Sanjay Dutt: KGF ಅಧಿರ ಸಂಜಯ್ ದತ್ ಮನೆಯಲ್ಲಿ ಶಿವರಾಧನೆ!

Sanjay Dutt Home in Lord shiva worship: ಸ್ನೇಹಿತರೆ ಆಷಾಢ ಕಳೆದು ಶ್ರಾವಣ ಮಾಸ ಶುರುವಾಗುತ್ತಾ ಇದ್ದ ಹಾಗೆ ಪ್ರತಿಯೊಬ್ಬರು ತಮ್ಮ ಶ್ರೇಯಸ್ಸಿಗಾಗಿ ಮನೆಯಲ್ಲಿ ವಿಶೇಷವಾದ ಪೂಜಾ ಕೈಂಕಾರ್ಯಗಳನ್ನು ಪ್ರಾರಂಭಿಸಿರುತ್ತಾರೆ. ಸದ್ಯ ಕೆಜಿಎಫ್ನ ಅದೀರ ಕೂಡ ಆಧ್ಯಾತ್ಮಿಕ ಚಿಂತನೆ ಒಳಗೆ ಮುಳುಗಿದ್ದು, ಕಳೆದ ಕೆಲ ದಿನಗಳಿಂದ ಸಾಕಷ್ಟು ಗುಡಿ ಗೋಪುರಗಳು, ದೇವಸ್ಥಾನಗಳಿಗೆ ಭೇಟಿ ನೀಡುತ್ತಾ, ದೈವಿಕ ಆಲೋಚನೆಗಳನ್ನು ಹೆಚ್ಚಾಗಿ ಮಾಡುತ್ತಿದ್ದಾರೆ.

ಅದರಂತೆ ಈಗ ಮನೆಯಲ್ಲಿ ಶಿವರಾದನೆ ಮಾಡುತ್ತಿರುವ ಕೆಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು ಇದನ್ನು ಕಂಡಂತಹ ನೆಟ್ಟಿಗರು ಹರಹರ ಮಹಾದೇವ್ ಎನ್ನುವ ಮೂಲಕ ಸಂಜಯ್ ದತ್(Sanjay Dutt) ಅವರ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಹೌದು ಸ್ನೇಹಿತರೆ ಕಳೆದ ಕೆಲ ದಿನಗಳ ಹಿಂದೆ ತಮ್ಮ 64ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಅಭಿಮಾನಿಗಳ ಹಾಗೂ ಕುಟುಂಬಸ್ಥರ ಜೊತೆಗೆ ಆಚರಿಸಿಕೊಂಡ ಸಂಜಯ್

ದತ್ ಸೋಮವಾರ ಅಂದರೆ ಜುಲೈ 31ನೇ ತಾರೀಕು ಮುಂಬೈನಲ್ಲಿರುವ ಮನೆಯಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದರ ಜೊತೆಗೆ ಆರತಿ ಬೆಳಗಿ ಪೂಜಾ ಕೈಂಕಾರ್ಯಗಳನ್ನು ಬಹಳ ಶಿಸ್ತು ಬದ್ಧಾಗಿ ಮಾಡಿದ್ದಾರೆ. ಅದರಲ್ಲೂ ಬಿಳಿ ಬಣ್ಣದ ಕುರ್ತಾ ಪೈಜಾಮ ಧರಿಸಿ ನೆಲದ ಮೇಲೆ ಕುಳಿತು ಅರ್ಚಕರು ಹೇಳಿಕೊಡುತ್ತಿರುವಂತಹ ಮಂತ್ರಗಳನ್ನೆಲ್ಲ ಉಚ್ಛರಿಸುತ್ತಾ ಸಂಜಯ್ ದತ್ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ಫೋಟೋ ಇದಾಗಿದೆ.

ಇದನ್ನು ತಮ್ಮ ಇನ್ಸ್ಟಾಗ್ರಾಮ್(Instagram) ಹಾಗೂ ಫೇಸ್ಬುಕ್(Facebook) ಖಾತೆಯಲ್ಲಿ ಹಂಚಿಕೊಂಡಿರುವ ಸಂಜಯ್ ದತ್(Sanjay Dutt) ಇಂದು ಅದ್ಭುತವಾದ ಶಿವ ಪೂಜೆಯನ್ನು ಮಾಡಿದೆ ಎಂದು ಕ್ಯಾಪ್ಷನ್ ಬರೆದು ಪೂಜ್ಯರಾದ ಶ್ರೀ ಉದಯಚಾರ್ಯರವರಿಗೆ(@sriudayacharya) ಧನ್ಯವಾದಗಳು ತಿಳಿಸಿ ಹರಹರ ಮಹಾದೇವ್ ಎಂದು ಬರೆದುಕೊಂಡಿದ್ದಾರೆ.

ಓರ್ವ ಸ್ಟಾರ್ ಸೆಲೆಬ್ರಿಟಿ ಆದರೂ ಬಹಳಾನೇ ಸರಳವಾಗಿ ನೆಲದ ಮೇಲೆ ಕುಳಿತು ಶಿವ(lord Shiva) ಪೂಜೆಯಲ್ಲಿ ಮಗ್ನರಾಗಿರುವ ಸಂಜಯ್ ದತ್ತವರನ್ನು ಕಂಡಂತಹ ಅಭಿಮಾನಿಗಳು ಮನಸೋತು ಹೋಗಿದ್ದಾರೆ. ಇನ್ನೂ ಕೆಲ ಅಭಿಮಾನಿಗಳು ಸಂಜಯ್ ದತ್ ಅವರಿಗೆ ಪರಮೇಶ್ವರನ ಮೇಲಿರುವ ಪ್ರೀತಿ ಕಂಡು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನೂ ಓದಿ: Puneeth Rajkumar: ಬೆಟ್ಟದಷ್ಟು ಪ್ರೀತಿ ತೋರುವ ಸೋದರ ಅತ್ತೆಯೊಂದಿಗೆ ಪುನೀತ್ ರಾಜಕುಮಾರ್ ಅವರ ಅಪರೂಪದ ಫೋಟೋ!

Leave a Comment