Sanju Basayya In Zee Kannada Function: ಸ್ನೇಹಿತರೆ ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಜು ಬಸಯ್ಯ(Sanju Basayya) ಹಾಗೂ ಪಲ್ಲವಿ ಬಳ್ಳಾರಿಯವರ (Pallavi Ballari) ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಪ್ರೀತಿಸಿ ಮದುವೆಯಾದರು ಕೂಡ ಜನರು ಇವರ ಜೋಡಿ ಕುರಿತು ಆಡಿದಂತಹ ಅಸಭ್ಯವಾದ ಮಾತಿಗೆ, ನಕಾರಾತ್ಮಕ ಕಮೆಂಟ್ಗಳಿಗೆ ಸಂಜು ಬಸಯ್ಯ ರವರ ಹೃದಯ ಮರುಗಿತ್ತಂತೆ. ಇದನ್ನು ಜೋಡಿ ನಂಬರ್ ವನ್ (Jodi no 1) ವೇದಿಕೆ ಮೇಲೆ ಹೇಳಿಕೊಂಡು ಗೋಳಾಡಿದ ಸಂಜು ಬಸಯ್ಯ ಕಣ್ಣೀರು ಹಾಕಿದರು.
ಯಾವ ವಿಚಾರ ಸಂಜು ಬಸಯ್ಯ(Sanju Basayya) ಅವರ ಮನಸ್ಸನ್ನು ಅತಿವಾಗಿ ಕಾಡಿತ್ತು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಸಂಜು ಬಸಯ್ಯ ಅವರನ್ನು ಪಲ್ಲವಿ ಬಳ್ಳಾರಿ ಪ್ರೀತಿ ಮಾಡಲು ಶುರು ಮಾಡಿದಾಗ ಸ್ವತಃ ಸಂಜು ಅವರೇ ಆಕೆಯ ಪ್ರೀತಿಯನ್ನು ಬೇಡ ಎಂದು ತಿರಸ್ಕಾರ ಮಾಡಿದ್ದಂತೆ.
ಇದಕ್ಕೆ ಮುಖ್ಯ ಕಾರಣ ಅವರ ಬಾಹ್ಯ ರೂಪ, ಜನ ಅಸಭ್ಯವಾಗಿ ಮಾತನಾಡುತ್ತಾರೆ ಅಲ್ಲದೆ ನಿನ್ನ ಜೀವನಕ್ಕೂ ತೊಂದರೆಯಾಗುತ್ತದೆ ಎಂಬ ಕಾರಣ ನೀಡಿ ಸಂಜು ಬಸಯ್ಯ ಆಕೆಯ ಪ್ರೀತಿಯನ್ನು ತೊರೆದಿದ್ದರಂತೆ. ಆದರೆ ಮೂರು ದಿನಗಳ ಕಾಲ ಲವ್ ಬ್ರೇಕ್ ಅಪ್ನಿಂದ ನೋವನ್ನು ಅನುಭವಿಸಿದ ಪಲ್ಲವಿ ಮತ್ತೆ ನೀನೆ ಬೇಕು ಎಂದು ಅವರನ್ನು ಸೇರುತ್ತಾರೆ. ಅನಂತರ ಮನೆಯವರೆಲ್ಲರ ಒಪ್ಪಿಗೆ ಪಡೆದು ಮದುವೆಯಾದ ಈ ಜೋಡಿಗಳಿಗೆ ಜನರ ಮಾತುಗಳು ಚುಚ್ಚಿದವು.
ಹೌದು ಸಂಜು ಹೈಟ್ ನಿನ್ನ ಹೈಟ್ ಎಲ್ಲಾದರೂ ಹೋಲಿಕೆ ಇದೆಯಾ ನಿಮ್ಮಿಬ್ಬರದು ಒಂದು ಜೋಡಿನಾ? ಇವಳು ಅವನನ್ನು ದುಡ್ಡಿಗೋಸ್ಕರ ಮದುವೆಯಾಗಿದ್ದಾಳೆ? ನಾನೇ ನಿನ್ನ ಹೈಟ್ಗೆ ತಕ್ಕ ಹುಡುಗ ನನ್ನ ಜೊತೆ ಬಂದು ಬಿಡು ಎಂದಲ್ಲ ಕಮೆಂಟ್ ಮೂಲಕ ಇವರಿಬ್ಬರನ್ನು ಆಡಿಕೊಂಡಿದ್ದರಂತೆ. ಇದರಿಂದ ಅದೆಷ್ಟೋ ಬಾರಿ ಸಂಜು ಬಸಯ್ಯ(Sanju Basayya) ಕಣ್ಣೀರು ಹಾಕಿದಾಗಲೆಲ್ಲ ಪತ್ನಿ ಪಲ್ಲವಿ(Pahlavi) ಅವರು ಬೆನ್ನ ಹಿಂದೆ ನಿಂತು ಇದೆಲ್ಲವನ್ನು ಎದುರಿಸಬೇಕೆಂಬ ಧೈರ್ಯ ತುಂಬಿದರಂತೆ.