Shivanna: ಸಂಚಿತ್ ಸಂಜೀವ್ ಮೊದಲ ಸಿನಿಮಾದ ಟೀಸರ್ ನೋಡಿದ ಶಿವಣ್ಣ ಹೇಳಿದ್ದೇನು? ಎಲ್ಲರೂ ಸರ್ಪ್ರೈಸ್.

Shivanna ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಕನ್ನಡ ಚಿತ್ರರಂಗಕ್ಕೆ ಬಂದು ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ 35 ವರ್ಷಗಳಿಗೂ ಅಧಿಕಾರ ಕಳೆದಿದ್ದು ಚಿತ್ರರಂಗದಲ್ಲಿ ಅವರಿಗೆ ಇರುವಷ್ಟು ಅನುಭವ ಯಾರಿಗೂ ಕೂಡ ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಕಿಚ್ಚ ಸುದೀಪ್(Kiccha Sudeep) ರವರ ಅಳಿಯ ಆಗಿರುವಂತಹ ಸಂಚಿತ್ ಸಂಜೀವ್ ಅವರ ಮೊದಲನೇ ಸಿನಿಮಾ ಜಿಮ್ಮಿಯ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಅವರು ಕೂಡ ಬಂದಿದ್ದರು.

ಹೌದು ಗೆಳೆಯರೇ ಸಂಚಿತ್ ಸಂಜೀವ್(Sanchith Sanjeev) ಅವರು ಜಿಮ್ಮಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟ ಹಾಗೂ ನಿರ್ದೇಶಕನಾಗಿ ಏಕಕಾಲದಲ್ಲಿ ಲಾಂಚ್ ಆಗುತ್ತಿದ್ದು ಇದು ಪ್ರತಿಯೊಬ್ಬ ಕಿಚ್ಚನ ಅಭಿಮಾನಿಗಳ ಮುಖದಲ್ಲಿ ಕೂಡ ನಮ್ಮ ಕಿಚ್ಚ ಬಾಸ್ ಉತ್ತರಾಧಿಕಾರಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಎಂಬುದಾಗಿ ಸಂತೋಷ ಮೂಡುವಂತೆ ಮಾಡಿದೆ.

ಇನ್ನು ಶಿವಣ್ಣ(Shivanna) ಕೂಡ ಸಂಚಿತ್ ಸಂಜೀವ್ ಅವರಿಗೆ ಶುಭಾಶಯಗಳು ತಿಳಿಸುವ ಕಾರಣಕ್ಕಾಗಿ ವೇದಿಕೆ ಮೇಲೆ ಬಂದು ಕೆಲವು ಮಾತುಗಳನ್ನಾಡಿದ್ದು ಈ ಸಂದರ್ಭದಲ್ಲಿ ಸಂಚಿತ್ ಸಂಜೀವ್ ಅವರನ್ನು ತಮಗೆ ಹೋಲಿಸಿಕೊಂಡು ಕೆಲವೊಂದು ವಿಶೇಷ ಮಾತುಗಳನ್ನಾಡಿದ್ದರೂ ಅದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ಸಂಚಿತ್ ಸಂಜೀವ್ ಅವರನ್ನು ಟೀಸರ್ ನಲ್ಲಿ ನೋಡಿದಾಗ ನನ್ನನ್ನೇ ನಾನು ನೋಡಿಕೊಂಡಂತಾಗುತ್ತದೆ ಒಳ್ಳೇ ಓಂ ಸಿನಿಮಾ ರೀತಿಯ ಫೀಲ್ ಕೊಡುತ್ತೆ ಎಂಬುದಾಗಿ ಶಿವಣ್ಣ ಜಿಮ್ಮಿ ಸಿನಿಮಾದ ಟೀಸರ್ ಬಗ್ಗೆ ಹೇಳಿಕೊಂಡಿದ್ದಾರೆ. ನಿಮಗೆ ಚಿತ್ರರಂಗದಲ್ಲಿ ಒಳ್ಳೆಯದಾಗಲಿ ಎಂಬುದಾಗಿ ಕೂಡ ಶಿವಣ್ಣ ಈ ಸಂದರ್ಭದಲ್ಲಿ ಶುಭ ಹಾರೈಸಿದ್ದಾರೆ.

Leave a Comment