Shankar Nag: ಶಂಕರ್ ನಾಗ್ ನಾಯಕ ನಟನಾಗಿ ಮಾಡುತ್ತಿದ್ದ ಇದೊಂದು ಕೆಲಸ ನಿರ್ಮಾಪಕರಿಗೆ ತುಂಬಾ ಇಷ್ಟ ಆಗ್ತಿತ್ತು.

Shankar Nag ಕನ್ನಡ ಚಿತ್ರರಂಗದ ಕಣ್ಮಣಿಗಳಲ್ಲಿ ಆಟೋರಾಜ ಖ್ಯಾತಿಯ ಶಂಕರ್ ನಾಗ್(Shankar Nag) ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಇದ್ದಿದ್ದು ಅವರು ಕೆಲವೇ ವರ್ಷಗಳು ಆದರೂ ಕೂಡ ಇಂದಿಗೂ ಮರೆಯಲಾರದಂತ ಹೆಸರ ಒಡೆಯನಾಗಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಟ ನಿರ್ದೇಶಕ ನಿರ್ಮಾಪಕನಾಗಿ ಕೂಡ ಕನ್ನಡ ಚಿತ್ರರಂಗದಲ್ಲಿ ಶಂಕರ್ ನಾಗ್ ರವರು ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ನೀಡುವ ಮೂಲಕ ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ತಮ್ಮ ಕೊಡುಗೆಯನ್ನು ಕೂಡ ನೀಡಿದ್ದಾರೆ. ಶಂಕರ್ ನಾಗ್ ಮಾಡುತ್ತಿದ್ದ ಒಂದು ಕೆಲಸ ನಿರ್ಮಾಪಕರಿಗೆ ಬಹಳ ಇಷ್ಟವಾಗುತ್ತಿತ್ತಂತೆ.

ಮುಂದಿನ ಕಾಲದಲ್ಲಿ ನೀವು ಗಮನಿಸಿರಬಹುದು ನಿರ್ಮಾಪಕರು ಹಣ ನೀಡದಿದ್ದರೆ ಯಾವುದೇ ನಾಯಕ ನಟರು ಕೂಡ ಕೆಲಸ ಮಾಡುವುದಿಲ್ಲ ಆದರೆ ಶಂಕರ್ ನಾಗ್ ಅವರು ಆ ಕಾಲದಲ್ಲಿ ಸಿನಿಮಾ ಬಿಡುಗಡೆಯಾಗಿ ಒಂದು ವೇಳೆ ಸೋತಿದ್ದೆ ಹೌದಾದಲ್ಲಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿರಲಿಲ್ಲವಂತೆ. ಈ ಮೂಲಕ ನಿರ್ಮಾಪಕರಿಗೆ ಹೊರೆ ಆಗೋದನ್ನು ಅವರು ತಪ್ಪಿಸುತ್ತಿದ್ದರಂತೆ.

ಆದರೆ ಶಂಕರ್ ನಾಗ್(Shankar Nag) ರವರ ಸಿನಿಮಾಗಳು ಸೋಲುತ್ತಿದ್ದದ್ದು ಅತ್ಯಂತ ವಿರಳ. ಸಿನಿಮಾದಿಂದಲೂ ದೊಡ್ಡ ಪ್ರಪಂಚದ ಯೋಚನೆ ಮಾಡುತ್ತಿದ್ದ ಶಂಕರ್ ನಾಗ್ ರವರು ಬೆಂಗಳೂರು ಇಡೀ ವಿಶ್ವದಲ್ಲೇ ಮಾದರಿ ನಗರವನ್ನಾಗಿ ಮಾಡಬೇಕು ಎನ್ನುವ ಆಲೋಚನೆಯನ್ನು ಕೂಡ ಹೊಂದಿದ್ದರು. ಶಂಕರ್ ನಾಗ್ ಅವರ ಬಗ್ಗೆ ನಿಮಗಿರುವಂತಹ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಶೇರ್ ಮಾಡಿಕೊಳ್ಳಿ.

Leave a Comment