Shah Rukh Khan ಭಾರತೀಯ ಚಿತ್ರರಂಗದಲ್ಲಿ ಶಾರುಖ್ ಖಾನ್(Shah Rukh Khan) ಅವರ ಬೆಲೆ ಸೋತರು ಗೆದ್ದರು ಕಡಿಮೆಯಾಗುವುದಿಲ್ಲ. ಸಾಕಷ್ಟು ಸಿನಿಮಾಗಳಿಂದ ಸೋತಿದ್ದ ಶಾರುಖ್ ಖಾನ್ ರವರು ಪಠಾಣ್(Pathaan) ಸಿನಿಮಾದ ಮೂಲಕ ಸಾವಿರ ಕೋಟಿ ಕಲೆಕ್ಷನ್ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸಿದ್ದಾರೆ.
ಇನ್ನು ಬಾಲಿವುಡ್ ಚಿತ್ರರಂಗದಲ್ಲಿ ಅನಭಿಶಕ್ತ ದೊರೆ ಆಗಿರುವಂತಹ ಶಾರುಖ್ ಖಾನ್ ವಿದೇಶದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವಂತಹ ಭಾರತದ ನಟರಲ್ಲಿ ನಂಬರ್ ಒನ್ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಕೇವಲ ಅಭಿಮಾನಿಗಳ ವಿಚಾರದಲ್ಲಿ ಮಾತ್ರವಲ್ಲದೆ ವಿಶ್ವದ ಅತ್ಯಂತ ಶ್ರೀಮಂತ ನಟರಲ್ಲಿ ಎರಡನೇ ಸ್ಥಾನವನ್ನು ಹೊಂದಿದ್ದಾರೆ.
ಆದರೆ ಶಾರುಖ್ ಖಾನ್(SRK) ಅವರ ಬಗ್ಗೆ ತಿಳಿಯದೆ ಇರುವ ಒಂದು ವಿಚಾರವೇನೆಂದರೆ ಅವರಿಗೂ ಕರ್ನಾಟಕಕ್ಕೂ ಒಂದು ನಂಟಿದೆ. ಅವರೇ ಹೇಳುವಂತೆ ಅವರು ಕೂಡ ಕರ್ನಾಟಕಕ್ಕೆ ಸೇರುತ್ತಾರೆ ಎಂಬುದಾಗಿ ಅವರು ಹೇಳುತ್ತಾರೆ. ಅಷ್ಟಕ್ಕೂ ಅದು ಯಾವ ವಿಧದಲ್ಲಿ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.
ಹೌದು ಮಿತ್ರರೇ ಅವರ ಅಜ್ಜಿ ಮಂಗಳೂರಿನವರಾಗಿದ್ದು ಈ ಕಾರಣದಿಂದಾಗಿ ತಾನು ಕೂಡ ಮಂಗಳೂರಿಗೆ ಸೇರುತ್ತೇನೆ ಎಂಬುದಾಗಿ ಚೆನ್ನೈ ಎಕ್ಸ್ಪ್ರೆಸ್(Chennai Express) ಸಿನಿಮಾದ ಬಿಡುಗಡೆಯ ಸಂದರ್ಭದಲ್ಲಿ ಶಾರುಖ್ ಖಾನ್ ರವರು ಸ್ವತಹ ಅವರೇ ಈ ವಿಚಾರದ ಕುರಿತಂತೆ ಕುಲಾಸೆ ಮಾಡಿದರು. ಕೆಲವರು ಸಿನಿಮಾದ ಪ್ರಚಾರಕ್ಕಾಗಿ ಶಾರುಖ್ ಖಾನ್ ಅವರು ಹೀಗೆ ಹೇಳುತ್ತಿರಬಹುದು ಎಂಬುದಾಗಿ ಕೂಡ ಆ ಸಂದರ್ಭದಲ್ಲಿ ಕಾಮೆಂಟ್ ಮಾಡಿದ್ದರು.