ಮಾರ್ಚ್ 17 ಅಪ್ಪು ದಿನ ಎಂದೇ ಆಚರಣೆ ಮಾಡಲಾಗುತ್ತಿದೆ. ಲಕ್ಷಾಂತರ ಅಭಿಮಾನಿಗಳು ಅಪ್ಪು ಅವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ ವಿಶೇಷವಾಗಿ ಅಪ್ಪು ಅವರ ಕೊನೆಯ ಚಿತ್ರ ಜೇಮ್ಸ್ ಕೂಡ ಹುಟ್ಟುಹಬ್ಬದ ದಿನದಂದೇ ಬಿಡುಗಡೆ ಮಾಡಿದ್ದಾರೆ. ಈ ಹಬ್ಬವನ್ನು ಕಣ್ತುಂಬಿಕೊಳ್ಳಲು 2 ಕಣ್ಣು ಸಾಲದು. ಇಂತಹ ರಾಜಮರ್ಯಾದೆ ಸಿಗಬೇಕೆಂದರೆ ಅದು ರಾಜವಂಶದ ಕುಡಿಗಳಿಂದ ಮಾತ್ರ ಸಾಧ್ಯ.
ಅಪ್ಪು ಅವರ ಬರ್ತ್ ಡೇ ಅನ್ನು ಕೇವಲ ಅಭಿಮಾನಿಗಳು ಮಾತ್ರ ಅಲ್ಲದೆ ಡಾಕ್ಟರ್ ರಾಜ್ ಕುಮಾರ್ ಕುಟುಂಬದ ಸದಸ್ಯರೆಲ್ಲರೂ ಅಭಿಮಾನಿಗಳ ಜೊತೆ ಗೂಡಿ ಆಚರಣೆ ಮಾಡುತ್ತಿದ್ದಾರೆ. ಮುಂಜಾನೆ 4 ಗಂಟೆಯಿಂದಲೇ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರಾಜ್ ಕುಮಾರ್ ಅವರು ಅಭಿಮಾನಿಗಳ ಒಟ್ಟಿಗೆ ಕೇಕ್ ಕಟ್ ಮಾಡಿ, ಜೇಮ್ಸ್ ಚಿತ್ರವನ್ನು ನೋಡಿ ಪುನೀತ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.
ಶಿವಣ್ಣ ಅವರು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರೂ ಕೂಡ ಅಪ್ಪು ಅವರ ಹುಟ್ಟುಹಬ್ಬದ ದಿನ ಬೆಳಿಗ್ಗೆ ಬೇಗ ಎದ್ದು ಥಿಯೇಟರ್ ಗೆ ಹೋಗಿ ಜೇಮ್ಸ್ ಸಿನಿಮಾವನ್ನು ನೋಡಿದ್ದಾರೆ. ಶಿವಣ್ಣವರು ಥಿಯೇಟರ್ ಗೆ ಹೋದ ಸಮಯದಲ್ಲಿ ಅಭಿಮಾನಿಗಳೆಲ್ಲ ಶಿವಣ್ಣ ಅವರನ್ನು ಮುತ್ತುವರೆದು ಒಂದು ಸೆಲ್ಫಿ ಫೋಟೊ ಕೊಡಲು ಒತ್ತಾಯಿಸಿದ್ದಾರೆ. ಅಭಿಮಾನಿಗಳ ಮಾತಿಗೆ ಇಲ್ಲ ಎನ್ನಲಾಗದೆ ಶಿವಣ್ಣ ಒಪ್ಪಿಕೊಂಡು ಚಲಿಸಿ ಫೋಟೋಗಳನ್ನು ಕ್ಲಿಕ್ಕಿಸಲು ಪರ್ಮಿಷನ್ ನೀಡಿದ್ದಾರೆ.
ಆದರೆ ಅಭಿಮಾನಿಗಳು ನಡೆದುಕೊಂಡ ವರ್ತನೆ ಶಿವಣ್ಣ ಅವರ ಕೋಪ ನೆತ್ತಿಗೇರಿತು. ಸಾಲು ಸಾಲಾಗಿ ಬಂದು ಒಬ್ಬರ ನಂತರ ಒಬ್ಬರಂತೆ ಫೋಟೋಗಳನ್ನು ಕ್ಲಿಕ್ಕಿಸಿ ಕೊಳ್ಳುತ್ತಿದ್ದರು.ಆದರೆ ಒಬ್ಬ ಅಭಿಮಾನಿಯೊಬ್ಬ ಮಧ್ಯದಲ್ಲಿ ನುಗ್ಗಿ ಬಂದು ಅಣ್ಣ ಸೆಲ್ಫಿ ಕೊಡಿ ಅಂತ ಶಿವಣ್ಣ ಬಳಿ ಕೇಳಿದ್ದಾನೆ. ಅಪ್ಪು ಇಲ್ಲ ಎಂಬ ಕೊರಗು, ಚಿತ್ರೀಕರಣ ಮತ್ತು ಚಿತ್ರ ಬಿಡುಗಡೆಯ ಉದ್ವೇಗದಲ್ಲಿದ್ದ ಶಿವಣ್ಣಗೆ ಅಭಿಮಾನಿಯ ಈ ವರ್ತನೆ ಸಿಟ್ಟಿಗೇಳುವಂತೆ ಮಾಡಿತ್ತು.
ಅಭಿಮಾನಿಯ ವರ್ತನೆ ನೋಡಿ ಶಿವಣ್ಣನವರು ಅಭಿಮಾನಿಗೆ ಬುದ್ಧಿವಾದ ಹೇಳಿದ್ದಾರೆ. ಗರಂ ಆದ ಶಿವಣ್ಣ ಈ ರೀತಿ ವರ್ತಿಸಬೇಡಿ ನಾನು ನನ್ನ ಸಮಯವನ್ನು ಕೊಟ್ಟು ನಿಮಗೆಲ್ಲಾ ಸೆಲ್ಪಿ ಕೊಡಲು ಅನುಮತಿ ನೀಡಿದ್ದೇನೆ ದಯವಿಟ್ಟು ಶಿಸ್ತಿನಿಂದ ವರ್ತಿಸಿ. ನಾನು ನಿಮಗೆ ಸೆಲ್ಫೀ ಕೊಡದೆ ಹೋಗಬಹುದಿತ್ತು ಆದರೆ ಹೋಗ್ಲಿ ಪಾಪ ಅಂತ ಬಂದು ನಿಂತುಕೊಂಡಿದ್ದೇನೆ.. ನಮ್ಮ ಕಷ್ಟನೂ ಸ್ವಲ್ಪ ಅರ್ಥಮಾಡಿಕೊಳ್ರಪ್ಪ ಎಂದು ಪ್ರೀತಿಯಿಂದ ಗದರಿದ್ದಾರೆ. ಕೆಲವು ಮಂದಿ ಶಿವಣ್ಣ ಅವರ ಈ ವರ್ತನೆ ನೋಡಿ ಅಪ್ಪು ಶಿವಣ್ಣ ಅವರ ಜಾಗದಲ್ಲಿ ಇದ್ದಿದ್ದರೆ ಈ ರೀತಿ ಮಾಡುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.