ಕಿಚ್ಚನನ್ನು ದೇವರೆಂದು ಪೂಜಿಸುವ ಆ ಊರು ಯಾವುದು ಗೊತ್ತಾ? ಈ ಊರಿನ ಪ್ರತಿ ಮನೆಯಲ್ಲಿ ಕಿಚ್ಚನ ಫೋಟೋ ಇದೆ

They worship Kiccha as God: ಸ್ನೇಹಿತರೆ ಸ್ಪರ್ಶ ಚಿತ್ರದ ಮೂಲಕ 2001ರಲ್ಲಿ ನಾಯಕ ನಟನಾಗಿ ತಮ್ಮ ಸಿನಿ ಬದುಕಿನ ಪಯಣವನ್ನು ಪ್ರಾರಂಭ ಮಾಡಿದಂತಹ ಕಿಚ್ಚ ಸುದೀಪ್(Kiccha Sudeep) ಬರೋಬ್ಬರಿ 22 ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ್ದಾರೆ ಎಂದರೆ ತಪ್ಪಾಗಲಾರದು. ಒಂದರ ಮೇಲೆ ಒಂದರಂತೆ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಹಿಂದಿ ತೆಲುಗು ತಮಿಳು ಹೀಗೆ ಮುಂತಾದ ಭಾಷೆಗಳಲ್ಲಿ ಅಭಿನಯಿಸುತ್ತ ಬಹುದೊಡ್ಡ ಮಟ್ಟದ ಕ್ರೇಜನ್ನು ಸೃಷ್ಟಿಸಿಕೊಂಡಿರುವಂತಹ ಕಿಚ್ಚ ಸುದೀಪ್(Kiccha Sudeep)

ಅವರು ಇಂದು ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಅಭಿಮಾನಿಗಳೊಡನೆ ಸೇರಿ ಆಚರಿಸಿಕೊಂಡರು. ಇದರ ಅಂಗವಾಗಿ ಸುದೀಪ್ ಅವರ ವಿಶೇಷ ಮಾಹಿತಿಗಳು ಸೋಶಿಯಲ್ ಮೀಡಿಯಾ ದಲ್ಲಿ ಬಾರಿ ಸುದ್ದಿಗೊಳಾಗುತ್ತಿದ್ದು,‌ ಕಿಚ್ಚ ಸುದೀಪ್(Kiccha Sudeep) ಅವರನ್ನು ಮನಸಾರೆ ಪ್ರೀತಿಸುವಂತಹ ಅಭಿಮಾನಿಗಳುವಮನೆಯಲ್ಲಿ ಅವರ ಫೋಟೋ ಇಟ್ಟು, ದೇವರೆಂದು ಪೂಜಿಸುತ್ತಿದ್ದಾರಂತೆ.

ಹೌದು ಗೆಳೆಯರೇ ಈ ಒಂದು ವೈರಲ್ ಮಾಹಿತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಕೇವಲ ನಟನಾಗಿ ಮಾತ್ರವಲ್ಲದೆ, ನಿರ್ದೇಶಕ, ನಿರ್ಮಾಪಕ ಹಿನ್ನೆಲೆ ಗಾಯಕ ಹಾಗೂ ನಿರೂಪಕನಾಗಿ ಜನರ ಮುಂದೆ ಕಾಣಿಸಿಕೊಳ್ಳುವಂತಹ ಕಿಚ್ಚ ಸುದೀಪ್ ಅವರು ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದು, ಕಷ್ಟ ಎಂದು ಬೇಡಿ ಬಂದವರಿಗೆ ಇಲ್ಲ ಎನ್ನದೆ ತಮ್ಮ ಕೈಯಲಾದಂತಹ ಸೇವೆಯನ್ನು ನಿಸ್ವಾರ್ಥದಿಂದ ಮಾಡುತ್ತಾ ಬಂದಿದ್ದಾರೆ.

ಹೀಗೆ ಕಿಚ್ಚ ಸುದೀಪ್(Kiccha Sudeep) ಅವರಿಂದ ಸಹಾಯ ಪಡೆದಂತಹ ಸಾಕಷ್ಟು ಜನರು ಅದನ್ನು ಅನಾವರಣ ಮಾಡದೆ, ಬದಲಿಗೆ ಕಿಚ್ಚನ ಫೋಟೋಗಳನ್ನು ತಮ್ಮ ಮನೆಯಲ್ಲಿಟ್ಟು ದೇವರ ಸ್ವರೂಪ ನೀಡಿ ಪೂಜಿಸುತ್ತಿರುವ ಅಪರೂಪದ ಮಾಹಿತಿ ನೆಟ್ಟಿಗರನ್ನು ಆಕರ್ಷಿಸಿದೆ. ಇಂದು ಹುಟ್ಟು ಹಬ್ಬದ ಅಂಗವಾಗಿ ಮಾಧ್ಯಮಗಳೊಂದಿಗೆ ಸಂದರ್ಶನದಲ್ಲಿ ಮಾತನಾಡಿದಂತಹ ಕಿಚ್ಚ ಸುದೀಪ್ ಅವರು ತಮ್ಮನ್ನು ಪೂಜಿಸುವಂತಹ ಹಳ್ಳಿಗರ ಕುರಿತು ಮಾತನಾಡಿ ಕೃತಜ್ಞತೆ ತಿಳಿಸಿದರು.

Leave a Comment