Sanjana Galrani: ಮುದ್ದು ಮಗನ ಜೊತೆ ಸೀರೆಯಲ್ಲಿ ಫೋಟೋಗೆ ಫೋಸ್ ನೀಡಿದ ಗಂಡ ಹೆಂಡ್ತಿ ಖ್ಯಾತಿಯ ಸಂಜನಾ

ಸ್ನೇಹಿತರೆ ಸಿನಿಮಗಳಿಗಿಂತ ಹೆಚ್ಚಾಗಿ ವಿವಾದಗಳ ಮೂಲಕ ಸದ್ದು ಮಾಡಿ ಪ್ರಖ್ಯಾತಿ ಪಡೆದ ನಟಿ ಸಂಜನಾ ಗಲ್ರಾನಿ(Sanjana Galrani) ಯವರು 2005ರಲ್ಲಿ ತೆಲುಗು ಸಿನಿಮಾ ಒಂದರ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಆನಂತರ 2006ಲ್ಲಿ ತೆರೆಗೆ ಬಂದಾಗ ಗಂಡ ಹೆಂಡತಿ(Ganda Hendathi) ಸಿನಿಮಾ ಸಂಜನಾ ಅವರ ಬಣ್ಣದ ಬದುಕಿಗೆ ಮಹತ್ತರವಾದ ಮೈಲುಗಲ್ಲನ್ನು ಹಾಕಿಕೊಡುತ್ತದೆ.

ಹೌದು ಗೆಳೆಯರೇ ಈ ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದ ಯಶಸ್ಸನ್ನು ಪಡೆದಂತಹ ನಟಿ ಸಂಜನಾ ಗಲ್ರಾನಿ(Sanjana Galrani) ಅನಂತರ ಕನ್ನಡ ತೆಲುಗು ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಅದೊಂದು ಕಾಲದಲ್ಲಿ ತಮ್ಮದೇ ಆದ ವಿಶೇಷ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಂತಹ ನಟಿ. ಹೀಗೆ ಸಿನಿಮಾ ರಂಗದ ಉತ್ತುಂಗದ ಶಿಖರದಲ್ಲಿ ಇರುವಾಗಲೇ ವಿವಾದಗಳ ಮೂಲಕ ಹೆಚ್ಚು ಸದ್ದು ಮಾಡಿದಂತಹ ಸಂಜನಾ ಅವರು ಯಾರಿಗೂ ಹೇಳಿದ

ಹಾಗೆ ರಹಸ್ಯವಾಗಿ ಬೆಂಗಳೂರು ಮೂಲದ ನಾಳೀನ ಶಾಸ್ತ್ರಚಿಕಿತ್ಸಕ ಅಜೀಜ್ ಪಾಷಾ ಎಂಬ ಮುಸ್ಲಿಂ ಮೂಲದ ವ್ಯಕ್ತಿಯನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ ಒಂದು ಮುದ್ದಾದ ಗಂಡು ಮಗುವಿದ್ದು, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಗನ ಫೋಟೋ ಹಾಗು ವಿಡಿಯೋಗಳನ್ನೆಲ್ಲ ಹಂಚಿಕೊಳ್ಳುತ್ತಾ ಸಂಜನಾ ಗಲ್ರಾನಿ(Sanjana Galrani), ಸಂತಸ ವ್ಯಕ್ತಪಡಿಸುತ್ತಿರುತ್ತಾರೆ.

ಹೀಗಿರುವಾಗ ಹಸಿರು ಬಣ್ಣದ ಸೀರೆಯನ್ನು ಉಟ್ಟು ಮಗನಿಗೂ ಟ್ರೆಡಿಷನಲ್ ಉಡುಗೆಯನ್ನು ತೊಡಿಸಿ ಫೋಟೋ ಶೂಟ್ ಮಾಡಿಸಿಕೊಂಡಿರುವ ಸುಂದರ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್( instagram) ಹಾಗೂ ಫೇಸ್ಬುಕ್ (Facebook) ಖಾತೆಯಲ್ಲಿ ಹಂಚಿಕೊಂಡ ಸಂತಸ ವ್ಯಕ್ತಪಡಿಸಿದ್ದಾರೆ. ಸಂಜನಾ ಗಲ್ರಾನಿ(Sanjana Galrani) ಯವರ ಮುದ್ದು ಮಗನನ್ನು ಕಂಡ ನೆಟ್ಟಿಗರು ‘ಕ್ಯೂಟ್’ ಎಂದು ಕಾಮೆಂಟ್ ಮಾಡುತ್ತಾ ನಮ್ಮ ಪ್ರೀತಿಯನ್ನು ತೋರ್ಪಡಿಸುತ್ತಿದ್ದಾರೆ.

Leave a Comment