ಕನ್ನಡದ ಚಂದನವನದ ತಾರೆಗಳ ಬಗ್ಗೆ ನಮಗೆ ಗೊತ್ತೇ ಇರುತ್ತದೆ, ಕಪ್ಪು ಬಿಳುಪು ಚಿತ್ರಗಳ ಕಾಲದಿಂದಲೂ ನಮ್ಮ ಕನ್ನಡದ ಚಂದನವನದಲ್ಲಿ ಹಲವಾರು ನಟ ನಟಿಯರು ತಮ್ಮದೇ ಆದ ಚಾಪು ಮೂಡಿಸಿದ್ದಾರೆ ಅದರಲ್ಲಿಯೂ ನಟಸಾರ್ವಭೌಮ ಡಾ. ರಾಜ್ ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ಮಂಡ್ಯದ ಗಂಡು ಅಂಬರೀಷ್, ಆಟೋರಾಜಾ ಶಂಕರನಾಗ್ ಹೀಗೆ ಇನ್ನೂ ಹಲವಾರು ನಟರು ಆರತಿ, ಭಾರತಿ, ಮಂಜುಳಾ, ಶೃತಿ, ಪಂಡ್ರಿ ಬಾಯಿ, ಸುಮಲತಾ ಸೇರಿದಂತೆ ಬಹುತೇಕರು ಆಯಾ ಕಾಲಕ್ಕೆ ಸುವರ್ಣ ಯುಗವನ್ನೇ ಸೃಷ್ಟಿಸಿದ್ದಾರೆ ಎನ್ನುವಲ್ಲಿ ಸಂಶಯವೇ ಇಲ್ಲ.
ಹೀಗೆ ನಡೆದು ಬಂದ ನಮ್ಮ ಕನ್ನಡದ ಹೆಮ್ಮೆಯ ಚಲನಚಿತ್ರ ಮಂಡಳಿಯನ್ನು ಇವತ್ತಿನ ಕಾಲಕ್ಕೆ ಆಳುತ್ತಿರುವವರಲ್ಲಿ ಡಿ ಬಾಸ್ ದರ್ಶನ್, ದೊಡ್ಮನೆ ಹುಡ್ಗ ಪುನೀತ್ ರಾಜಕುಮಾರ್, ಅಭಿನಯ ಚಕ್ರವರ್ತಿ ಸುದೀಪ್, ಕರುನಾಡ ಕರಿಯ ದುನಿಯಾ ವಿಜಯ್, ಯಶ್, ನೆನಪಿರಲಿ ಪ್ರೇಮ್, ದ್ರುವ ಸರ್ಜಾ, ಶ್ರೀಮುರುಳಿ, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಹಲವಾರು ನಟರು
ಹಾಗೂ ರಾಧಿಕಾ ಪಂಡಿತ್, ಆಶಿಕಾ ರಂಗನಾಥ್, ರಾಗಿಣಿ, ರಶ್ಮಿಕಾ ಮಂದಣ್ಣ, ರಚಿತಾ ರಾಮ್ ಒಳಗೊಂಡಂತೆ ಇನ್ನೂ ಹಿಚ್ಚಿನ ನಟಿಯರು ಪ್ರಮುಖರಾಗಿದ್ದಾರೆ.
ಸಾಮಾನ್ಯವಾಗಿ ಎಲ್ಲರಲ್ಲೂ ಒಂದು ಸಂಶಯ ಇದ್ದೇ ಇರುತ್ತದೆ ಅದೇನೆಂದರೆ ಈ ನಮ್ಮ ಅಭಿಮಾನಿಗಳ ಆರಾಧ್ಯ ದೈವಗಳು ಅಂದರೆ ಚಂದನವನದ ತಾರೆಗಳು, ಬಾಕ್ಸ್ ಆಫೀಸ್ ಸುಲ್ತಾನರು, ಗಾಂಧಿ ನಗರದಲ್ಲಿ ಸದ್ದು ಮಾಡುವಂತಹ ಹುಲಿಗಳು ತಮ್ಮ ಚಿತ್ರಗಳಿಗೆ ಎಷ್ಟು ಸಂಭಾವಣೆಯನ್ನು ಪಡೆಯುತ್ತಾರೆ ಎಂಬುದು.
ಹಾಗಾದರೆ ನಾವೀಗ ಪ್ರಮುಖ ಸ್ಟಾರ್ ನಟರುಗಳು ತಮ್ಮ ಚಿತ್ರಗಳಿಗೆ ಎಷ್ಟು ಸಂಭಾವಾನೆಯನ್ನು ಪಡೆಯುತ್ತಾರೆ ಎಂಬುದರ ಬಗ್ಗೆ ಒಮ್ಮೆ ನೋಡೋಣ ಬನ್ನಿ
ನಾವು ಇಲ್ಲಿ ನೀಡುವ ಮಾಹಿತಿ ನಮಗೆ ತಿಳಿದ ಮೂಲಗಳಿಂದ ಸಂಗ್ರಹಿಸಲ್ಪಟ್ಟದ್ದಾಗಿರುತ್ತದೆ
ಮೊದಲಿಗೆ ನಟ ಪ್ರಜ್ವಲ್ ದೇವರಾಜ್ ಅವರು ತಮ್ಮ ಚಿತ್ರಗಳಿಗೆ ಎಷ್ಟು ಸಂಭಾವನೆಯನ್ನು ಪಡೆಯುತ್ತಾರೆ ಎಂಬುದನ್ನು ನೋಡುವುದಾದರೆ, ಅವರು ಒಂದು ಚಿತ್ರಕ್ಕೆ ಒಂದರಿಂದ ಒಂದೂವರೆ ಕೋಟಿಯ ವರೆಗೆ ಸಂಭಾವಣೆಯನ್ನು ಪಡೆಯುತ್ತಾರೆ ಇನ್ನೂ ನಟ ಅಜಯ್ ರಾವ್ ಕೂಡ ಒಂದು ಚಿತ್ರಕ್ಕೆ ಒಂದರಿಂದ ಒಂದೂವರೆ ಕೋಟಿಯಷ್ಟು ಸಂಭಾವಣೆಯನ್ನ ಪಡೆಯುತ್ತಾರೆ.
