ಅಪ್ಪುಗೆ ಯಾಕಿಷ್ಟು ಆತುರ ಇತ್ತು, ಇಷ್ಟು ಬೇಗನೆ ನಮ್ಮನ್ನೆಲ್ಲ ಬಿಟ್ಟು ಹೋಗುವಂಥ ಅವಸರವೇನಿತ್ತು ಎಂದು ಪ್ರತಿಯೊಬ್ಬ ಕನ್ನಡಿಗನಿಗೂ ಅನಿಸುತ್ತಿದೆ. ಪುನೀತ್ ಅವರ ಅಂತ್ಯಸಂಸ್ಕಾರಕ್ಕೆ 25 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದರು. 46 ವರ್ಷ ವಯಸ್ಸಿನ ನಟ, ಕೇವಲ 29 ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಇಷ್ಟೊಂದು ಜನರ ಮನಸ್ಸನ್ನು ಸಂಪಾದಿಸಲು ಹೇಗೆ ಸಾಧ್ಯ ಎಂದು ನಿಮಗೆ ಆಶ್ಚರ್ಯವಾಗಬಹುದು. ಪುನೀತ್ ರಾಜ್ ಕುಮಾರ್ ಕೇವಲ ನಟನಾಗಿ ಅಥವಾ ರಾಜ್ ಕುಮಾರ್ ಅವರ ಮಗನಾಗಿದ್ದರೆ ಇಷ್ಟೊಂದು ಅಭಿಮಾನಿಗಳನ್ನ ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲ.
ಅಪ್ಪು ಅವರು ಸಿನಿಮಾ ಹಿರೋ ಗಿಂತ ಹೆಚ್ಚಾಗಿ ಒಳ್ಳೆಯ ಗುಣವುಳ್ಳ ಮನುಷ್ಯನಾಗಿದ್ದ. 45 ಉಚಿತ ಶಾಲೆಗಳು, 16 ವೃದ್ಧಾಶ್ರಮಗಳು, 26 ಅನಾಥ ಮಕ್ಕಳು ಮತ್ತು 19 ಗೋಶಾಲೆ ಗಳು.. ಈ ಎಲ್ಲಾ ಸಮಾಜಮುಖಿ ಕೆಲಸಗಳನ್ನು ಪುನೀತ್ ಅವರು ಯಾರಿಗೂ ತಿಳಿಯದಂತೆ ನಿಭಾಯಿಸುತ್ತಿದ್ದರು. ಈ ಎಲ್ಲ ಕಾರಣಗಳಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುನೀತ್ ಅವರು ಖ್ಯಾತಿ ಗಳಿಸಿದ್ದಾರೆ. ರಾಜ್ ಕುಮಾರ್ ಅವರ ಕುಟುಂಬವನ್ನು ಇಂದಿಗೂ ದೊಡ್ಮನೆ ಎಂದು ಕರೆಯುತ್ತಾರೆ ಎಂದರೆ ಅದಕ್ಕೆ ಪುನೀತ್ ರಾಜ್ ಕುಮಾರ್ ಅವರ ಈ ಎಲ್ಲ ಸತ್ಕಾರ್ಯಗಳು ಮುಖ್ಯ ಕಾರಣ.
ಪುನೀತ್ ಅವರನ್ನು ಕಳೆದುಕೊಂಡು ಇದೀಗ ದೊಡ್ಮನೆ ರಾಜನಿಲ್ಲದ ಅರಮನೆಯಾಗಿದೆ. ಪುನೀತ್ ಅವರು ಇಲ್ಲದೆ 4 ತಿಂಗಳು ಕಳೆಯುತ್ತಾ ಬಂದಿವೆ ಇಂದಿಗೂ ಕೂಡ ಕುಟುಂಬದವರು ಪುನೀತ್ ಇಲ್ಲ ಎಂಬ ಸಂಕಲನದಲ್ಲಿ ಹೇಳಿದ್ದಾರೆ. ಪುನೀತ್ ಅವರ ಪತ್ನಿ ಅಶ್ವಿನಿ ಯಾಗಲಿ ಶಿವರಾಜ್ ಕುಮಾರ್ ಅಥವಾ ರಾಗಣ್ಣ ಆಗಲಿ ಯಾವುದೇ ಕಾರ್ಯಕ್ರಮಕ್ಕೆ ಬಂದಾಗ ಪುನೀತ್ ಅವರ ಫೋಟೋಗಳು ನೋಡಿದ ತಕ್ಷಣ ಅವರ ಕಣ್ಣಲ್ಲಿ ನೀರು ತುಂಬಿತ್ತದೆ. ಪುನೀತ್ ನೆನಪಿಸಿಕೊಂಡಾಗಲೆಲ್ಲ ಇವರಿಗೆ ಪುನೀತ್ ಬಿಟ್ಟು ಜೀವನ ನಡೆಸುವುದು ಹೇಗೆ ಎಂಬ ಚಿಂತೆ ಮನೆ ಮಾಡುತ್ತದೆ.
