Sanvi Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಯಾವುದೇ ಕ್ಷೇತ್ರಕ್ಕೆ ಹೋದರು ಕೂಡ ಅದರಲ್ಲಿ ಅದ್ವಿತೀಯ ಯಶಸ್ಸನ್ನು ಸಾಧಿಸುವಂತಹ ಚಾಣಾಕ್ಷತೆಯನ್ನು ಹೊಂದಿದ್ದಾರೆ. ಅಷ್ಟರ ಮಟ್ಟಿಗೆ ಅವರು ಪ್ರತಿಭಾನ್ವಿತರಾಗಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾಯಕ ನಟ ನಿರ್ದೇಶಕ ನಿರ್ಮಾಪಕ ಗಾಯಕ ನಿರೂಪಕ ಯಾವುದೇ ಜವಾಬ್ದಾರಿಯನ್ನು ನೀಡಿದರು ಕೂಡ ಕಿಚ್ಚ ಸುದೀಪ್(Kiccha Sudeep) ಪರಿಪೂರ್ಣ ಜವಾಬ್ದಾರಿಯಿಂದ ಪರಿಪಕ್ವವಾಗಿ ನಿಭಾಯಿಸುತ್ತಾರೆ.
ಇನ್ನು ಕ್ರಿಕೆಟರ್ ಆಗಿ ಕೂಡ ಈಗಾಗಲೇ ಕರ್ನಾಟಕ ಬುಲ್ಡೋ ಜರ್ಸ್ ತಂಡವನ್ನು ಸಿಸಿಎಲ್(CCL) ನಲ್ಲಿ ಯಾವ ರೀತಿಯಲ್ಲಿ ಸಾಕಷ್ಟು ಬಾರಿ ಗೆಲುವಿನ ದಡಕ್ಕೆ ಸಾಗಿಸಿದ್ದಾರೆ ಎಂಬುದನ್ನು ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಕನ್ನಡ ಚಿತ್ರರಂಗದ ನಿಜವಾದ ಕ್ಯಾಪ್ಟನ್ ಎಂದರು ಕೂಡ ತಪ್ಪಾಗಲಾರದು.
ಇನ್ನು ಈಗ ಅವರ ಅಳಿಯ ಸಂಚಿತ್ ಸಂಜೀವ್(Sanchith Sanjeev) ಕೂಡ ಕನ್ನಡ ಚಿತ್ರರಂಗಕ್ಕೆ ನಾಯಕ ನಟ ಹಾಗೂ ನಿರ್ದೇಶಕನಾಗಿ ಆಲ್-ರೌಂಡರ್ ಆಗಿ ಮೊದಲ ಸಿನಿಮಾದಲ್ಲಿಯೇ ಪರಿಚಿತರಾಗುತ್ತಿದ್ದಾರೆ. ಕಿಚ್ಚ ಸುದೀಪ್ ರವರ ಮಗಳಾಗಿರುವಂತಹ ಸಾನ್ವಿ ಕೂಡ ಯಾವುದೇ ರೀತಿಯಲ್ಲಿ ಕೂಡ ಪ್ರತಿಭೆ ವಿಚಾರಕ್ಕೆ ಬಂದರೆ ಕಡಿಮೆ ಇಲ್ಲ.
ಸಾನ್ವಿ ಸುದೀಪ್ ರವರು ಈಗಾಗಲೇ ಜಿಮ್ಮಿ ಸಿನಿಮಾದಲ್ಲಿ ಹಾಡುವ ಮೂಲಕ ತಮ್ಮ ಕಂಠಸಿರಿಯಾ ಸೌಂದರ್ಯವನ್ನು ಎಲ್ಲರಿಗೂ ಕೂಡ ಸಾಬೀತುಪಡಿಸಿ ತೋರಿಸಿದ್ದು ಮಾತ್ರವಲ್ಲದೆ ಈಗ ಅವರು ಬಿಡಿಸಿರುವಂತಹ ಲೇಟೆಸ್ಟ್ ಡ್ರಾಯಿಂಗ್ ಕೂಡ ಅವರೊಬ್ಬ ಆರ್ಟಿಸ್ಟ್ ಎನ್ನುವುದನ್ನು ಕೂಡ ಸಾಬೀತಪಡಿಸುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.