮೆಲ್ಲರ ಭಾಗ್ಯ. ಖಡಕ್ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡ ಪುನೀತ್ ರಾಜ್ ಕುಮಾರ್ ಅವರನ್ನು ಜೇಮ್ಸ್ ಚಿತ್ರದಲ್ಲಿ ನಾವೆಲ್ಲ ಕಣ್ತುಂಬಿಕೊಂಡಿದ್ದೇವೆ. ಸೈನಿಕನ ಪಾತ್ರದಲ್ಲಿ ಪುನೀತ್ ಅವರನ್ನು ನೋಡುವ ಭಾಗ್ಯ ನಮಗೆ ಸಿಕ್ಕಿತು.

ಪುನೀತ್ ಅವರು ಇಂದು ನಮ್ಮ ಜೊತೆ ಇದ್ದಿದ್ದರೆ ಪುನೀತ್ ಅವರ ಮುಂದಿನ ಸಿನಿಮಾ ಚಿತ್ರೀಕರಣ ಇಷ್ಟೊತ್ತಿಗೆ ಅರ್ಧ ದಷ್ಟು ಕಂಪ್ಲೀಟ್ ಆಗುತ್ತಿತ್ತು. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಪುನೀತ್ ರಾಜ್‌ಕುಮಾರ ಅವರು ದ್ವಿತ್ವ ಎಂಬ ಸಿನಿಮಾ ಮಾಡಲು ರೆಡಿಯಾಗಿದ್ದರು. ದುರದೃಷ್ಟವಶಾತ್ 2021 ಅಕ್ಟೋಬರ್ ತಿಂಗಳ ಕೊನೆಯಲ್ಲಿಯೇ ನಾವು ಪುನೀತ್ ಅವರನ್ನು ಕಳೆದುಕೊಂಡೆವು. 2021 ನವೆಂಬರ್ ತಿಂಗಳಿನಲ್ಲಿ ಶುರುವಾಗಬೇಕಿದ್ದ ದ್ವಿತ್ವ ಸಿನಿಮಾ ಪುನೀತ್ ಅವರಿಗೆ ಮತ್ತು ಅವರ ಅಭಿಮಾನಿಗಳಿಗೆ ತುಂಬ ವಿಶಿಷ್ಟ ಮತ್ತು ವಿಭಿನ್ನ ವಾಗಿತ್ತು. ಪುನೀತ್ ಅವರನ್ನು ಹಿಂದೆಂದೂ ನೋಡಿರದ ಪಾತ್ರದಲ್ಲಿ ನಾವೆಲ್ಲ ನೋಡುವಂತಹ ಭಾಗ್ಯ ಸಿಗುತ್ತಿತ್ತು.

ದ್ವಿತ್ವ ಸಿನಿಮಾದಲ್ಲಿ ಪುನೀತ್ ಅವರು ಪೋಲಿಸ್ ಆಫೀಸರ್ ಪಾತ್ರದಲ್ಲಿ ನಟನೆ ಮಾಡಬೇಕಿತ್ತು. ದ್ವಿತ್ವ ಸಿನಿಮಾಗೋಸ್ಕರ ಪುನೀತ್ ಅವರು ಫೋಟೋ ಶೂಟ್ ಕೂಡ ಮಾಡಿಸಿದ್ದರು ಪುನೀತ್ ಅವರನ್ನು ಈ ಚಿತ್ರದಲ್ಲಿ ಹೇಗೆ ತೋರಿಸಬೇಕು ಎಂದು ಹಲವಾರು ಫೋಟೋ ಶೂಟ್ ಮಾಡಿದ್ದರು. ಕೊನೆಯದಾಗಿ ಪುನೀತ್ ಅವರಿಗೆ ವಿಭಿನ್ನವಾಗಿ ಮ್ಯಾಚ್ ಆಗುವಂತಹ ಲುಕ್ ಒಂದನ್ನು ಫೋಟೋ ತೆಗೆದಿದ್ದರು. ಇದೀಗ ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಒಂದು ಫೋಟೋ ನೋಡಿ ಅಭಿಮಾನಿಗಳೆಲ್ಲರೂ ಪುನೀತ್ ಅವರನ್ನ ಈ ಅವತಾರದಲ್ಲಿ ನೋಡುವಂತಹ ಒಂದು ಸೌಭಾಗ್ಯ ನಮಗೆ ಸಿಗಲಿಲ್ಲವಲ್ಲ ಎಂದು ಬೇಸರಪಟ್ಟುಕೊಳ್ಳುತ್ತಿದ್ದಾರೆ.

Leave a Comment