Sanvi Sudeep ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ರವರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಂದು ಭಾಷೆಗಳಲ್ಲಿ ಹಾಗೂ ನಟನೆ ನಿರ್ದೇಶನ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಕೂಡ ಯಾರು ಮಾಡಲಾಗದ ಸಾಧನೆಯನ್ನು ಮಾಡಿರುವ ಮೇರು ಕಲಾವಿದ. ನಿಜಕ್ಕೂ ಕೂಡ ಪ್ರತಿಯೊಂದು ಚಿತ್ರರಂಗದಲ್ಲಿ ಕೂಡ ಅವರ ಮೇಲೆ ವಿಶೇಷವಾದ ಗೌರವ ಇರುತ್ತದೆ.
ಈಗ ಚಿತ್ರರಂಗಕ್ಕೆ ಜಿಮ್ಮಿ ಸಿನಿಮಾದ(Jimmy Kannada Film) ಮೂಲಕ ಅವರ ಅಳಿಯ ಆಗಿರುವಂತಹ ಸಂಚಿತ್ ಸಂಜೀವ್(Sanchith Sanjeev) ಅವರು ಕೂಡ ಕಾಲಿಡುವ ಮೂಲಕ ತಮ್ಮ ಮಾವನ ಹಾಗೆ ಚಿತ್ರರಂಗದಲ್ಲಿ ನಿರ್ದೇಶಕ ಹಾಗೂ ನಾಯಕ ನಟನಾಗುವಂತಹ ಕನಸನ್ನು ಮೊದಲ ಸಿನಿಮಾದ ಮೂಲಕವೇ ತೀರಿಸಿಕೊಳ್ಳಲು ಹೊರಟಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಮೆಚ್ಚಿಕೊಳ್ಳಲೇ ಬೇಕಾಗಿದೆ.
ಶಿವಣ್ಣ(Shivanna) ಹೇಳಿರುವಂತೆ ಈ ರೀತಿ ಮೊದಲ ಸಿನಿಮಾದಲ್ಲಿ ನಾಯಕ ನಟನಾಗಿ ನಿರ್ದೇಶಕನಾಗಿ ಕಾಣಿಸಿಕೊಳ್ಳುತ್ತಿರುವ ಅಂತಹ ಮತ್ತೊಬ್ಬ ಕಲಾವಿದ ಯಾರು ಇಲ್ಲ ನಿಮಗೆ ಖಂಡಿತ ಒಳ್ಳೆಯದಾಗುತ್ತದೆ ಎಂಬುದಾಗಿ ಕೂಡ ಸಂಚಿತ್ ಸಂಜೀವ್ ಅವರಿಗೆ ಶಿವಣ್ಣ ಶುಭ ಹಾರೈಸಿದ್ದಾರೆ. ಇನ್ನು ನಿಮಗೆ ತಿಳಿಯದೆ ಇರುವಂತಹ ಮತ್ತೊಂದು ವಿಚಾರವೇನೆಂದರೆ ಈ ಸಿನಿಮಾದ ಮೂಲಕ ಕಿಚ್ಚ ಸುದೀಪ್ ರವರ ಮಗಳು ಕೂಡ ಕನ್ನಡ ಚಿತ್ರರಂಗಕ್ಕೆ ಅಧಿಕೃತವಾಗಿಯೇ ಕಾಲಿಡುತ್ತಿದ್ದಾರೆ.
ಹೌದು ಜಿಮ್ಮಿ ಸಿನಿಮಾದಲ್ಲಿ ಬಿಡುಗಡೆ ಆಗಿರುವಂತಹ ಟೀಸರ್ ನಲ್ಲಿ ಹಾಡಿರುವ ಹಾಡು ಕಿಚ್ಚ ಸುದೀಪ್ ರವರ ಮಗಳಾಗಿರುವ ಸಾನ್ವಿ ಸುದೀಪ್ ರವರ ಕಂಠದಿಂದ ಹೊರಬಂದದ್ದು. ಹೀಗಾಗಿ ಈ ಮೂಲಕ ಸಾನ್ವಿ ಸುದೀಪ್(Sanvi Sudeep) ರವರು ಕೂಡ ಚಿತ್ರರಂಗಕ್ಕೆ ಗಾಯಕಿಯಾಗಿ ಅಧಿಕೃತವಾಗಿ ಕಾಲಿಡುತ್ತಿದ್ದಾರೆ.