Shruthi Krishna : ಇತ್ತೀಚಿನ ಕೆಲ ದಿನಗಳ ಹಿಂದಷ್ಟೇ ಕಲರ್ಸ್ ಕನ್ನಡ(colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಚ್ಚಿ ಗಿಲಿ ಗಿಲಿ (Gicchigiligili) ಎಂಬ ಹಾಸ್ಯ ಕಾರ್ಯಕ್ರಮದ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಅದ್ಭುತ ಮಾತುಗಾರಿಕೆಯ ಶೈಲಿಯಿಂದಲೇ ಪ್ರೇಕ್ಷಕ ಪ್ರಭುಗಳನ್ನು ಸೆಳೆದಿದ್ದ ಶ್ರುತಿ ಅವರು ಸಿನಿಮಾ ರಂಗದ ನಾಯಕ ನಟಿಯಾಗಿ ಕಿರುತೆರೆ(television) ಕಲಾವಿದೆಯಾಗಿ ರಾಜಕಾರಣಿಯಾಗಿ ಹಾಗೂ ಮುದ್ದು ಮಗಳ ಪ್ರೀತಿಯ ತಾಯಿಯಾಗಿ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.
ಇದರ ಬೆನ್ನೆಲು ಕಳೆದ ಕೆಲವು ದಿನಗಳ ಹಿಂದಷ್ಟೇ ತಮ್ಮ ತಾಯಿ ಹಾಗೂ ತಂದೆಯೊಂದಿಗೆ ಕೈಜೋಡಿಸಿ ನೇಗಿಲು ಹಿಡಿದು ಹೊಲದಲ್ಲಿ ಉಳಿಮೆ ಆ ಕೆಲ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ instagram ಖಾತೆಯಲ್ಲಿ ಶೇರ್ ಮಾಡಿಕೊಂಡು ಅಪ್ಪಟ ರೈತ(Farmer) ಮಹಿಳೆ ಎಂದು ಹೆಮ್ಮೆಯಿಂದ ನಾನೇ ಉತ್ತಿ ಬಿತ್ತಿ ಬೆಳೆಯಬೇಕೆಂಬುದು ಬಹು ವರ್ಷದ ಆಸೆಯಾಗಿತ್ತು, ಅದನ್ನು ಈಗ ಆರಂಭಿಸಿದ್ದೇನೆ.
Actress Shruthi Krishna Visited Kabini Forest
ಭಗವಂತನಿಗೆ ಕೋಟಿ ಕೋಟಿ ಧನ್ಯವಾದಗಳು ಎಂಬ ಕ್ಯಾಪ್ಶನ್(caption) ಬರೆದು ತಮ್ಮ ಕೃಷಿ ಮಾಡುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಇದರ ಬೆನ್ನೆಲ್ಲೆ ಸಾಧ್ಯ ನಟಿ ಶೃತಿಯವರು ಕಬಿನಿ ಅಭಯಾರಣ್ಯಕ್ಕೆ(kabini wildlife sanctuary) ಭೇಟಿ ನೀಡಿ ಸಫಾರಿ ಹೋಗಿದ್ದು, ಆ ಕೆಲ ವಿಡಿಯೋಗಳನ್ನು ಶೇರ್ ಮಾಡಿ ಅರಣ್ಯ, ವನ್ಯಜೀವಿ, ಪ್ರಯಾಣ ಎಲ್ಲವೂ ನನ್ನ ಶಕ್ತಿ ಹಾಗೂ ದೌರ್ಬಲ್ಯ ಎಂಬ ಕ್ಯಾಪ್ಶನ್ ಬರೆದು ಪ್ರಾಣಿ ಹಾಗೂ ಪರಿಸರದ ಮೇಲಿನ ಪ್ರೀತಿಯನ್ನು ನಟಿ ಶ್ರುತಿ (Shruthi) ಅವರು ಹೊರ ಹಾಕಿದ್ದಾರೆ.
ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಮೆಚ್ಚುಗೆಗೆ ಒಳಗಾಗಿದೆ. (Kabini Forest) ಹೌದು ಗೆಳೆಯರೇ ಓರ್ವ ಸ್ಟಾರ್ ನಾಯಕ ನಟಿಯಾಗಿ ಶೃತಿಯವರು ಯಾವುದೇ ಗರ್ವವಿಲ್ಲದೆ ಸಾಮಾನ್ಯರಂತೆ ಬಟ್ಟೆ ತೊಟ್ಟು ಬಿಸಿಲಿನ ಬೆವರಿನಲ್ಲಿ ಕೆಸರಿನೊಳಗಿಳಿದು ಬೆಳೆಯನ್ನು ಬೆಳೆಯುತ್ತಾ ಬಿಡುವು ಸಿಕ್ಕಾಗ ಈ ರೀತಿ ವನ್ಯ ಜೀವಿಗಳನ್ನು ಹಾಗೂ ಅವುಗಳ ರಕ್ಷಣೆ ಕುರಿತು ಮಾಹಿತಿ ತಿಳಿದುಕೊಳ್ಳಲು ಇಷ್ಟೆಲ್ಲ ಪ್ರೀತಿ ತೋರುತ್ತಿರುವುದನ್ನು ಕಂಡು ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ.(ಇದನ್ನು ಓದಿ)ರಾಜರಾಜೇಶ್ವರಿ ನಗರದಲ್ಲಿರುವ ನಟಿ ಅನುಪಮಾ ಗೌಡ ಅವರ ಭವ್ಯ ಡ್ಯೂಪ್ಲೆಕ್ಸ್ ಮನೆ ಹೇಗಿದೆ ಗೊತ್ತಾ? ಇದರ ಬೆಲೆ ತಿಳಿದರೆ ತಲೆ ತಿರುಗುತ್ತದೆ ನೋಡಿ!!