ನಾವೆಲ್ಲ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಸುಮಾರು 4 ತಿಂಗಳು ಕಳೆಯುತ್ತಾ ಬಂದಿದೆ. ಆದರೆ ಅವರ ನೆನಪು ಮಾತ್ರ ಇನ್ನೂ ಅಳಿಸಿಹೋಗಿಲ್ಲ. ಪುನೀತ್ ಅವರ ಸಿನಿಮಾಗಳನ್ನು ನೋಡಿದಾಗ ನಿಜಕ್ಕೂ ಪುನೀತ್ ಅವರು ಇಲ್ಲವಾ ಎಂದು ಆಶ್ಚರ್ಯ ಎನಿಸುತ್ತದೆ. ಅಪ್ಪು ಇಲ್ಲದೆ ಕನ್ನಡ ಚಿತ್ರರಂಗ ದೊಡ್ಡ ನಷ್ಟವನ್ನು ಅನುಭವಿಸುತ್ತಿದೆ. ಸಾವಿರಾರು ಕಲಾವಿದರಿಗೆ ಕೆಲಸ ಇಲ್ಲದಂತಾಗಿದೆ.
ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಇಪ್ಪತ್ತು ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದರು. ಇದು ಭಾರತ ದೇಶದ ಒಂದು ದೊಡ್ಡ ದಾಖಲೆ ಬರೆದಿದೆ. ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿ ಕೂಡ ಪುನೀತ್ ಸೋನಿ ಅಭಿಮಾನಿಗಳಿದ್ದಾರೆ. ಸಾಮಾನ್ಯ ಜನರಿಂದ ಹಿಡಿದು ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಪುನೀತ್ ಅವರ ಅಭಿಮಾನಿಗಳು. ಪುನೀತ್ ಅವರ ಡ್ಯಾನ್ಸ್ ಗಳನ್ನು ನೋಡಿ ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ನಂಥ ನಟರು ಇನ್ ಸ್ಪೈರ್ ಆಗಿದ್ದರು. ಇಂದಿಗೂ ಕೂಡ ಪುನೀತ್ ಅವರ ಮನಕ್ಕೆ ಯಾವ ನಟನ ಕೈ ಅಲ್ಲಿ ಆಗಿಲ್ಲ.
ಪುನೀತ್ ಅವರು ತೀರಿಕೊಂಡ ನಂತರ ಪುನೀತ್ ಅವರಿಗೆ ಅಂತಿಮ ನಮನ ಸಲ್ಲಿಸಬೇಕೆಂದು ಬೇರೆ ಬೇರೆ ಭಾಷೆಯ ನಟರು ಪುನೀತ್ ಮನೆಗೆ ಭೇಟಿ ಕೊಟ್ಟಿದ್ದರು. ಆದ್ರೆ ಕೆಲ ನಟರಿಗೆ ನಾಲ್ಕು ತಿಂಗಳು ಕಳೆದರೂ ಸಹ ಪುನೀತ್ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ತಮಿಳಿನ ಖ್ಯಾತ ನಟರಾದ ವಿಜಯ್ ಅವರು ಪುನೀತ್ ಅವರು ಅಗಲಿ 4 ತಿಂಗಳಾದರು ಸಹ ಅಂತಿಮ ನಮನ ಸಲ್ಲಿಸಲು ಬಂದಿರಲಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದರು.
ಆದರೆ ಇದೀಗ 4 ತಿಂಗಳು ಕಳೆದ ನಂತರ ತಮಿಳು ನಟ ವಿಜಯ್ ಅವರು ಬಿಡುವು ಮಾಡಿಕೊಂಡು ಅಪ್ಪು ಅವರ ಸಮಾ ಧಿಗೆ ಭೇಟಿ ಕೊಟ್ಟಿದ್ದಾರೆ. ಅಪ್ಪು ಅವರ ಫೋಟೋಗೆ ಆರತಿ ಎತ್ತಿ ಕೈಮುಗಿದು ನಮನ ಸಲ್ಲಿಸಿದ್ದಾರೆ. ಹಾಗೆ ಅಪ್ಪು ಅವರನ್ನು ಮಣ್ಣು ಮಾಡಿದ ಜಾಗಕ್ಕೆ ಪ್ರದಕ್ಷಿಣೆಯನ್ನು ಹಾಕಿದ್ದಾರೆ. ತದನಂತರ ಪುನೀತ್ ಅವರ ಪತ್ನಿ ಅಶ್ವಿನಿ ಮತ್ತು ನಟ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಕೊನೆಗೂ ಪುನೀತ್ ರಾಜ್ ಕುಮಾರ್ ಅವರು ನೆನಪಿಗೆ ಬಂದರಲ್ಲ ಎಂದು ಅಪ್ಪು ಅವರ ಅಭಿಮಾನಿಗಳು ಧನ್ಯವಾದವನ್ನು ತಿಳಿಸಿದ್ದಾರೆ.