Srinidhi Shetty ಕೆಜಿಎಫ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಂತಹ ನಟಿ ಶ್ರೀನಿಧಿ ಶೆಟ್ಟಿ(Srinidhi Shetty) ಅವರು ಇಡೀ ಭಾರತೀಯ ಚಿತ್ರರಂಗದಲ್ಲಿ ರೀನಾ ಪಾತ್ರದ ಮೂಲಕ ಎಲ್ಲರ ಮನ ಗೆಲ್ಲಲು ಯಶಸ್ವಿಯಾಗುತ್ತಾರೆ. ಸಿನಿಮಾವನ್ನು ನೋಡಿದವರು ಅದು ಅವರ ಮೊದಲ ಸಿನಿಮಾ ಎಂಬುದಾಗಿ ಭಾವಿಸಲೇ ಇಲ್ಲ. ಅಷ್ಟರಮಟ್ಟಿಗೆ ಅವರ ನಟನೆ ಪ್ರಬುದ್ಧವಾಗಿತ್ತು.
ಮಂಗಳೂರು ಮೂಲದ ಬೆಡಗಿಯಾಗಿರುವ ಶ್ರೀನಿಧಿ ಶೆಟ್ಟಿ ಮಾಡೆಲ್ ಆಗಿ ಕೂಡ ಸಾಕಷ್ಟು ಬ್ಯೂಟಿ ಕಾಂಟೆಸ್ಟ್ ಗಳಲ್ಲಿ ಗೆದ್ದಿದ್ದಾರೆ. ಇಲ್ಲಿಂದಲೇ ಅವರನ್ನು ಸಿನಿಮಾಗೆ ಕೂಡ ಆಯ್ಕೆ ಮಾಡಲಾಗಿತ್ತು ಎಂಬುದನ್ನು ನೀವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಕೆಜಿಎಫ್ ಸಿನಿಮಾಗಳನ್ನು ಬಿಟ್ಟರೆ ಅವರು ನಟಿಸಿದ್ದು ಕೇವಲ ಕೋಬ್ರಾ ಸಿನಿಮಾದಲ್ಲಿ ಎಂಬುದಾಗಿ ತಿಳಿದುಬಂದಿದೆ.
ಚಿಯಾನ್ ವಿಕ್ರಂ(Chiyaan Vikram) ನಾಯಕ ನಟನಾಗಿ ನಟಿಸಿರುವಂತಹ ಈ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಪ್ರತಿಯೊಬ್ಬರೂ ಕೂಡ ಶ್ರೀನಿಧಿ ಶೆಟ್ಟಿ ಅವರ ಮುಂದಿನ ಸಿನಿಮಾದ ಬಗ್ಗೆ ಕುತೂಹಲವಾಗಿದ್ದಾರೆ. ಇದರ ನಡುವಲ್ಲಿಯೇ ಶ್ರೀನಿಧಿ ಶೆಟ್ಟಿ ಅವರ ಲೇಟೆಸ್ಟ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಶ್ರೀನಿಧಿ ಶೆಟ್ಟಿ ತಮ್ಮ ಲೇಟೆಸ್ಟ್ ಫೋಟೋವನ್ನು ಹಂಚಿಕೊಂಡಿದ್ದು ಎಲ್ಲರೂ ಕೂಡ ಶ್ರೀನಿಧಿ ಶೆಟ್ಟಿ ಅವರ ಫೋಟೋವನ್ನು ನೋಡಿ ಎಷ್ಟು ಮುದ್ದಾಗಿದ್ದೀರಾ ಮೇಡಂ ಎನ್ನುವುದಾಗಿ ಮೆಚ್ಚುಗೆಯಿಂದ ಕಾಮೆಂಟ್ ಮಾಡಿದ್ದಾರೆ. ಫೋಟೋ ನೋಡಿ ನಿಮಗೇನು ಅನ್ನಿಸಿತು ಎಂಬುದನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.