Sanju Basayya: ಮದುವೆಯಾಗಿ ಕೆಲವೇ ದಿನಗಳಲ್ಲಿ ಅಪ್ಪು ಹಾಗೂ ರಾಜಕುಮಾರ್ ಸ್ಮಾರಕಕ್ಕೆ ಭೇಟಿ ಕೊಟ್ಟ ಸಂಜು ಬಸಯ್ಯ ದಂಪತಿ

Sanju Basayya: ಸ್ನೇಹಿತರೆ, ಒಂದಲ್ಲ ಒಂದು ವಿಚಾರದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಸಂಜು ಬಸಯ್ಯ (Sanju Basayya) ಮತ್ತು ಪಲ್ಲವಿ ಬಳ್ಳಾರಿಯವರು(Pallavi Ballari) ತಮ್ಮ ಎಂಗೇಜ್ಮೆಂಟ್ ದಿನದಿಂದ ಹಿಡಿದು ಇಂದಿನವರೆಗೂ ಒಂದಲ್ಲ ಒಂದು ಭಿನ್ನ ವಿಭಿನ್ನವಾದ ಪೋಸ್ಟ್ ಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಲೇ ಇರುತ್ತಾರೆ.

ಹೀಗೆ ಇಷ್ಟು ದಿನಗಳ ಕಾಲ ತಮ್ಮ ಮದುವೆ ಫೋಟೋಗಳಿಂದಾಗಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಂತಹ ಸಂಜು ಬಸಯ್ಯ ಇದೀಗ ನಮ್ಮ ಹೆಂಡತಿಯೊಂದಿಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಅಣ್ಣವ್ರ ಹಾಗೂ ಪುನೀತ್ ರಾಜಕುಮಾರ್ ಅವರ ಪುಣ್ಯ ಭೂಮಿಯ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಸದ್ಯ ಈ ಫೋಟೋಗಳೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ನವ ದಂಪತಿಗಳನ್ನು ಇಂತಹ ಅಪರೂಪದ ಸ್ಥಳಗಳಲ್ಲಿ ಕಂಡಂತಹ ನೆಟ್ಟಿಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹೌದು ಗೆಳೆಯರೇ ಬೆಂಗಳೂರಿನಲ್ಲಿರುವಂತಹ ಕಂಠೀರವ ಸ್ಟುಡಿಯೋ ಕನ್ನಡ ಚಿತ್ರರಂಗದ ಪ್ರಮುಖ ಹೆಗ್ಗುರಿತಾಗಿ ಪರಿಗಣಿಸಲಾಗಿದ್ದು, ಡಾಕ್ಟರ್ ರಾಜಕುಮಾರ್(Rajkumar) ಅವರು 12 ಏಪ್ರಿಲ್ 2006ರಂದು ತಮ್ಮ ಸದಾಶಿವನಗರದ ನಿವಾಸದಲ್ಲಿ ನಿಧನರಾದ ನಂತರ ಅವರ ಪಾರ್ಥೀವ ಶರೀರವನ್ನು ಕಂಠೀರವ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿ 13 ಏಪ್ರಿಲ್ 20೦6ರಂದು ಅಂತ್ಯಕ್ರಿಯೆ ಮಾಡಲಾಯಿತು.

ಅನಂತರ ಕನ್ನಡಿಗರ ಮನೆಮಗ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ಅಂತ್ಯಕ್ರಿಯೆಯನ್ನು ಇದೇ ಪುಣ್ಯಭೂಮಿಯಲ್ಲಿ ಮಾಡಲಾಗಿದ್ದು, ಇಂದು ಅದೆಷ್ಟೋ ಅಭಿಮಾನಿಗಳಿಗೆ ಅದು ದೇವಸ್ಥಾನದಂತೆ ಮಾರ್ಪಟ್ಟಿದೆ ಈ ಒಂದು ಸ್ಥಳಕ್ಕೆ ತಮ್ಮ ಪತ್ನಿಯೊಂದಿಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ(Sanju Basayya) ಭೇಟಿ ನೀಡಿ ಅಣ್ಣಾವ್ರು ಹಾಗೂ ಅಪ್ಪು ಸಮಾಧಿಗೆ ನಮಸ್ಕರಿಸಿ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ Pranitha Subhash: ಮುದ್ದು ಮಗಳೊಂದಿಗೆ ಸಾಂಪ್ರದಾಯಿಕ ಹುಡುಗಿಯಲ್ಲಿ ಕಾಣಿಸಿಕೊಂಡ ಪ್ರಣಿತ ಶುಭಾಷ್! ಇಲ್ಲಿವೆ ಫೋಟೋಸ್

Leave a Comment