Swetha Changappa: ಶ್ವೇತಾ ಚಂಗಪ್ಪ ಮನೆಯಲ್ಲಿ ಗಣೇಶ ಚತುರ್ಥಿ ಸಂಭ್ರಮ ಜೋರು!

ಸ್ನೇಹಿತರೆ, ನಿನ್ನೆ ಕನ್ನಡ ಹಿರಿತರೆ ಹಾಗೂ ಕಿರುತೆರೆ ಸೆಲಬ್ರೆಟಿಗಳು ಅದ್ದೂರಿಯಾಗಿ ತಮ್ಮ ತಮ್ಮ ಮನೆಗೆ ಗಣಪತಿ ಬಪ್ಪನನ್ನು ಬರಮಾಡಿಕೊಂಡು ಅರ್ಥಪೂರ್ಣವಾಗಿ ಹಬ್ಬವನ್ನು ಆಚರಿಸಿ ಅದರ ಸುಂದರ ಫೋಟೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಂಡು ಅಭಿಮಾನಿಗಳಿಗೂ ಶುಭಾಶಯವನ್ನು ಕೋರಿದ್ದಾರೆ.

ಅದರ ಸಾಲಿನಲ್ಲಿ ತಮ್ಮ ಚಿಟಪಟ ಮಾತಿನ ಮೂಲಕ ಇಂದು ಕನ್ನಡ ಕಿರುತೆರೆಯ ನಂಬರ್ ಒನ್ ನಿರೂಪಕಿಯಾಗಿ ಜೋಡಿ ನಂಬರ್ ವನ್, ಛೋಟಾ ಚಾಂಪಿಯನ್ನಂತಹ ಕಾರ್ಯಕ್ರಮವನ್ನು ನಡೆಸಿಕೊಡುತ್ತ ಜನಪ್ರಿಯತೆ ಪಡೆದಿರುವಂತಹ ಶ್ವೇತ ಚಂಗಪ್ಪ(Swetha Changappa) ತಮ್ಮ ಮಕ್ಕಳೊಟ್ಟಿಗೆ ಹಬ್ಬವನ್ನು ಆಚರಿಸಿದ್ದು ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ instagram ಹಾಗೂ facebook ಖಾತೆಯಲ್ಲಿ ಪೋಸ್ಟ್ ಮಾಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಹೌದು ಸ್ನೇಹಿತರೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ವೇತಾ ಸಂಗಪ್ಪ ಅವರು ತಮ್ಮ ಮನೆಗೆ ಪುಟ್ಟ ಪರಿಸರ ಸ್ನೇಹಿ ಗಣಪನನ್ನು ಬರಮಾಡಿಕೊಂಡು ಬಾಳೆ ಎಲೆಯಿಂದ ಅಲಂಕರಿಸಿ ದೇವರಿಗೆ ಹಣ್ಣು ಹಂಪಲು ನೈವೇದ್ಯ ಎಲ್ಲವನ್ನು ಅರ್ಪಿಸಿ ತಮ್ಮ ಮಗ ಜಿಯಾನ್ ಅಯ್ಯಪ್ಪನನ್ನು(Jiyaan Ayyappa) ತೊಡೆಯ ಮೇಲೆ ಹಾಗೂ ತಮ್ಮ ತಮ್ಮನ ಮಗಳಾದ ಚಾರ್ವಿ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ವಿನಾಯಕ ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ಮತ್ತು ಉತ್ತಮ ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.

ಅದರಂತೆ ಮತ್ತೊಂದು ವಿಡಿಯೋ ಹಂಚಿಕೊಂಡು ನಮ್ಮ ಮನೆಯಲ್ಲಿ ಗಣೇಶ ಚತುರ್ಥಿ ಆಚರಣೆ ಕುಟುಂಬದೊಂದಿಗೆ, ಸರ್ವರಿಗೂ ಮಂಗಳವಾಗಲಿ ಎಂದು ಹಾರೈಸುತ ಮನಸ್ಸಿಗೆ ನೆಮ್ಮದಿ ಶಾಂತಿಯನ್ನು ಬೇಡತ್ತ ಹೊಸ ಭರವಸೆಗಳೊಂದಿಗೆ ಗಣೇಶನನ್ನು ಬೀಳ್ಕೊಟ್ಟ ಕ್ಷಣ ಎಂದು ನೆನ್ನೆ ನೆರವೇರಿಸಲಾಗದಂತಹ ಸಂಪೂರ್ಣ ಹಬ್ಬದ ಸಂಭ್ರಮವನ್ನು ವಿಡಿಯೋ ಹಾಗೂ ಫೋಟೋಗಳ ಮೂಲಕ ನಟಿ ಶ್ವೇತಾ ಚಂಗಪ್ಪ(Swetha Changappa) ಶೇರ್ ಮಾಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಹುಟ್ಟು ಹಬ್ಬದ ದಿನವೇ ಅದ್ದೂರಿಯಾಗಿ ಗಣೇಶ ಹಬ್ಬ ಆಚರಿಸಿದ ಉಪೇಂದ್ರ ದಂಪತಿಗಳು!

Leave a Comment