Suhana Khan ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಆಗಿರುವಂತಹ ಶಾರುಖ್ ಖಾನ್(Shah Rukh Khan) ರವರು ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ನಾಯಕನಟರಲ್ಲಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಜನಪ್ರಿಯತೆಯ ವಿಚಾರದಲ್ಲಿ ಕೂಡ ಯಾರಿಗೇನು ಕಡಿಮೆ ಇಲ್ಲದಂತೆ ಕೂಡ ಇದ್ದಾರೆ ನಮ್ಮೆಲ್ಲರ ಕಿಂಗ್ ಖಾನ್.
ಇನ್ನು ಕಿಂಗ್ ಖಾನ್ ಅವರ ಮಗಳಾಗಿರುವಂತಹ ಸುಹಾನ ಖಾನ್(Suhana Khan) ರವರು ಕೂಡ ಇನ್ನೇನು ಕೆಲವೇ ಸಮಯದಲ್ಲಿ ಬಾಲಿವುಡ್ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಡಲಿದ್ದಾರೆ ಎನ್ನುವಂತಹ ಸುದ್ದಿಗಳು ಕೂಡ ಕೇಳಿ ಬರುತ್ತಿವೆ. ಅದರ ಮೊದಲೇ ಈಗ ಮತ್ತೊಂದು ವಿಚಾರಕ್ಕಾಗಿ ಅವರು ಸುದ್ದಿಯಾಗುತ್ತಿದ್ದಾರೆ.
ಹೌದು ಸುಹಾನ ಖಾನ್ ಆಲಿಭಾಗ್ ದಲ್ಲಿ 12 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿಯನ್ನು ಖರೀದಿಸುವ ಮೂಲಕ ಕೃಷಿ ಕೆಲಸಕ್ಕೆ ಉತ್ತೇಜನ್ನು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂಬುದಾಗಿ ಅಧಿಕೃತವಾಗಿ ಸುದ್ದಿಗಳು ಕೇಳಿಬಂದಿದೆ. ಸುಹಾನ ಖಾನ್ ಅವರ ಈ ನಡೆ ಪ್ರತಿಯೊಬ್ಬರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗಿದೆ ಎಂದು ಹೇಳಬಹುದಾಗಿದೆ.
ಬಾಲಿವುಡ್ ಗೆ ಎಂಟ್ರಿ ನೀಡುವ ಮುನ್ನವೇ ಈ ರೀತಿಯ ಕೆಲಸಗಳಲ್ಲಿ ಸುಹಾನ ಖಾನ್(Suhana Khan) ಅವರು ತೊಡಗಿರುವುದು ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಲು ಕಾರಣವಾಗಲಿದೆ ಎಂದು ಹೇಳಬಹುದಾಗಿದೆ. ಸುಹಾನ ಖಾನ್ ರವರು ಮಾಡಿರುವಂತಹ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.