ಶಿವಣ್ಣ ಅವರು ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದ ಹೀರೋಗಳ ಪಟ್ಟಿಯಲ್ಲಿ ಹಿರಿಯರು. ಶಿವಣ್ಣನವರು ಈಗ ತಮ್ಮ 125 ನೇ ಚಿತ್ರದ ತಯಾರಿ ನಡೆಸುತ್ತಿದ್ದಾರೆ. ಅರುವತ್ತು ವರ್ಷ ವಯಸ್ಸಾದರೂ ಸಹ ಶಿವಣ್ಣನವರು ಇನ್ನೂ ಕೂಡ ತುಂಬಾ ಯಂಗ್ & ಎನರ್ಜಿಟಿಕ್ ಆಗಿದ್ದಾರೆ. ನೂರಾರು ಸಿನಿಮಾಗಳನ್ನು ಮಾಡಿರುವ ಶಿವಣ್ಣನವರು ಸಿನಿಮಾಗೆ ಕೋಟಿಗಟ್ಟಲೆ ಹಣ ಗಳ ಸಂಭಾವನೆ ಪಡೆಯುತ್ತಾರೆ. ಕೋಟ್ಯಂತರ ಆಸ್ತಿ ಇರುವ ಶಿವಣ್ಣನವರ ಬಳಿ ಐಷಾರಾಮಿ ಕಾರುಗಳು ಕೂಡ ಇವೆ.
ಶಿವಣ್ಣನ ಬಳಿ ಇರುವ ಕಾರುಗಳ ಲಿಸ್ಟ್ ಹೀಗಿವೆ. ಸದ್ಯದ ಮಟ್ಟಿಗೆ ಶಿವಣ್ಣ ಅವರ ಮನೆಯಲ್ಲಿ ನಾಲ್ಕು ಕಾರುಗಳು ಮಾತ್ರ ಇವೆ .ಒಟ್ಟಾರೆ ಇಲ್ಲಿಯವರೆಗೆ ಶಿವರಾಜ್ ಕುಮಾರ್ ಅವರು ಸುಮಾರು ಹತ್ತರಿಂದ ಹದಿನೈದು ಕಾರುಗಳನ್ನು ಖರೀದಿ ಮಾಡಿದ್ದಾರೆ. ಆದರೆ ಇದೀಗ ಶಿವಣ್ಣ ಅವರ ಮನೆಯಲ್ಲಿ ಟೊಯೋಟಾ ಇನೋವಾ, ಟೊಯೋಟಾ ಫಾರ್ಚುನರ್ ವೋಲ್ವೋ ಮತ್ತು ಎರ್ಟಿಕಾ ಕಾರುಗಳು ಇವೆ. ಬೇರೆ ನಟರಂತೆ ಶಿವಣ್ಣ ಅವರಿಗೆ ಕಾರುಗಳ ಮೇಲೆ ಹೆಚ್ಚಾದ ಒಲವು ಇಲ್ಲ ಆದರೆ ಓಡಾಡಲಿಕ್ಕೆ ಮತ್ತು ಅವಶ್ಯಕತೆಗೆ ತಕ್ಕಂತೆ ಕಾರುಗಳನ್ನು ಶಿವಣ್ಣ ಖರೀದಿ ಮಾಡಿದ್ದಾರೆ.
ನಲವತ್ತು ಲಕ್ಷ ರುಪಾಯಿಗೆ ಟೊಯೋಟಾ ಫಾರ್ಚುನರ್ ಕಾರನ್ನು ಖರೀದಿ ಮಾಡಿದ್ದಾರೆ. ಹಾಗೆ ಇಪ್ಪತ್ತು ಲಕ್ಷ ರುಪಾಯಿ ಗೆ ಟಯೋಟಾ ಕಂಪನಿಯ ಫಾರ್ಚುನರ್ ಕಾರನ್ನು ಕೂಡ ಖರೀದಿ ಮಾಡಿದ್ದಾರೆ. ಶಿವಣ್ಣ ಅವರ ಪತ್ನಿ ಗೀತಕ್ಕ ಅವರಿಗೆ ವೋಲ್ವೊ ಕಂಪನಿಯ ಕಾರ್ ಒಂದನ್ನು ಖರೀದಿ ಮಾಡಬೇಕು ಎಂಬ ಆಸೆ ಇತ್ತು ಪತ್ನಿ ಆಸೆಯನ್ನು ಈಡೇರಿಸಬೇಕೆಂಬ ಶಿವಣ್ಣ ವೊಲ್ವೋ ಕಾರನ್ನು ಖರೀದಿ ಮಾಡಿದ್ದಾರೆ ಈ ಕಾರಿನ ಬೆಲೆ ಸುಮಾರು 70 ಲಕ್ಷ ರುಪಾಯಿಗಳು ಶಿವಣ್ಣವರ ಬಳಿಯಿರುವ ಅತ್ಯಂತ ದುಬಾರಿ ಕಾರ್ ಎಂದರೆ ಅದು ವೋಲ್ವೋ ಕಾರ್ .