ಇನ್ನು ನಮ್ಮ ನಿಮ್ಮೆಲ್ಲರ ನೆಚ್ಚಿನ ನೆನಪಿರಲಿ ಪ್ರೇಮ್ ರವರು ಒಂದು ಚಿತ್ರಕ್ಕೆ ಒಂದೂವರೆ ಇಂದ ಎರಡು ಕೋಟಿಗಳ ವರೆಗೆ ಸಂಭಾವಣೆಯನ್ನು ಪಡೆದರೆ ನಟ ಶರಣ್ ಕೂಡ ಅಷ್ಟೇ ಅಂದರೆ ಒಂದೂವರೆ ಇಂದ ಎರಡು ಕೋಟಿಗಳನ್ನೇ ಪಡೆಯುತ್ತಾರೆ ದುನಿಯಾ ವಿಜಯ್ ರವರು ಒಂದು ಚಿತ್ರಕ್ಕೆ ಎರಡರಿಂದ ಮೂರು ಕೋಟಿಗಳ ವರೆಗಿನ ಸಂಭಾವಣೆಯನ್ನು ಪಡೆದರೆ ಇನ್ನೂ ಶ್ರೀಮುರಳಿ ಹಾಗೂ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ರವರು ಒಂದು ಚಿತ್ರಕ್ಕೆ ಮೂರರಿಂದ ನಾಲ್ಕು ಕೋಟಿಗಳ ವರೆಗೆ ಸಂಭಾವನೆಯನ್ನು ಪಡೆಯುತ್ತಾರೆ.
ಅಷ್ಟೇ ಅಲ್ಲದೇ ರಕ್ಷಿತ್ ಶೆಟ್ಟಿ ಅವರು ಒಂದು ಚಿತ್ರಕ್ಕೆ ನಾಲ್ಕರಿಂದ ಐದು ಕೋಟಿಗಳ ವರೆಗಿನ ಸಂಭಾವಣೆಯನ್ನು ಪಡೆದರೆ ಇನ್ನೂ ಸೂಪರ್ ಸ್ಟಾರ್ ಉಪೇಂದ್ರ ಸೇರಿದಂತೆ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ದ್ರುವ ಸರ್ಜಾ ರವರು ತಮ್ಮ ಒಂದು ಚಿತ್ರಕ್ಕೆ ಐದರಿಂದ ಆರು ಕೋಟಿಗಳ ವರೆಗೆ ಸಂಭಾವನೆಯನ್ನು ಪಡೆಯುತ್ತಿದ್ದಾರೆ.
ಇನ್ನೂ ಬಾಕ್ಸ್ ಆಫೀಸ್ ಸುಲ್ತಾನ್ ಅಭಿನಯ ಚಕ್ರವರ್ತಿ ಸುದೀಪ್ ಅವರು ಒಂದು ಚಿತ್ರಕ್ಕೆ ಎಂಟರಿಂದ ಹತ್ತು ಕೋಟಿಗಳ ವರೆಗಿನ ಸಂಭಾವನೆಯನ್ನು ಪಡೆದರೆ ಇನ್ನೂ ನಮ್ಮನ್ನು ಅಗಲಿದ ಅಭಿಮಾನಿಗಳ ಅಪ್ಪು ದೊಡ್ಮನೆ ಹುಡ್ಗ ಪುನೀತ್ ರಾಜಕುಮಾರ್ ಅವರು ಒಂದು ಚಿತ್ರಕ್ಕೆ ಒಂಬತ್ತರಿಂದ ಹತ್ತು ಕೋಟಿಗಳನ್ನು ಪಡೆಯುತ್ತಿದ್ದರು
ಮತ್ತು ಕರ್ನಾಟಕದ ಡಿ ಬಾಸ್ ದರ್ಶನ್ ರವರು ಒಂದು ಚಿತ್ರಕ್ಕೆ ಹತ್ತರಿಂದ ಹನ್ನೊಂದು ಕೋಟಿಗಳನ್ನು ಸಂಭಾವಾನೆಯನ್ನಾಗಿ ಪಡೆಯುತ್ತಿದ್ದಾರೆ ಇನ್ನೂ ನಮ್ಮ ಯಶ್ ಹತ್ತರಿಂದ ಹನ್ನೆರಡು ಕೋಟಿಗಳ ಹೆಚ್ಚಿನ ಸಂಭಾವನೆಯನ್ನ ಪಡೆಯುತ್ತಾರೆ.