Sanju basayya: ಕೊನೆಗೂ ಬಹುಕಾಲ ಪ್ರೀತಿಸಿದ ಹುಡುಗಿಯನ್ನೇ ಮದುವೆಯಾದ ಸಂಜು ಬಸಯ್ಯ!

Sanju Basayya Marriage: ಸ್ನೇಹಿತರೆ, ತಮ್ಮ ಅದ್ಭುತ ಹಾಸ್ಯ ಪ್ರತಿಭೆಯ ಮೂಲಕ ಹಲವಾರು ವರ್ಷಗಳಿಂದ ಕನ್ನಡದ ಕಿರುತೆರೆ ಹಾಗೂ ಹಿರಿದರೆ ಲೋಕದಲ್ಲಿ ಕಮಾಲ್ ಮಾಡುತ್ತಿರುವ ನಟ ಸಂಜು ಬಸಯ್ಯ ನಟನೆಗೆ ಬಾಹ್ಯರೂಪ ಆಕಾರ ಮುಖ್ಯವಲ್ಲ. ಅದ್ಭುತವಾದ ಪ್ರತಿಭೆ ಒಂದಿದ್ದರೆ ಸಾಕು ಅವಕಾಶಗಳು ನಮ್ಮನೆ ಹಾರಿಸಿಕೊಂಡು ಬರುತ್ತದೆ ಎಂಬುದನ್ನು ತೋರಿಸಿಕೊಟ್ಟಂತಹ ನಟ. ಈ ಹಿಂದೆ ಜೀ ಕನ್ನಡ ವಾಹಿನಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು (Comedy kiladigalu) ಎಂಬ ಹಾಸ್ಯ ಕಾರ್ಯಕ್ರಮದ ಕಾರ್ಯಕ್ರಮದ ಮೂಲಕ

ಕನ್ನಡಿಗರಿಗೆ ಪರಿಚಯಗೊಂಡಂತಹ ಸಂಜು ಬಸಯ್ಯನವರು(Sanju Bassayya) ಮೂಲತಃ ಬೆಳಗಾವಿ ಜಿಲ್ಲೆಯವರು. ಚಿಕ್ಕಂದಿನಿಂದಲೂ ನಟನೆಯ ಮೇಲೆ ಬಹಳ ಶಕ್ತಿ ಹೊಂದಿದ್ದಂತಹ ಇವರು ಸಾಕಷ್ಟು ನಾಟಕ ಹಾಗೂ ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಇನ್ನು ಕೊರೋನ ಸಮಯದಲ್ಲಿ ಶುರುವಾದ ಟಿಕ್ ಟಾಕ್ ಹಾಗು ರೀಲ್ಸ್ ಮಾಡುತ್ತಾ ಹಳೆಯ ಹಾಡುಗಳಿಗೆ ಲಿಪ್ಸಿಂಕ್ ಮಾಡಿ ತಮ್ಮದೇ ದಾಟಿಯಲ್ಲಿ ಅಭಿನಯಿಸುತ್ತಾ ಸೋಶಿಯಲ್ ಮೀಡಿಯಾಗಳಲ್ಲಿ ಗುರುತಿಸಿಕೊಂಡರು.

ಹೀಗೆ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ನಂತಹ ಪ್ಲಾಟ್ಫಾರ್ಮ್ಗಳನ್ನು ಬಳಸಿಕೊಂಡು ಜೀ ಕನ್ನಡ ವಾಹಿನಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಎಂಬ ಹಾಸ್ಯ ರಿಯಾಲಿಟಿ ಶೋದ ಸ್ಪರ್ಧಿಯಾಗಿ ಪ್ರವೇಶ ಮಾಡಿದ ಈ ನಟ ವಿಶೇಷ ಸ್ಥಾನದಲ್ಲಿ ನಿಂತು ಕನ್ನಡಿಗರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ರಂಗಭೂಮಿ ಲೋಕದಲ್ಲಿ ಗುರುತಿಸಿಕೊಂಡಿರುವ ಪಲ್ಲವಿ ಬಳ್ಳಾರಿ (Pallavi Ballari) ಎಂಬುವವರ ಪರಿಚಯ ಕಾಲ ಕ್ರಮೇಣ ಸ್ನೇಹದಿಂದ ಪ್ರೀತಿಗೆ ಜಾರಿ

ಇಬ್ಬರು ಬರೋಬ್ಬರಿ 8 ವರ್ಷಗಳ ಕಾಲ ಪ್ರೀತಿಸಿ ಮನೆಯವರೆಲ್ಲ ಒಪ್ಪಿಗೆ ದೊರಕುವವರೆಗೂ ಕಾದು ರಿಜಿಸ್ಟರ್ ಮ್ಯಾರೇಜ್(Register marriage) ಮಾಡಿಕೊಂಡು ಇತ್ತೀಚಿಗಷ್ಟೇ ಅದ್ದೂರಿಯಾಗಿ ಅರಿಶಿಣ ಶಾಸ್ತ್ರ ಹಾಗೂ ಆರತಕ್ಷತೆ ಕಾರ್ಯಕ್ರಮಗಳನ್ನು ನೆರವೇರಿಸಿದ್ದಾರೆ. ಈ ನವ ಜೋಡಿಗಳ ಮದುವೆ ಫೋಟೋಸ್(Marriage photos) ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಇದನ್ನು ಕಂಡಂತಹ ನೆಟ್ಟಿಗಳು ಕಮೆಂಟ್ ಮೂಲಕ ಶುಭ ಹಾರೈಸಿದ್ದಾರೆ. ಇದನ್ನೂ ಓದಿ Sanju Basayya: ಹೆಂಡತಿಯೊಂದಿಗೆ ಅದ್ದೂರಿಯಾಗಿ ಬರ್ತಡೆ ಆಚರಿಸಿಕೊಂಡ ಸಂಜು ಬಸಯ್ಯ!

Leave a Comment