Shivanna ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ನಿಮಗೆ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹಾಗೂ ಕೈಯಲ್ಲಿ ಹೆಚ್ಚಿನ ಸಿನಿಮಾವನ್ನು ಹೊಂದಿರುವಂತಹ ನಟ ಆಗಿದ್ದಾರೆ. ಅತ್ಯಂತ ಬ್ಯುಸಿ ನಟ ಎಂಬುದಾಗಿ ಕೂಡ ಅವರನ್ನು ಹೇಳಬಹುದಾಗಿದೆ.
ಕೈಯಲ್ಲಿ ಈಗಾಗಲೇ 12 ಸಿನಿಮಾಗಳನ್ನು ಹೊಂದಿರುವಂತಹ ಕನ್ನಡ ಚಿತ್ರರಂಗದ ಏಕೈಕ ನಟ ಎಂಬುದಾಗಿ ಕೂಡ ಅವರನ್ನು ಕರೆಯಬಹುದಾಗಿದೆ. ಶಿವಣ್ಣ(Shivanna) ಕನ್ನಡ ಚಿತ್ರರಂಗದ ಲೀಡರ್ ಆಗಿ ಕೂಡ ಸಾಕಷ್ಟು ವರ್ಷಗಳಿಂದ ಕಾಣುತ್ತಿದ್ದು, ಅಭಿಮಾನಿಗಳಿಗೆ ಇಂದಿಗೂ ಕೂಡ ಅವರ ಮೇಲೆ ಬೇಸರ ಹಾಗೂ ಪ್ರೀತಿ ಆಗ ಹೇಗಿತ್ತೊ ಈಗಲೂ ಕೂಡ ಹಾಗೆ ಇದೆ.
ಶಿವಣ್ಣ ವಯಸ್ಸು 61 ಆಗಿದ್ದರೂ ಕೂಡ ಇಂದಿಗೂ ಚಿಕ್ಕ ಮಕ್ಕಳ ರೀತಿಯಲ್ಲಿ ಲವಲವಿಕೆಯಿಂದ ಉತ್ಸಾಹಭರಿತರಾಗಿ ನಟನೆ ಹಾಗೂ ಇನ್ನಿತರ ವಿಚಾರಗಳನ್ನು ಮಾಡುವುದು ಅವರ ಅಭಿಮಾನಿಗಳಿಗೆ ಸೇರಿದಂತೆ ಕನ್ನಡ ಸಿನಿಮಾದ ಪ್ರೇಕ್ಷಕರಿಗೆ ಇಷ್ಟವಾಗುತ್ತೆ. Ghost ಸಿನಿಮಾದಲ್ಲಿ ವಿಭಿನ್ನ ಲುಕ್ ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದು ಪ್ರತಿಯೊಬ್ಬರಿಗೂ ಕೂಡ ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಹಾಗಿದ್ರೆ ಈ ಸಿನಿಮಾಗೆ ಬಜೆಟ್ ಎಷ್ಟಾಗಿರಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಇರುವ ಮಾಹಿತಿಯ ಪ್ರಕಾರ ಶಿವಣ್ಣ ಹಾಗೂ ಶ್ರೀನಿ ಕಾಂಬಿನೇಷನಲ್ಲಿ ಮೂಡಿ ಬರುತ್ತಿರುವ ಘೋಸ್ಟ್ ಸಿನಿಮಾದ ಬಜೆಟ್ ಸರಿಸುಮಾರು 20 ರಿಂದ 25 ಕೋಟಿ ಎಂಬುದಾಗಿ ತಿಳಿದು ಬಂದಿದ್ದು ಸಿನಿಮಾ ಖಂಡಿತವಾಗಿ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬಹುಭಾಷೆಗಳಲ್ಲಿ ಮಿಂಚುವಂತಹ ಭರವಸೆಯನ್ನು ಚಿತ್ರತಂಡ ಹೊಂದಿದ್ದು ಮುಂದಿನ ದಿನಗಳಲ್ಲಿ ಇದು ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.