Shruthi Hariharan: ಸೀರೆಯುಟ್ಟು ಮಗಳ ಜೊತೆ ಫೋಟೋಗೆ ಫೋಸ್ ನೀಡಿದ ನಟಿ ಶ್ರುತಿ ಹರಿಹರನ್!

ಸ್ನೇಹಿತರೆ, ಮೀಟು ಅಭಿಯಾನದ ನಂತರ ಸಿನಿಮಾಗಳ ಅವಕಾಶ ಕಾಲಕ್ರಮೇಣ ಶ್ರುತಿ ಹರಿಹರನ್ ಅವರ ಕೈಬಿಟ್ಟ ಬೆನ್ನಲ್ಲೇ ತಮ್ಮ ವೈಯಕ್ತಿಕ ಬದುಕಿನತ್ತ ಗಮನಹರಿಸುತ್ತ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವಂತಹ ನಟ ಶೃತಿ ಹರಿಹರನ್ (Shruthi Hariharan) ಆಗಾಗ ತಮ್ಮ ಹಾಗೂ ತಮ್ಮ ಕುಟುಂಬದ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳೊಡನೆ ಒಡನಾಟದಲ್ಲಿ ಇರುತ್ತಾರೆ.

ಹೌದು 2017ರಲ್ಲಿ ಮಾರ್ಷಲ್ ಆರ್ಟಿಸ್ಟ್ ಆದಂತಹ ರಾಮ್ ಕುಮಾರ್(Ramkumar) ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರುತಿ ಹರಿಹರನ್ (Shruthi Hariharan) ಅವರಿಗೆ ಜಾನಕಿ (Janaki) ಎಂಬ ಮುದ್ದಾದ ಮಗಳಿದ್ದಾಳೆ. ಆಗಾಗ ಪತಿ ಹಾಗೂ ಮಗಳೊಟ್ಟಿಗಿನ ಫೋಟೋಗಳನ್ನು ಹಂಚಿಕೊಳ್ಳುವ ಶ್ರುತಿ ಹರಿಹರನ್ ಕಳೆದ ಕೆಲವು ದಿನಗಳ ಹಿಂದಷ್ಟೇ ನೀಲಿ ಬಣ್ಣದ ಸೀರೆಯನ್ನು ಹುಟ್ಟು ಸ್ಲೀವ್ಲೆಸ್ ಬ್ಲೌಸ್ ಧರಿಸಿ ಮಗಳೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ.

ಇದರ ಸಾಲು ಸಾಲು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಶ್ರುತಿ ಹರಿಹರನ್ “ನಿಮಗೆ ಗೊತ್ತಾದಾಗ ನೀವು ಎಂದೂ ಸೀರೆಯನ್ನು ತಪ್ಪಾಗಿ ಉಡುವುದಿಲ್ಲ” ಎಂಬ ಕ್ಯಾಪ್ಷನ್ ಬರೆದು ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ತನ್ನ ನೆಚ್ಚಿನ ನಟಿಯನ್ನು ಟ್ರೆಡಿಶನಲ್ ಉಡುಗೆಯಲ್ಲಿ ಕಂಡಂತಹ ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೇ ಹರಿಸುವ ಮೂಲಕ ನಟಿ ಶೃತಿ ಹರಿಹರನ್ (Shruthi Hariharan) ಅವರ ಅಂದ ಚಂದವನ್ನು ಹಾಡಿ ಹೊಗಳುತ್ತಿದ್ದಾರೆ.

ಕಳೆದ ವರ್ಷ ಅಂದರೆ 2022 ರಲ್ಲಿ ತೆರೆ ಕಂಡಂತಹ ಡಾಲಿ ಧನಂಜಯ್(Dali Dhananjay) ಅವರ ಹೆಡ್ ಪುಶ್ ಸಿನಿಮಾದಲ್ಲಿ ರತ್ನಪ್ರಭಾ ಅರಸ್ ಎಂಬ ರಗಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರುತಿ ಹರಿಹರನ್ (Shruthi Hariharan) ಸದ್ಯ ಸಾರಾಂಶ(Saramsha) ಮತ್ತು ಸ್ಟ್ರಾಬೆರಿ(Strawberry) ಎಂಬ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಚಿತ್ರ ಇದೇ ವರ್ಷಾಂತ್ಯದಲ್ಲಿ ತೆರೆ ಕಾಣುವ ಅಧಿಕೃತ ಮಾಹಿತಿಯನ್ನು ಶ್ರುತಿ ಹರಿಹರನ್ ಹಂಚಿಕೊಂಡಿದ್ದಾರೆ.

Leave a Comment