ಸ್ನೇಹಿತರೆ, ನಮ್ಮೊಳಗಿರುವಂತಹ ಪ್ರತಿಭೆಯನ್ನು ಅನಾವರಣಗೊಳಿಸುವ ಸಲುವಾಗಿಯೇ ಇರುವಂತಹ ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಯೌಟ್ಯೂಬ್ ನಂತಹ ಜಾಲಗಳನ್ನು ಬಳಸಿಕೊಂಡು ಇಂದು ಅದೆಷ್ಟೋ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇನ್ನು ಹಲವರು ಕಿರುತೆರೆ ಬೆಳ್ಳಿತೆರೆಯಲ್ಲಿ ಅವಕಾಶ ಪಡೆದು ಸ್ಟಾರ್ ನಟ ನಟಿಯರಾಗಿ ಮಿಂಚುತ್ತಿದ್ದಾರೆ.
ಇಂಥವರ ಸಾಲಿನಲ್ಲಿ ಸೋನು ಶ್ರೀನಿವಾಸಗೌಡ ಕೂಡ ಒಬ್ಬರು ಎಂದರೆ ತಪ್ಪಾಗ್ಲಿಕ್ಕಿಲ್ಲ ಹೌದು ಗೆಳೆಯರೇ ಬಿಗ್ ಬಾಸ್ ಸೀಸನ್ 9ರ ಆರಂಭದಲ್ಲಿ ಪ್ರಸಾರವಾದಂತಹ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಪ್ರವೇಶ ಮಾಡಿದಂತಹ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಇಂದು ಸೋಶಿಯಲ್ ಮೀಡಿಯಾದ ಸೆನ್ಸೇಷನ್ ಸ್ಟಾರ್. ಟ್ರೋಲ್ ವಿಡಿಯೋಗಳಿಂದಾಗಿ ಹೆಚ್ಚು ಪ್ರಖ್ಯಾತಿ ಪಡೆದು ಇಂದು ಮಿಲಿಯನ್ಗಟ್ಟಲೆ ಫಾಲೋವರ್ಸ್ ಗಳನ್ನು ಸಂಪಾದಿಸಿಕೊಂಡಿರುವಂತಹ
ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಪ್ರತಿ ಬಾರಿ ಕ್ಯಾಮೆರಾದ ಮುಂದೆ ಬಂದಾಗ ತುಂಡು ಬಟ್ಟೆಯನ್ನು ಧರಿಸಿ ಫೋಟೋ ಗಳಿಗೆ ಬಹಳ ಬೋಲ್ಡ್ ಆದ ಫೋಸ್ ನೀಡುತ್ತಾ ನೆಟ್ಟಿಗರ ಮನಸ್ಸನ್ನು ಕದಿಯುತ್ತಿರುತ್ತಾರೆ. ಹೀಗಿರುವಾಗ ಸಾಮಾಜಿಕ ಆದಾಯವನ್ನಾಗಿಸಿಕೊಂಡು ತಿಂಗಳಿಗೆ ಸಾವಿರದಲ್ಲ, ಲಕ್ಷಗಟ್ಟಲೆ ಹಣವನ್ನು ದುಡಿಯುತ್ತಿರುವ ಸೋನು ಐಷಾರಾಮಿ ಬದುಕನ್ನೇ ನಡೆಸುತ್ತಿದ್ದಾರೆ. ಹೌದು ಗೆಳೆಯರೇ ಬಿಡುವು ಸಿಕ್ಕಾಗಲೆಲ್ಲ ಮಾಲ್ಡೀವ್ಸ್ ನಂತಹ ಪ್ರವಾಸಿ ತಾಣಗಳಿಗೆ ಹೋಗಿ ಎಂಜಾಯ್ ಮಾಡುವ ಸೋನು ಶ್ರೀನಿವಾಸ್ ಗೌಡ ಬಿಕನಿ ತೊಟ್ಟು ಕೈಯಲ್ಲಿ ಬಿಯರ್ ಹಿಡಿದು ಚಿಲ್ ಮಾಡುತ್ತಿರುತ್ತಾರೆ.
ಈಕೆಯ ಐಷಾರಾಮಿ ಜೀವನವನ್ನು ಕಂಡಂತಹ ನೆಟ್ಟಿಗರು ತಿಂಗಳಿಗೆ ಬರುವ ಆದಾಯ ಎಷ್ಟರಬಹುದೆಂಬುದನ್ನು ಲೆಕ್ಕಾಚಾರ ಹಾಕ ತೊಡಗಿದ್ದಾರೆ. ಆದರೆ ಸ್ವತಃ ಸೋನು ಶ್ರೀನಿವಾಸ್ ಗೌಡ ಅವರೇ ಬಿಗ್ ಬಾಸ್ ಸಮಯದಲ್ಲಿ ಟಿವಿ ಸಂದರ್ಶನ (TV interview) ಒಂದರಲ್ಲಿ ನಮ್ಮ ವೈಯಕ್ತಿಕ ವಿಚಾರಗಳನ್ನು ಬಹಿರಂಗಗೊಳಿಸುವಾಗ ನಾನು ಸೋಶಿಯಲ್ ಮೀಡಿಯಾಗಳ ಮೂಲಕ ತಿಂಗಳಿಗೆ 3 ಲಕ್ಷ ಹಣವನ್ನು ಸಂಪಾದಿಸುತ್ತೇನೆ ಎಂದಿದ್ದರು. ಸದ್ಯ ಈ ವಿಡಿಯೋ ಮತ್ತೊಮ್ಮೆ ವೈರಲ್ ಆಗುತ್ತಾ ಟೀಕೆಗೆ ಎಡೆ ಮಾಡಿಕೊಟ್ಟಿದೆ,
ಇದನ್ನು ಕಂಡಂತಹ ಟ್ರೋಲಿಗರು ಹಣ ಸಂಪಾದನೆ ಮಾಡುವ ಸಲುವಾಗಿ ಭಿನ್ನ-ಭಿನ್ನ ದಾರಿಯನ್ನು ಹಿಡಿಯುತ್ತಾರೆ, ಆದರೆ ಸೋನು ಶ್ರೀನಿವಾಸ ಗೌಡ(Sonu Srinivas Gowda) ಮೈಮೇಲೆ ಬಟ್ಟೆ ಧರಿಸದೆ ತನ್ನ ಅಂಗಾಂಗಗಳ ಪ್ರದರ್ಶನ ಮಾಡುತ್ತ ಹಣ ಸಂಪಾದನೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಅಸಭ್ಯವಾಗಿ ಮತ್ತೆ ಟ್ರೋಲ್ ಮಾಡ ತೊಡಗಿದ್ದಾರೆ.