Sanvi Sudeep: ಅತ್ತೆ ಮಗನ ಸಿನಿಮಾ ಮುಹೂರ್ತಕ್ಕೆ ಸೀರೆ ಉಟ್ಟುಕೊಂಡು ಬಂದ ಕಿಚ್ಚ ಸುದೀಪ್ ಮಗಳು ಸಾನ್ವಿ!

ಸ್ನೇಹಿತರೆ, ಚಿಕ್ಕಂದಿನಿಂದಲೂ ನಟನೆಯ ಮೇಲೆ ಬಹಳನೇ ಆಸಕ್ತಿ ಇದ್ದ ಕಾರಣ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudéep) ಅವರು ವಿದ್ಯಾಭ್ಯಾಸ ಮುಗಿದ ನಂತರ ಸಿನಿ ಬದುಕಿಗೆ ಎಂಟ್ರಿಕೊಟ್ಟು ಇಂದು ಕನ್ನಡದ ಬಹು ಬೇಡಿಕೆಯ ನಟರಾಗಿ ಹೊರಹೊಮ್ಮಿದ್ದಾರೆ. ಸ್ಪರ್ಶ (Sparsha) ಸಿನಿಮಾದಿಂದ ಹಿಡಿದು ಇಂದಿನ ವಿಕ್ರಂತ್ ರೋಣ(Vikranth Rona) ಚಿತ್ರದವರಿಗೂ ತಮ್ಮ ಕ್ರೇಜನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತ ಸಂಖ್ಯಾತ ಅಭಿಮಾನಿ ಬಳಗವನ್ನು ಗಳಿಸಿಕೊಂಡಿರುವಂತಹ ಕಿಚ್ಚ ಇತರೆ ಕಲಾವಿದರಿಗೂ ಒಳ್ಳೆಯದನ್ನೇ ಆಶಿಸುತ್ತಿರುತ್ತಾರೆ.

ಇನ್ನು ಅದೆಷ್ಟೋ ಪೋಷಕ ನಟರಿಗೆ, ತೆರೆ ಹಿಂದಿನ ಕಲಾವಿದರಿಗೆ ತಮ್ಮ ಸಿನಿಮಾದಲ್ಲಿ ಅವಕಾಶಗಳನ್ನು ಕಲ್ಪಿಸಿಕೊಡುತ್ತಾರೆ. ಹೀಗಿರುವಾಗ ಕಿಚ್ಚ ಸುದೀಪ್ ಅವರ ಸೋದರಳಿಯ ಪ್ರಪ್ರಥಮ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಜಿಮ್ಮಿ ಸಿನಿಮಾಗೂ ಪ್ರೋತ್ಸಾಹಿಸುತ್ತಿದ್ದು, ಈ ಸಿನಿಮಾದ ಮುಹೂರ್ತದ ಕಾರ್ಯಕ್ರಮಕ್ಕೆ ಕಿಚ್ಚನ ಮಗಳು ಸಾನ್ವಿ (Sanvi) ಸೀರೆಯುಟ್ಟು ಬಹಳ ಮುದ್ದಾಗಿ ದೇವಸ್ಥಾನಕ್ಕೆ ಧಾವಿಸಿದ್ದಾರೆ.

ಈ ಸಿನಿಮಾದ ಮುಹೂರ್ತದ ಕಾರ್ಯಕ್ರಮವನ್ನು ಬೆಂಗಳೂರಿನ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿಸಲಾಗಿದ್ದು, ದೇವಿಯ ಅನುಗ್ರಹದಿಂದ ಸಿನಿಮಾಗೆ ಒಳ್ಳೆಯದಾಗಲಿ ಎಂದು ಚಿತ್ರ ತಂಡದವರು ಪ್ರಾರ್ಥಿಸಿದ್ದಾರೆ. ಇದಲ್ಲದೆ ಪ್ರಪ್ರಥಮ ಬಾರಿಗೆ ಸಾನ್ವಿ ಸುದೀಪ್ ಅವರು ಕೂಡ ಸಿನಿಮಾದಲ್ಲಿ ಗಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಿನಿಮಾದ ಟೈಟಲ್ ಲಾಂಚ್ ವೇದಿಕೆಯ ಮೇಲೆ “ಅಪ್ಪನಿಗೆ ತುಂಬಾ ಒಳ್ಳೆಯ ಜಡ್ಜ್ ಮೆಂಟ್ ಸೆನ್ಸಿದೆ ಹೀಗಾಗಿ ಅವರಿಗೆ ಮೊದಲ ಸಲ ಹಾಡು ಕೇಳಿಸುವಾಗ ತುಂಬಾ ಆತಂಕ ಇತ್ತು.

ನಮ್ಮ ಮನೆಯ ಟೆರಸ್ನಲ್ಲಿ ಎಲ್ಲರೂ ಸೇರಿದರು, ಅಪ್ಪನಿಗೆ ಹಾಡು ಇಷ್ಟವಾಗಲಿ ಎಂದು ಮನಸ್ಸಿನಲ್ಲಿಯೇ ಬೇಡಿಕೊಂಡೆ ವಿಡಿಯೋ ಮತ್ತು ಹಾಡು ಪ್ಲೇ ಆಯ್ತು. ಅದು ಮುಗಿದಾಗ ಅಪ್ಪ ನನ್ನನ್ನು ತಬ್ಬಿಕೊಂಡರು. ಅದು ಅತ್ಯಂತ ಖುಷಿಕ್ಷಣ ಆದರೆ ಅವತ್ತು ಅವರು ಏನು ಹೇಳಲಿಲ್ಲ. ಆದರೂ ಸಹ ನನಗದು ಬೆಸ್ಟ್ ಮೊಮೆಂಟ್(Best moment) ಆಗಿತ್ತು, ಆದರೆ ಇಂದು ಅವರು ಇಷ್ಟು ಜನರ ಮಧ್ಯೆ ನನ್ನ ಕುರಿತು ಮಾತನಾಡಿದರು.

ಇದು ನನಗೆ ಬಹಳ ಖುಷಿ ಕೊಟ್ಟಂತಹ ವಿಚಾರವಾಗಿರುತ್ತದೆ ಎನ್ನುವ ಮೂಲಕ ತಮ್ಮ ಹೊಸ ಪ್ರಯತ್ನಕ್ಕೆ ಅಪ್ಪನ ಪ್ರೋತ್ಸಾಹ ಸಿಕ್ಕಿದೆ ಎಂದು ಖುಷಿ ಪಟ್ಟರು. ಹೀಗೆ ಕಿಚ್ಚ ಸುದೀಪ್ ಅವರು ತಮ್ಮ ಮುಂದಿನ ಪೀಳಿಗೆಗೆ ಪ್ರೋತ್ಸಾಹಿಸುವುದರ ಜೊತೆಗೆ ಜಿಮ್ಮಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ (Guest appearance) ಕಾಣಿಸಿಕೊಳ್ಳಬಹುದು ನಿರೀಕ್ಷೆಯನ್ನು ಮೂಡಿಸಿದ್ದಾರೆ.  ಇದನ್ನೂ ನೋಡಿ ನಟ ದರ್ಶನ್ ಜೊತೆ ಇರುವ ಈ ಮುದ್ದಾದ ಮಗು ಯಾರದ್ದು ಎಂದು ಗೆಸ್ ಮಾಡಿ ನೋಡಣ

Leave a Comment