ಗಲ್ರಾನಿ ಕುಟುಂಬದವರಿಗೆ ಈಗ ಡಬ್ಬಲ್ ಸಂತೋಷ. ಯಾಕಂದ್ರೆ ಗಲ್ರಾನಿ ಪಾಲಕರು ತಮ್ಮ ಇಬ್ಬರೂ ಮಕ್ಕಳಿಂದ ಸಂತೋಷದ ವಿಚಾರವನ್ನ ಪಡೆದಿದ್ದಾರೆ. ಹೌದು. ನಟಿ ಸಂಜನಾ ಗಲ್ರಾನಿ ಹಾಗೂ ನಟಿ ನಿಕ್ಕಿ ಗಲ್ರಾನಿ ಇಬ್ಬರೂ ಕೂಡ ಇದೀಗ ಖುಷಿಯಲ್ಲಿದ್ದಾರೆ. ಬಹಳ ಸಮಯದ ನಂತರ ಇಂತಹ ನಗು ಗಲ್ರಾನಿ ಮನೆಯಲ್ಲಿ ಮೂಡಿದೆ ಎನ್ನಬಹುದು.
ನಟಿ ಸಂಜನಾ ಗಲ್ರಾನಿ ತಾವು ಗರ್ಭಿಣಿ ಎನ್ನುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಾದ ಬಳಿಕ ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದು, ಸಂಜನಾ ತಮ್ಮ ಗರ್ಭಾವಸ್ಥೆಯನ್ನು ಎಂಜಾಯ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಸಂಜನಾ ತಾಯಿಯಾಗಿರುವ ಖುಷಿಯಲ್ಲಿದ್ದಾರೆ. ಹೌದು. ಸಂಜನಾ ಗಲ್ರಾನಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬೆಂಗಳೂರಿನಿಂದ ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ್ದ ಸಂಜನಾ ಅಲ್ಲಿಯೇ ಖಾನಗಿ ಆಸ್ಪತ್ರೆಯಲ್ಲಿ ಗಂಡು ಮಗುವನ್ನು ಪಡೆದಿದ್ದಾರೆ. ಈ ಕುರಿತು ಅವರನ್ನು ಹೆರಿಗೆ ಮಾಡಿಸಿದ ವೈದ್ಯೆ ಶಿಲ್ಪಾ ರೆಡ್ಡಿ ಗಂಡು ಮಗು ಎಂದು ಸಾಮಾಜಿಕ ಖಾತೆಯಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಸಂಜನಾ ಮಾತ್ರ ಈ ವಿಷ್ಯವನ್ನು ರಿವೀಲ್ ಮಾಡದೇ ಗಂಡೋ, ಹೆಣ್ಣೋ ನೀವೇ ಊಹಿಸಿ ಅಂತ ಅಭಿಮಾನಿಗಳ ಪಾಲಿಗೇ ಬಿಟ್ಟಿದ್ದರು.
