ಕೋಟಿ ಕೋಟಿ ಹಣವಿದ್ರು ಜೀವನದಲ್ಲಿ ಸಾಧನೆ ಮಾಡಿದ್ರು ಜೀವನದಲ್ಲಿ ನೆಮ್ಮದಿ ಮಾತ್ರ ಇಲ್ಲ ನಟ ರಜನಿಕಾಂತ್ ಹೀಗೆ ಹೇಳಿದ್ದು ಯಾಕೆ ಗೊತ್ತಾ?

ಜೀವನದಲ್ಲಿ ಬೆಲೆ ಕಟ್ಟಲಾಗದ ಹಾಗೂ ಎಷ್ಟೇ ಬೆಲೆ ಕೊಟ್ರು ಸಿಗದ ಏಕೈಕ ವಸ್ತು ಅಂದ್ರೆ ಅದು ನೆಮ್ಮದಿ. ಹೌದು ಜನ ಎಷ್ಟು ಆಸ್ತಿಯನ್ನು ಮಾಡುತ್ತಾರೆ ಸಾಕಷ್ಟು ಹಣ ಸಂಪಾದನೆ ಮಾಡಿ ಜೀವನವನ್ನು ನಡೆಸುತ್ತಾರೆ ಆದರೆ ನೀವು ಅವರ ಹತ್ತಿರದಿಂದ ನೋಡಿದ್ರೆ ಅವರ ಜೀವನದಲ್ಲಿ ನೆಮ್ಮದಿ ಎನ್ನುವುದೇ ಇರುವುದಿಲ್ಲ. ನೆಮ್ಮದಿಯನ್ನು ಮಾತ್ರ ದುಡ್ಡು ಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ ಅಥವಾ ಯಾರೋ ಯಾರಿಗೂ ಕೊಡಲು ಸಾಧ್ಯವಿಲ್ಲ ಅದು ನಮಗೆ ನಮ್ಮಿಂದಲೇ ಸಿಗಬೇಕಾಗಿರುವ ಆಸ್ತಿ ಆದರೆ ಅದೆಷ್ಟು ಜನರು ಎಂದು ಕೋಟಿ ಕೋಟಿ ಆಸ್ತಿ ಇದ್ದರೂ ಬಡವರು ಅನ್ನಿಸಿರೋದು ಇದೇ ಕಾರಣಕ್ಕೆ. ಹಣ ಇರಬಹುದು ಅಥವಾ ಸಾಕಷ್ಟು ಸಾಧನೆಯನ್ನು ಮಾಡಿರಬಹುದು ಆದರೆ ನೆಮ್ಮದಿಯೇ ಇಲ್ಲ ಅಂದ್ರೆ ಜೀವನದಲ್ಲಿ ಬೇರೆ ಏನಿದೆ ಅಲ್ವಾ?

ಆದರೆ ಇದೀಗ ನೆಮ್ಮದಿಯ ವಿಷಯದ ಬಗ್ಗೆ ನಟ ರಜನಿಕಾಂತ್ ಕೂಡ ಮಾತನಾಡಿದ್ದಾರೆ. ರಜನಿಕಾಂತ್ ಅತ್ತ ನೆಮ್ಮದಿಯನ್ನು ಅರಸಿ ಆಧ್ಯಾತ್ಮದ ಜೀವನದ ಕಡೆಗೆ ವಾಲುತ್ತಿದ್ದಾರೆ. ಇತ್ತ ಸಿನಿಮಾ ರಂಗದಲ್ಲಿಯೂ ಕೂಡ ಸಕ್ರಿಯರಾಗಿದ್ದಾರೆ. ರಜನಿಕಾಂತ ಹಲವಾರು ಕಾರಣದಿಂದಾಗಿ ಇಂದು ಪಬ್ಲಿಕ್ ವೇದಿಕೆಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ ಆದರೂ ಇತ್ತೀಚಿಗೆ ಯಾವುದೋ ಒಂದು ಕಾರ್ಯಕ್ರಮದ ಸಂದರ್ಭದಲ್ಲಿ ಸಾಕಷ್ಟು ವಿಚಾರಗಳನ್ನು ಅಭಿಮಾನಿಗಳ ಜೊತೆ ವಿನಿಮಯ ಮಾಡಿಕೊಂಡಿದ್ದಾರೆ. ಅವರು ಹೇಳಿರುವ ವಿಚಾರವನ್ನು ಕೇಳಿದರೆ ಇಂತಹ ಮಹಾನ್ ನಟನೆ ಹೀಗೆ ಮಾತನಾಡಿದರೆ ನಮ್ಮಂತ ಸಾಮಾನ್ಯ ಜನರ ಗತಿ ಏನಪ್ಪ ಅಂತ ಒಂದು ಕ್ಷಣ ನಿಮಗೂ ಅನ್ನಿಸದೆ ಇರಲಿಕ್ಕಿಲ್ಲ.

‘ನಾನು ಜೀವನದಲ್ಲಿ ಕೋಟಿ ಕೋಟಿ ಆಸ್ತಿಯನ್ನು ಸಂಪಾದಿಸಿದ್ದೇನೆ ಸಾಕಷ್ಟು ಯಶಸ್ಸು ಗೆಲುವನ್ನು ನೋಡಿದ್ದೇನೆ ಆದರೆ ನನ್ನ ಬಳಿ ಎಲ್ಲವೂ ಇದ್ದರೂ ಒಂದು ವಿಷಯ ಮಾತ್ರ ಇಲ್ಲ ಅದೇ ನೆಮ್ಮದಿ. ನಾನು ಜೀವನದಲ್ಲಿ ಹತ್ತರಷ್ಟು ಕೂಡ ಶಾಂತಿ ನೆಮ್ಮದಿ ಅಥವಾ ಸಂತೋಷವನ್ನು ಅನುಭವಿಸಲಿಲ್ಲ’ ಅಂತ ರಜನಿಕಾಂತ್ ಹೇಳಿದ್ದಾರೆ. ಅದನ್ನ ಹುಡುಕಿಕೊಂಡು ನಾನು ಆಧ್ಯಾತ್ಮದ ಕಡೆಗೆ ಹೊರಟಿದ್ದೇನೆ ಹಿಮಾಲಯಕ್ಕೆ ಹೋಗಿದ್ದೇನೆ ಆದರೂ ನನಗೆ ಆ ನೆಮ್ಮದಿ ಇದುವರೆಗೆ ದೊರೆಕಿಲ್ಲ ಅಂತ ರಜನಿಕಾಂತ್ ಹೇಳುತ್ತಾರೆ.


