Srinidhi Shetty: ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚೆಬ್ಬಿಸಿದ ಶ್ರೀನಿಧಿ ಶೆಟ್ಟಿ ಅವರ ಫೋಟೋ.

Srinidhi Shetty ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ(Srinidhi Shetty) ಅವರು ಈಗಾಗಲೇ ವಿಶ್ವ ಸೌಂದರ್ಯ ಸ್ಪರ್ಧೆಯಲ್ಲಿ ಕೂಡ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿರುವಂತಹ ಸಾಧನೆಯನ್ನು ಹೊಂದಿದ್ದಾರೆ. ಇದಕ್ಕಾಗಿಯೇ ಅವರಿಗೆ ಕೆಜಿಎಫ್ ಸಿನಿಮಾದಲ್ಲಿ ಅವಕಾಶ ದೊರೆತಿತ್ತು.

ಮಂಗಳೂರು ಮೂಲದ ಬೆಡಗಿ ಆಗಿರುವಂತಹ ಶ್ರೀನಿಧಿ ಶೆಟ್ಟಿ ಅವರು ಕೆಜಿಎಫ್ ಸರಣಿ(KGF Series) ಸಿನಿಮಾಗಳ ಮೂಲಕ ರೀನಾ ಪಾತ್ರಧಾರಿ ಆಗಿ ಈಗಾಗಲೇ ಯಾವ ಮಟ್ಟದಲ್ಲಿ ಹೆಸರು ಹಾಗು ಜನಪ್ರಿಯತೆಯನ್ನು ಸಾಧಿಸಿದ್ದಾರೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಮೊದಲನೇ ಸಿನಿಮಾ ಆಗಿದ್ದರೂ ಕೂಡ ಅವರ ಪ್ರಬುದ್ಧ ನಟನೆ ಎಲ್ಲರ ಮನಸ್ಸನ್ನು ಗೆದ್ದಿತ್ತು.

ಅದಾದನಂತರ ಚಿಯಾನ್ ವಿಕ್ರಂ(Chiyaan Vikram) ಅವರ ಕೋಬ್ರಾ ಸಿನಿಮಾವನ್ನು ಬಿಟ್ಟು ಮತ್ತು ಯಾವುದು ಸಿನಿಮಾಗಳಲ್ಲಿ ಕೂಡ ಶ್ರೀನಿಧಿ ಶೆಟ್ಟಿ ಇದುವರೆಗೂ ಕಾಣಿಸಿಕೊಂಡಿಲ್ಲ. ಅವರ ಮುಂದಿನ ಸಿನಿಮಾದ ಬಗ್ಗೆ ಕೂಡ ಪ್ರತಿಯೊಬ್ಬರು ಕಾಯುತಿದ್ದಾರೆ.

ಇದರ ನಡುವಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ಆಕ್ಟಿವ್ ಆಗಿರುವಂತಹ ಶ್ರೀನಿಧಿ ಶೆಟ್ಟಿ ಅವರು ಆಗಾಗ ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ಹಾಗೂ ಫೋಟೋಗಳನ್ನು ಕೂಡ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಅವರು ಹಂಚಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು ಈ ಫೋಟೋ ನೋಡಿ ನಿಮಗೇನು ಅನ್ನಿಸಿತು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment