Thalapathy Vijay ತಮಿಳು ಚಿತ್ರರಂಗದ ಅತ್ಯಂತ ಯಶಸ್ವಿ ನಾಯಕ ನಟರಲ್ಲಿ ಒಬ್ಬರಾಗಿರುವಂತಹ ತಲಪತಿ ವಿಜಯ್(Thalapathy Vijay) ರವರು ನಿಮಗೆಲ್ಲರಿಗೂ ಗೊತ್ತಿರಬಹುದು ತಮಿಳುನಾಡಿನ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಾಯಕ ನಟ ಕೂಡ ಆಗಿರುತ್ತಾರೆ.
ಸದ್ಯಕ್ಕೆ ಇವತ್ತು ತಲಪತಿ ವಿಜಯ್ ರವರ ಹುಟ್ಟುಹಬ್ಬ ಆಗಿರುವ ಕಾರಣದಿಂದಾಗಿ ಮೊದಲಿಗೆ ಅವರಿಗೆ ಜನ್ಮದಿನದ ಶುಭಾಶಯಗಳು ಕೋರುತ್ತಾ ಅವರ ಮುಂದಿನ ಸಿನಿಮಾ ಲೋಕೇಶ್ ಕನಗರಾಜ್(Lokesh Kanagaraj) ನಿರ್ದೇಶನದಲ್ಲಿ ಮೂಡಿ ಬರುತ್ತಿರುವಂತಹ ಲಿಯೋ ಸಿನಿಮಾ ಆಗಿದೆ.
ಇನ್ನು ಈ ಸಿನಿಮಾದ ನಂತರ ಅವರು ವೆಂಕಟ್ ಪ್ರಭು(Venkat Prabhu) ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವಂತಹ ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಅದರ ನಿರೀಕ್ಷೆ ಕೂಡಾ ಅಭಿಮಾನಿಗಳಲ್ಲಿ ಜೋರಾಗಿದೆ. ಈ ಸಿನಿಮಾವನ್ನು ಅವರ 68 ನೇ ಸಿನಿಮಾ ಎಂಬುದಾಗಿ ಲೆಕ್ಕಾಚಾರ ಹಾಕಲಾಗಿದ್ದು ಇದೇ ಅವರ ಕೊನೆಯ ಸಿನಿಮಾ ಆಗಿರಲಿದೆ ಎನ್ನುವಂತಹ ಸುದ್ದಿ ಕೂಡ ಇದೆ.
ಇದಕ್ಕೆ ಕಾರಣ ಸುದ್ದಿಗಳ ಪ್ರಕಾರ ತಿಳಿದು ಬಂದಿರುವುದು ಏನೆಂದರೆ ವಿಜಯ್(Vijay) ರವರು 2024 ರಿಂದ 2029 ರವರೆಗೆ ಸಂಪೂರ್ಣವಾಗಿ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ ಇದೇ ಕಾರಣಕ್ಕಾಗಿ ಚಿತ್ರರಂಗವನ್ನು ತೊರೆಯಲಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿದ್ದು ಇದು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎಂಬುದನ್ನು ಕಾದು ನೋಡಬೇಕು.