ಇನ್ನು ಸಂಜನಾ ಅವರ ತಂಗಿ ನಿಕ್ಕಿ ಗಲ್ರಾನಿ ಕೂಡ ಖುಷಿಯಲ್ಲಿದ್ದಾರೆ. ಇವರು ತಾವು ಇಷ್ಟು ವರ್ಷಗಳ ಪ್ರೀತಿಸುತ್ತಿದ್ದ ಆದಿ ಪಿನಿಸೆಟ್ಟಿಯವರನ್ನು ಮದುವೆಯಾಗಿದ್ದಾರೆ. ನಿಕ್ಕಿ ಗಲ್ರಾನಿ ಬಹುಭಾಷಾ ತಾರೆ. ಸಂಜನಾ ಕನ್ನಡದಲ್ಲಿ ’ಗಂಡ ಹೆಂಡತಿ’ ಚಿತ್ರದ ಮೂಲಕ ಅಭಿನಯಕ್ಕೆ ಕಾಲಿಟ್ಟರು. ಅದಾದ ಬಳಿಕ ಬೇರೆ ಬೇರೆ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಆದರೆ ಸಂಜನಾ ಗಲ್ರಾನಿಯವರ ತಂಗಿ ನಟಿ ನಿಕ್ಕಿ ಗಲ್ರಾನಿ ತಮಿಳು, ತೆಲುಗು ಚಿತ್ರಗಳಲ್ಲಿಯೂ ನಟಿಸುತ್ತಿದ್ದು, ಚಿತ್ರೀಕರಣದ ಸಮಯದಲ್ಲಿಯೇ ನಟಿ ಆದಿಯನ್ನು ಭೇಟಿ ಮಾಡಿದ್ದು. ಕಳೆದ ಮಾರ್ಚ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಸದ್ಯದಲ್ಲಿಯೇ ಮದುವೆಯಾಗಲಿದ್ದೇವೆ ಎಂದು ಘೋಷಿಸಿತ್ತು. ಇದೀಗ ಚೆನ್ನೈ ನಲ್ಲಿ ಇವರಿಬ್ಬರ ವಿವಾಹ ಸಂಪನ್ನಗೊಂಡಿದೆ.
ನಟಿ ಸಂಜನಾ ಗಲ್ರಾನಿ ಗರ್ಭಿಣಿಯಾದಾಗಿನಿಂದಲೂ ಬಹಳ ಸೂಕ್ಷ್ಮವಾಗಿ ತಮ್ಮ ಗರ್ಭಾವಸ್ಥೆಯನ್ನು ನೋಡಿಕೊಂಡಿದ್ದಾರೆ. ಇಷ್ಟು ವರ್ಷ ಬೇರೆಯದೇ ಕಾರಣಕ್ಕೆ ಮಗು ಮಾಡಿಕೊಂಡಿರಲಿಲ್ಲ. ಆದರೆ ಈಗ ಮನೆಯವರೆಲ್ಲರೂ ಕೇಳುತ್ತಿದ್ದಾರೆ. ಇದು ಸರಿಯಾದ ಸಮಯ ಅದಕ್ಕಾಗಿ ಈ ನಿರ್ಧಾರ ಮಾಡಿದ್ಡೇನೆ ಎಂದಿದ್ದರು. ಜೊತೆಗೆ ಗರ್ಭಾವಸ್ಥೆಯಲ್ಲಿರುವಾಗ ತಾನು ವಾರದಲ್ಲಿ 3-4 ದಿನ ಬ್ಯುಸಿ ಇರುವುದಾಗಿಯೂ ಹೇಳಿದ್ದರು. ಈ ಸಮಯದಲ್ಲಿ ಹುಡುಗಿಯರು ಕೆಲಸ ಮಾಡುವುದನ್ನ ನೋಡಿದೇನೆ. ಹೀಗೆ ಆಕ್ಟಿವ್ ಆಗಿರುವವವ್ರೇ ನನಗೆ ಸ್ಪೂರ್ತಿ ಎಂದು ಇನ್ಸ್ಟಾ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದರು.
ಸಂಜನಾ ಗಲ್ರಾನಿಯವರ ಸೀಮಂತ ಶಾಸ್ತ್ರ ಹಿಂದೂ ಹಾಗೂ ಮುಸ್ಲಿಂ ಪದ್ದತಿಯ ಪ್ರಕಾರ ನೆರವೇರಿಸಲಾಗಿದೆ. ಪತಿ ಅಜೀಜ್ ಪಾಷಾ ಜೊತೆ ಸಾಕಷ್ಟು ಬೇಬಿ ಬಂಪ್ ಫೋಟೋಶೂಟ್ ಗಳನ್ನೂ ಮಾಡಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ತಾಯಿಯಾಗಿರುವ ನಟಿ ಸಂಜನಾ ಗಲ್ರಾನಿಯವರಿಗೆ ನೆಟ್ಟಿಗರು, ಸಂಬಂಧಿಕರು ವಿಶ್ ಮಾಡಿದ್ದಾರೆ.