Shah Rukh Khan ಇಡೀ ದೇಶದಲ್ಲಿ ಅತ್ಯಂತ ಶ್ರೀಮಂತ ನಟ ಆಗಿರುವಂತಹ ಶಾರುಖ್ ಖಾನ್(Shah Rukh Khan) ಅವರ ಪರಿಚಯ ಕೇವಲ ಹಿಂದಿ ಭಾಷೆಯವರಿಗೆ ಮಾತ್ರವಲ್ಲದೆ ಇಡೀ ಭಾರತೀಯರಿಗೆ ಇದೆ. ಅದಕ್ಕಾಗಿ ಅವರನ್ನು ಕಿಂಗ್ ಖಾನ್ ಎಂಬುದಾಗಿ ಕರೆಯಲಾಗುತ್ತದೆ ಹಾಗೂ ಅವರು ವಿಶ್ವದ ಎರಡನೇ ಅತ್ಯಂತ ಶ್ರೀಮಂತ ನಟ ಕೂಡ ಆಗಿದ್ದಾರೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.
ಅವರ ನಂತರ ಅವರ ಮಗ ಆಗಿರುವಂತಹ ಆರ್ಯನ್ ಖಾನ್(Aryan Khan) ಚಿತ್ರರಂಗಕ್ಕೆ ಕಾಲಿಡುತ್ತಾರೆ ಎಂಬುದಾಗಿ ಎಲ್ಲರೂ ಕೂಡ ಭಾವಿಸಿದ್ದರು ಆದರೆ ಅವರ ಮಗ ವ್ಯಾಪಾರದ ಅಂದರೆ ಬ್ಯುಸಿನೆಸ್ ಕಡೆಗೆ ಸಂಪೂರ್ಣವಾದ ಆಸಕ್ತಿಯನ್ನು ತೋರಿಸಿದ್ದಾರೆ ಎಂಬುದಾಗಿ ನಿಚ್ಚಳವಾಗಿ ಕಂಡುಬರುತ್ತದೆ. ಈಗ ಅವರ ಮನೆಯಿಂದ ಚಿತ್ರರಂಗಕ್ಕೆ ಕಾಲಿಡುತ್ತಿರುವ ಮತ್ತೊಂದು ಪ್ರತಿಭೆ ಅವರ ಮಗಳು ಸುಹಾನ ಖಾನ್ ಆಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಹೌದು ಕೆಲವು ವರ್ಷಗಳ ಹಿಂದಿನ ಗಮನಿಸಿದರೆ ಚಿಕ್ಕ ಮಗುವಿನಂತೆ ಇದ್ದ ಸುಹಾನ ಖಾನ್(Suhana Khan) ಈಗ ಬೆಳೆದು ದೊಡ್ಡವರಾಗಿದ್ದು ಅತಿ ಶೀಘ್ರದಲ್ಲೇ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಕೂಡ ಕಾಲಿಡಬಹುದೆಂಬುದಾಗಿ ಬಾಲಿವುಡ್ ಅಂಗಳದಿಂದ ಸುದ್ದಿ ಕೇಳಿ ಬರುತ್ತಿದೆ. ಇನ್ನು ಅವರ ರಕ್ಷಣೆಗಾಗಿ ತಮ್ಮ ಬಾಡಿಗಾರ್ಡ್ ಅನ್ನು ಅವರ ಬೆಂಗಾವಲಿಗೆ ಶಾರುಖ್ ಖಾನ್ ಕಳುಹಿಸಿಕೊಟ್ಟಿದ್ದಾರೆ.
ಸುಹಾನ ಖಾನ್ ಅವರ ರಕ್ಷಣೆಗಾಗಿ ರವಿ ಸಿಂಗ್ ಎನ್ನುವಂತಹ ಶಾರುಖ್ ಖಾನ್ ಅವರ ನಿಷ್ಠಾವಂತ ಬಾಡಿಗಾರ್ಡ್ ಬೆಂಗಾವಲಿಗೆ ಇದ್ದು ವರ್ಷಕ್ಕೆ 2.5 ಕೋಟಿ ರೂಪಾಯಿ ಸಂಬಳವನ್ನು ಪಡೆಯುತ್ತಿದ್ದಾರೆ ಎಂದರೆ ನಿಜಕ್ಕೂ ಕೂಡ ನೀವು ನಂಬಲೇಬೇಕು. ಇದಕ್ಕಾಗಿ ಅವರನ್ನು ದೇಶದ ಅತ್ಯಂತ ಶ್ರೀಮಂತ ಸೆಲೆಬ್ರಿಟಿ ಬಾಡಿಗಾರ್ಡ್ ಎಂಬುದಾಗಿ ಕರೆಯಲಾಗುತ್ತದೆ.