ಶಿವಣ್ಣನವರು ಶೂಟಿಂಗ್ ಗಳಿಗೆ ಹೋಗಬೇಕಾದರೆ ಟೊಯೋಟಾ ಫಾರ್ಚುನರ್ ಕಾರಿನಲ್ಲಿ ಹೋಗುತ್ತಾರೆ. ಟೊಯೋಟಾ ಫಾರ್ಚುನರ್ ಕಾರ್ ಒಳಗಡೆ ತುಂಬಾ ವಿಶಾಲವಾದ ಜಾಗವಿದೆ ಮತ್ತು ಕೂತುಕೊಳ್ಳೋಕೆ ತುಂಬಾ ಕಂಫರ್ಟ್ ಆಗಿರುತ್ತದೆ. ಆದ್ದರಿಂದ ಶಿವಣ್ಣ ಅವರು ಹೆಚ್ಚಾಗಿ ಬಳಸುವ ಕಾರು ಟೊಯೋಟಾ ಫಾರ್ಚ್ಯುನರ್ ಕಾರ್. ವೈಯಕ್ತಿಕವಾಗಿ ಶಿವಣ್ಣ ಅವರಿಗೆ ಟೊಯೋಟಾ ಫಾರ್ಚುನರ್ ಎಂದರೆ ತುಂಬಾ ಅಚ್ಚುಮೆಚ್ಚು. ಆದರೆ ಶಿವಣ್ಣ ಅವರ ಪತ್ನಿಗೆ ವೋಲ್ವೊ ಕಾರೆಂದರೆ ತುಂಬಾ ಪ್ರೀತಿ. ಕುಟುಂಬದವರ ಜೊತೆ ಅಥವಾ ಪತ್ನಿಯ ಜೊತೆ ಸುತ್ತಾಡೋಕೆ ಶಿವಣ್ಣನವರು ವೋಲ್ವೋ ಕಾರ್ ನಲ್ಲಿ ಹೋಗುತ್ತಾರೆ.
ಹಾಗೆ ಶಿವಣ್ಣನವರ ಮಗಳು ಕೂಡ ಟೊಯೊಟಾ ಕಾರನ್ನು ಉಪಯೋಗಿಸುತ್ತಾಳೆ. ಶಿವಣ್ಣವರ ಸಣ್ಣ ಮಗಳು ಓಡಾಡಲಿಕ್ಕೆ ಟೊಯೋಟಾ ಇನೋವಾ ಕಾರನ್ನು ಬಳಸುತ್ತಾಳೆ. ಈ ಕಾರಿನ ಬೆಲೆ ಇಪ್ಪತ್ತು ರಿಂದ ಮೂವತ್ತು ಲಕ್ಷ ರುಪಾಯಿಗಳು. ಶಿವಣ್ಣ ನೂರಾರು ಕೋಟಿ ಆಸ್ತಿ ಮಾಡಿದರೂ ಕೂಡ ಕೋಟಿ ಕೋಟಿ ಬೆಲೆಬಾಳುವ ಒಂದು ಕಾರನ್ನು ಕೂಡ ಖರೀದಿ ಮಾಡಿಲ್ಲ. ಶಿವಣ್ಣ ತುಂಬಾ ಸಿಂಪಲ್ಲಾಗಿ ಬದುಕೋಕೆ ಇಷ್ಟ ಪಡುತ್ತಾರೆ. ಕಾರುಗಳಿಗೆ ಕೋಟಿ ಕೋಟಿ ಹಣವನ್ನು ಖರ್ಚು ಮಾಡೋಕೆ ಇಷ್ಟ ಪಡಲ್ಲ.