ಸ್ಯಾಂಡಲ್ವುಡ್ ಬೆಡಗಿಯರ ಈ ಅಪರೂಪದ ಚಿತ್ರಕ್ಕೆ ಒಂದು ಮೆಚ್ಚುಗೆ ಇರಲಿ!

sandalwood stars ಸ್ನೇಹಿತರೆ, ಕನ್ನಡ ಸಿನಿಮಾ ರಂಗಕ್ಕೆ ಸಾಕಷ್ಟು ಸ್ಟಾರ್ ನಟಿಯರು ಪ್ರವೇಶ ಮಾಡಿ ತಮ್ಮ ಅಪ್ರತಿಮ ಅಭಿನಯದ ಚಾಪಿನಿಂದ ಸಾಲು ಸಾಲು ಚಿತ್ರಗಳಲ್ಲಿ ನಟಿಸುವಂತಹ ಅವಕಾಶ ಗಿಟ್ಟಿಸಿಕೊಂಡು ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನ ಸಂಪಾದಿಸಿಕೊಂಡಿದ್ದಾರೆ. ಹೀಗೆ ಎಷ್ಟೇ ಹೊಸ ನಟಿಯರು ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು ಕೂಡ ನಮ್ಮ ಹಳೆಯ ನಟಿಯರನ್ನು ಎಂದಿಗೂ ಚಿತ್ರ ಪ್ರೇಕ್ಷಕರು ಮರೆಯಲು ಸಾಧ್ಯವೇ ಇಲ್ಲ.

ಹೌದು ಗೆಳೆಯರೇ ತಮ್ಮ ಅಮೋಘ ಅಭಿನಯ ಮುಗ್ಧ ಸೌಂದರ್ಯದ ಮೂಲಕ ನಟನೆಯ ಪರ್ವವನ್ನೇ ಸೃಷ್ಟಿಮಾಡಿಕೊಂಡಂತಹ ಆಗಿನ ಸ್ಟಾರ್ ನಟಿಯರ ಪೈಕಿ ರಮ್ಯ, ತಾರಾ ಅನುರಾಧ ಹಾಗೂ ರಾಧಿಕಾ ಕುಮಾರಸ್ವಾಮಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. 1986ರಲ್ಲಿ ತುಳಸಿ ದಳ (Tulasidala) ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿದಂತಹ ತಾರಾ ಅನುರಾಧ (Tara Anuradha) ಇಂದಿಗೂ ಕೂಡ ಕೆಲ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ, ತಾಯಿಯಾಗಿ ಅಭಿನಯಿಸುತ್ತಾ ಅಭಿಮಾನಿಗಳಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದಾರೆ.

ನಮ್ಮಮ್ಮ ಸೂಪರ್ ಸ್ಟಾರ್, ರಾಜ ರಾಣಿ ಅಂತಹ ಕಾರ್ಯಕ್ರಮಗಳ ತೀರ್ಪುಗಾರ್ತಿಯಾಗಿಯೂ ಕಾಣಿಸಿಕೊಳ್ಳುತ್ತಿರುವಂತಹ ತಾರಾ ಅನುರಾಧವರು ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದರಂತೆ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ ಅಭಿ ಸಿನಿಮಾದ ಮೂಲಕ

2003ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸ್ಯಾಂಡಲ್ವುಡ್ ಕ್ವೀನ್, ಮೋಹಕ ತಾರೆ ರಮ್ಯಾ (Ramya) ಕೂಡ ಹಲವು ವರ್ಷಗಳ ನಂತರ ಹಾಸ್ಟೆಲ್ ಹುಡುಗರು(Hostel Hudugaru) ಸಿನಿಮಾದ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡಿದ್ದು, ಯಶಸ್ವಿ ಸಿನಿಮಾಗಳ ಮೂಲಕ ಮತ್ತೊಂದು ಪರ್ವವನ್ನು ಸೃಷ್ಟಿ ಮಾಡಿಕೊಳ್ಳಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಅದರಂತೆ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಕೂಡ 2೦೦2ರಲ್ಲಿ ನೀಲ ಮೇಘ ಶಾಮ (Neela Megha Shama) ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ತಮ್ಮ ಸೆಂಟಿಮೆಂಟಲ್ ಕ್ಯಾರೆಕ್ಟರ್ಗಳ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು. ಈ ಮೂವರು ಸ್ಟಾರ್ ನಟಿಯರು ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡಿರುವಂತಹ ಫೋಟೋ ಸದ್ಯ ನೆಟ್ಟಿಗರನ್ನು ಆಕರ್ಷಿಸುತ್ತಿದ್ದು, ತಮ್ಮ ನೆಚ್ಚಿನ ನಟಿಯರನ್ನು ಒಟ್ಟಾಗಿ ಕಂಡು ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

Leave a Comment