Shivarajkumar: ಅಪ್ಪು ಮಗಳ ಮದುವೆ ಕುರಿತು ಸಿಹಿ ಸುದ್ದಿಯೊಂದನ್ನು ಹಂಚಿಕೊಂಡ ದೊಡ್ಡಪ್ಪ ಶಿವರಾಜ್ ಕುಮಾರ್!

Shivarajkumar: ಹಲವು ವರ್ಷಗಳ ಕಾಲ ಪ್ರೀತಿಸಿ ಪ್ರೇಮ ನಿವೇದನೆಯನ್ನು ಮಾಡಲು ಏಳು ತಿಂಗಳ ಕಾಲ ತೆಗೆದುಕೊಂಡು ಮನೆಯವರೆಲ್ಲರ ಒಪ್ಪಿಗೆ ಪಡೆದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಮತ್ತು ಅಶ್ವಿನಿ(Ashwini) ಅವರು ಬಹಳ ಅನ್ಯವಾಗಿ ಜೀವನ ನಡೆಸಿ ಇತರರಿಗೆ ಆದರ್ಶವಾಗುವಂತೆ ಬದುಕಿದಂತಹ ಜೋಡಿಗಳು.

ಹೌದು ಗೆಳೆಯರೇ ನಗುವಿನ ರಾಜಕುಮಾರ ಎಂದೆ ಕರೆಯಲ್ಪಡುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Raj Kumar) ಖಾಸಗಿ ಕಾರ್ಯಕ್ರಮ ಒಂದರಲ್ಲಿ ಅಶ್ವಿನಿ ಅವರನ್ನು ನೋಡಿ ಪರಿಚಯ ಮಾಡಿಕೊಂಡು ಕಾಲಕ್ರಮೇಣ ಇವರಿಬ್ಬರ ಪರಿಚಯ, ಸ್ನೇಹವಾಗಿ ಸ್ನೇಹದಿಂದ ಪ್ರೀತಿಗೆ ಮಾರ್ಪಡಾಗುತ್ತದೆ. ಅನಂತರ ಅಪ್ಪು ಶಿವಣ್ಣನಿಗೆ (Shivanna) ಮೊದಲು ಈ ಒಂದು ವಿಚಾರವನ್ನು ತಿಳಿಸಿ ಆನಂತರ ತಮ್ಮ ತಾಯಿ ಹಾಗೂ ತಂದೆಗೆ ಪ್ರೀತಿಸುತ್ತಿರುವುದಾಗಿ ಹೇಳುತ್ತಾರೆ.

ಮದುವೆಯಾದರೆ ಅದು ಪುನೀತ್ ರಾಜಕುಮಾರ್ ಅವರನ್ನೇ ಎಂದು ಹಠ ಹಿಡಿದಾಗ ಅಶ್ವಿನಿ ಅವರ ಮನೆಯಲ್ಲಿ ಮದುವೆಗೆ ಒಪ್ಪಿಗೆ ಸೂಚಿಸಿದರು. ಹೀಗೆ ಇಪ್ಪತ್ತು ವರ್ಷಗಳ ಕಾಲ ಬಹಳ ಅನ್ಯೋನ್ಯವಾಗಿ ಜೀವನ ನಡೆಸಿದ ಈ ದಂಪತಿಗಳಿಗೆ ದೃತಿ ಪುನೀತ್ ರಾಜಕುಮಾರ್ ಮತ್ತು ವಂದಿತಾ ಪುನೀತ್ ರಾಜಕುಮಾರ್(Puneeth Rajkumar) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳು ಜರ್ಮನಿಯಲ್ಲಿ ತಮ್ಮ ವ್ಯಾಸಂಗವನ್ನು ಮುಗಿಸಿ ಭಾರತಕ್ಕೆ ಹಾಜರಾಗಿದ್ದು, ತಮ್ಮ ತಾಯಿ ಹಾಗೂ ಕುಟುಂಬಸ್ಥರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಾ ದೃತಿ ಪುನೀತ್ ರಾಜಕುಮಾರ್ ಬಹಳ ಸಂತೋಷದಿಂದಿದ್ದಾರೆ.

ಹೀಗಿರುವಾಗ ಜರ್ಮನಿಯಿಂದ ಬಂದ ತಕ್ಷಣ ತಮ್ಮ ದೊಡ್ಡಪ್ಪನನ್ನು ನೋಡಲು ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ತೆರಳಿದ ದೃತಿಯವರನ್ನು ಕಂಡಂತಹ ಶಿವಣ್ಣ ನಾನು ನಿನ್ನನ್ನು ನೋಡಿ ಸಾಕ್ಷಾತ್ ಅಪ್ಪುನೇ (Appu) ಬಂದಾ ಎಂದುಕೊಂಡೆ ಎಂದಿದ್ದಾರೆ. ಹೀಗೆ ಸಂದರ್ಶ ಒಂದರಲ್ಲಿ ಮಾತನಾಡುವಾಗ ಅಪ್ಪು ಪುತ್ರಿ ಧೃತಿಯ ಕುರಿತು ಸಕರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಶಿವಣ್ಣನಿಗೆ (Shivanna) ಅವರ ಮದುವೆ ಯಾವಾಗ ಎಂದು ಮರು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ತಮ್ಮದೇ ದಾಟಿಯಲ್ಲಿ ಉತ್ತರ ನೀಡಿದ ಶಿವಣ್ಣ ದೃತಿ(Druthi) ಇನ್ನು ಚಿಕ್ಕವಳು ಅಲ್ಲದೆ ಆಕೆಯನ್ನು ಓದುತ್ತಿದ್ದಾಳೆ. ಸಾಕಷ್ಟನ್ನು ಕಲಿಯಬೇಕಿದೆ. ಅದೆಲ್ಲವೂ ಆದ ನಂತರವೇ ಮದುವೇ, ಸದ್ಯ ಯಾರಿಗೂ ಅರ್ಜೆಂಟ್ ಇಲ್ಲ ಎಂದು ಹೇಳುವ ಮೂಲಕ ಹರಿದಾಡುತ್ತಿದ್ದ ಗಾಸಿಪ್ಗಳಿಗೆ (gossip) ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ Vaibhavi Jagadeesh: ಯಾವ ಬಾಲಿವುಡ್ ಹೀರೋಯಿನ್ಗೂ ಕಡಿಮೆ ಇಲ್ಲ ಹಿರಿಯ ನಟ ಜೈ ಜಗದೀಶ್ ಮಗಳು!

Leave a Comment