ಪುನೀತ್ ರಾಜ್ ಕುಮಾರ್ ಅವರು ಕೊನೆಯದಾಗಿ ತನ್ನ ಅಭಿಮಾನಿಗಳಿಗೆಲ್ಲ ಬಿಟ್ಟುಹೋಗಿರುವ ಉಡುಗೊರೆಯೆಂದರೆ ಜೇಮ್ಸ್ ಸಿನೆಮಾ ಈ ಸಿನಿಮಾ ಇದೇ ತಿಂಗಳು ಮಾರ್ಚ್ 14 ರಂದು ದೇಶದಾದ್ಯಂತ ಬಿಡುಗಡೆಯಾಗಲಿದೆ. ಜೇಮ್ಸ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಶಿವಣ್ಣ ಅವರನ್ನು ಅತಿಥಿಯಾಗಿ ಕರೆದಿದ್ದರು. ಈ ಕಾರ್ಯಕ್ರಮಕ್ಕೆ ಶಿವಣ್ಣ ಅತಿಥಿಯಾಗಿ ಬಂದಿದ್ದರು. ಪುನೀತ್ ಇಲ್ಲದೆ ಜೇಮ್ಸ್ ಚಿತ್ರದ ಕಾರ್ಯಕ್ರಮ ಸಪ್ಪೆಯಾಗಿತ್ತು.
ಕಾರ್ಯಕ್ರಮದಲ್ಲಿ ಪರದೆಯ ಮೇಲೆ ಪುನೀತ್ ಅವರ ಫೋಟೋಗಳನ್ನು ಹಾಕಿದಾಗೆಲ್ಲ ಶಿವಣ್ಣ ಅವರ ಕಣ್ಣಿನಲ್ಲಿ ನೀರು ತುಂಬಿತ್ತು. ಅದರಲ್ಲೂ ವಿಶೇಷವಾಗಿ ಜೇಮ್ಸ್ ಚಿತ್ರದ ಹಾಡೊಂದನ್ನು ಪ್ರಸಾರ ಮಾಡಿದಾಗ ಶಿವಣ್ಣವರ ಅತ್ತೇ ಬಿಟ್ಟರು. ಗೇಮ್ ಚಿತ್ರದ ಬಗ್ಗೆ ಒಂದೆರಡು ಮಾತನಾಡಿ ಎಂದು ಶಿವಣ್ಣ ಅವರನ್ನು ವೇದಿಕೆ ಮೇಲೆ ಕರೆದಾಗ ಶಿವಣ್ಣ ಅವರು ಆಡಿದ ಮನದಾಳದ ಮಾತು ಪ್ರತಿಯೊಬ್ಬರಿಗೂ ಅಳು ತರಿಸಿತ್ತು. ವೇದಿಕೆಯ ಮೇಲೆ ಮಂದಿ ಶಿವಣ್ಣವರು ಅಪ್ಪು ಅವರ ಬಗ್ಗೆ ಭಾರವಾದ ಮನಸ್ಸಿನಿಂದ ತಮ್ಮ ದುಃಖವನ್ನು ಹೊರಹಾಕಿದ್ದಾರೆ.
ಅಪ್ಪು ಬಗ್ಗೆ ಮಾತಾಡೋಕೆ ತುಂಬಾ ಕಷ್ಟ ಆಗುತ್ತೆ. ಕಳೆದ 4 ತಿಂಗಳಿಂದ ನಾನು ಬರೀ ಊಟ ನಿದ್ದೆ ಮತ್ತು ಶೂಟಿಂಗ್ ಮಾಡ್ತಾ ಇದೀನಿ ಅಷ್ಟೆ .. ಆದರೆ ಮನಸ್ಸಿನಲ್ಲಿ ತುಂಬಾ ಕಷ್ಟ ಇದೆ. ಬದುಕಬೇಕು ಅಂತ ಬದುಕುತ್ತ ಇದ್ದೇನೆ. ನನಗೆ ಅಪ್ಪುಗೆ 13 ವರ್ಷ ವ್ಯತ್ಯಾಸವಿದೆ ನೆನೆಸಿಕೊಂಡರೆ ತುಂಬಾ ನೋವಾಗುತ್ತೆ. ಅಪ್ಪು ಎಲ್ಲಿಯೂ ಹೋಗಿಲ್ಲ ಪ್ರತಿಯೊಬ್ಬ ಕನ್ನಡಿಗರ ಹೃದಯದಲ್ಲಿ ಇದ್ದಾನೆ ಅವನು 100 % ಪರ್ಸೆಂಟ್ ಇದ್ದಾನೆ. ನಾನು ಇನ್ಮೇಲೆ ನನ್ನ ಸಿನೆಮಾ ದಲ್ಲಿ ಅಪ್ಪು ತರ ಅಭಿನಯ ಮಾಡೋಕೆ ಟ್ರೈ ಮಾಡ್ತೀನಿ. ಅವನು ಜೀವಂತವಾಗಿ ಇರೋ ಹಾಗೆ ಮಾಡ್ತೀನಿ ಎಂದು ಶಿವಣ್ಣವರು ಅಳುತ್ತಾ ತಮ್ಮ ಭಾಷಣವನ್ನು ಮುಗಿಸಿದರು.