ಹಾಗಾದ್ರೆ ಇಷ್ಟು ವರ್ಷ ದೊಡ್ಡ ಹೆಸರನ್ನು ಸಂಪಾದಿಸಿದ ಸ್ಟಾರ್ ನಟ ಜೀವನದಲ್ಲಿ ನೆಮ್ಮದಿಯಾಗಿಲ್ಲ! ಇದಕ್ಕೆ ಯೋಚನೆ ಮಾಡಿದ್ರೆ ಇದಕ್ಕೆ ಮುಖ್ಯವಾಗಿ ಅವರ ಮಕ್ಕಳೇ ಕಾರಣ. ಹೌದು, ಸ್ಟಾರ್ ನಟರಾದ್ರೂ ಕೂಡ ಜೀವನವು ಕೂಡ ಸಾಮಾನ್ಯ ಜನರಂತೆ ಇರುತ್ತೆ ಅವರ ಸಂಸಾರದಲ್ಲಿ ಸಾಕಷ್ಟು ಸಮಸ್ಯೆಗಳು ಇರುತ್ತವೆ. ಇನ್ನು ತನ್ನ ಮಕ್ಕಳು ಸುಖವಾಗಿರಲಿ ಅಂತ ತಂದೆ ತಾಯಿಗಳು ಬಯಸುವುದು ಸಹಜ. ಆದರೆ ಮಕ್ಕಳ ಜೀವನವೇ ಸರಿಯಾಗಿ ಇಲ್ಲದಿದ್ದರೆ ತಂದೆ ತಾಯಿಗಳ ನೆಮ್ಮದಿ ಹಾಳಾಗುವುದು ಸಹಜ ರಜನಿಕಾಂತ್ ಅವರ ಜೀವನದಲ್ಲಿ ನಡೆದದ್ದು ಇದೆ!

ರಜನಿಕಾಂತ್ ಅವರ ಮೊದಲ ಮಗಳು ಸೌಂದರ್ಯ ಹಾಗೂ ಎರಡನೇ ಮಗಳು ಐಶ್ವರ್ಯ ಇಬ್ಬರು ಮದುವೆಯಾಗಿ ಕೆಲಕಾಲ ಸಂಸಾರ ಚೆನ್ನಾಗಿ ನಡೆಸಿಕೊಂಡಿದ್ದರು ಆದರೆ ಮೊದಲ ಮಗಳ ಮದುವೆ ವಿಚ್ಛೇದನದ ಹಂತಕ್ಕೆ ಬಂತು ನಂತರ ವಿಚ್ಛೇದನವಾಗಿ ಇನ್ನೊಂದು ಮದುವೆಯನ್ನು ಕೂಡ ಆದರೂ ಸೌಂದರ್ಯ. ಇನ್ನು ಅವರ ಎರಡನೇ ಮಗಳಾದ ಐಶ್ವರ್ಯ ವಿಷಯಕ್ಕೆ ಬಂದರೆ ಐಶ್ವರ್ಯ ಹಾಗೂ ತಮಿಳುನಾಡು ಧನುಷ್ ಮದುವೆಯಾಗಿ ಬಹಳಷ್ಟು ಕಾಲ ಜೊತೆಗೆ ಸಂಸಾರ ಮಾಡಿದರು.

ಆದರೆ ಏಕಾಏಕಿ ಇವರಿಬ್ಬರ ನಡುವೆ ವೈಮನಸ್ಯ ಬಂದು ವಿಚ್ಛೇದನಕ್ಕೆ ಮೊರೆ ಹೋದರು. ನಟ ಧನುಷ್ ಅವರನ್ನು ಅಳಿಯ ಅಲ್ಲ ಮಗ ಇಂದೇ ಭಾವಿಸಿದ ರಜನಿಕಾಂತ್ ಅವರಿಗೆ ಇದು ಆತಂಕದ ವಿಷಯವಾಗಿತ್ತು. ಹೀಗೆ ಮಕ್ಕಳ ಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆಯನ್ನು ತನ್ನ ಕಣ್ಣೆದುರೇ ನಡೆದು ಹೋಗಿದ್ದ ನಾ ಕಂಡ ರಜನಿಕಾಂತ್ ಅವರು ಸಾಕಷ್ಟು ನೊಂದುಕೊಂಡಿದ್ದಾರೆ. ಇದೇ ಕಾರಣಕ್ಕೆ ರಜನಿಕಾಂತ್ ಇತ್ತೀಚಿಗೆ ಆಧ್ಯಾತ್ಮದ ಕಡೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅದಿಕ್ಕೆ ಹೇಳುವುದು ಎಷ್ಟು ಆಸ್ತಿ ಐಶ್ವರ್ಯ ಇದ್ದರೆ ಏನು ಪ್ರಯೋಜನ ನೆಮ್ಮದಿಯೇ ಇಲ್ಲದಿದ್ದರೆ ಅಲ್ವಾ!

Leave a Comment