Sanvi Sudeep ಒಂದು ಕಡೆ ಕಿಚ್ಚ ಸುದೀಪ್(Kiccha Sudeep) ರವರ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಅವರ ಮಗಳಾಗಿರುವಂತಹ ಸಾನ್ವಿ ಸುದೀಪ್ ರವರು ತಮ್ಮ ಸಹೋದರ ಆಗಿರುವಂತಹ ಸಂಚಿತ್ ಸಂಜೀವ್(Sanchith Sanjeev) ಅವರ ಸಿನಿಮಾದಲ್ಲಿ ಹಾಡನ್ನು ಹಾಡುವ ಮೂಲಕ ಕೂಡ ಸುದ್ದಿಯಲ್ಲಿದ್ದಾರೆ.
ಸಾನ್ವಿ ಸುದೀಪ್(Sanvi Sudeep) ರವರು ಜಿಮ್ಮಿ ಸಿನಿಮಾದಲ್ಲಿ ಥೀಮ್ ಸಾಂಗ್ ಅನ್ನು ಹಾಡುವ ಮೂಲಕ ಈಗ ಯಾವುದೇ ಹಾಲಿವುಡ್ ಸಿಂಗರ್ ಗೂ ಕೂಡ ಕಡಿಮೆ ಇಲ್ಲದಂತೆ ಸದ್ದು ಮಾಡುತ್ತಿದ್ದಾರೆ. ಅವರು ಹಾಡಿರುವ ರೀತಿ ಕೂಡ ನಿಜಕ್ಕೂ ಹಾಲಿವುಡ್ ಸಿಂಗರ್ ಗಳನ್ನು ಮೀರಿಸುವಂತಿದೆ ಎನ್ನುವುದನ್ನು ಕೂಡ ನೀವು ಒಪ್ಪಿಕೊಳ್ಳಬೇಕು.
ಇನ್ನು ಸಾನ್ವಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಖತ್ ಆಕ್ಟಿವ್ ಆಗಿದ್ದು ಅವರು ಶೇರ್ ಮಾಡಿಕೊಂಡಿರುವಂತಹ ಒಂದು ಫೋಟೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದ್ದು ಇದು ಮತ್ಯಾವುದು ಅಲ್ಲ ಪುನೀತ್ ರಾಜಕುಮಾರ್(Puneeth Rajkumar) ಅವರ ಮಗಳಾಗಿರುವಂತಹ ವಂದಿತ ಅವರ ಜೊತೆಗೆ ತೆಗೆದುಕೊಂಡಿರುವ ಫೋಟೋ. ಈ ಮೂಲಕ ಇಬ್ಬರೂ ಕೂಡ ಆತ್ಮೀಯ ಸ್ನೇಹಿತರು ಎಂಬುದು ತಿಳಿದು ಬರುತ್ತದೆ.
ಸಾನ್ವಿ ಹಾಗೂ ವಂದಿತ(Vanditha Puneeth Rajkumar) ಇಬ್ಬರನ್ನು ಕೂಡ ಸಾಮಾಜಿಕ ಜಾಲತಾಣದ ಫೋಟೋದಲ್ಲಿ ಒಂದೇ ಫ್ರೇಮ್ನಲ್ಲಿ ಒಟ್ಟಿಗೆ ನೋಡಿದಾಗ ಇಬ್ಬರು ನಟರ ಅಭಿಮಾನಿಗಳು ಕೂಡ ತಂದೆಯಂತೆ ಮಕ್ಕಳು ಕೂಡ ಆತ್ಮೀಯ ಸ್ನೇಹಿತರು ಎಂಬುದಾಗಿ ಭಾವುಕರಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.